ಗಿಡಮೂಲಿಕೆ ಚಿಕಿತ್ಸೆಯಿಂದಲೂ ಪಶುಗಳ ರಕ್ಷಣೆ ಮಾಡಲು ಸಾಧ್ಯ

KannadaprabhaNewsNetwork |  
Published : Jul 18, 2025, 12:45 AM IST
ಪೊಟೋ: 16ಆರ್‌ಪಿಟಿ01ಪಶು ವೈದ್ಯಕೀಯ ಚಿಕಿತ್ಸೆಯ ಸವಾಲುಗಳಿಗೆ ಪಶು ಅಯುರ್ವೇದ ಮತ್ತು ಪರ್ಯಾಯ ವಿಜ್ಞಾನ ಪದ್ಧತಿ ಕಾರ್ಯಾಗಾರವನ್ನು ಶಾಸಕ ಅರಗ ಜ್ಞಾನೇಂದ್ರ ಉದ್ಘಾಟಿಸಿದರು. | Kannada Prabha

ಸಾರಾಂಶ

ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಪಾರಂಪರಿಕ ಅಯುರ್ವೇದ ಪದ್ಧತಿಯಲ್ಲಿ ಗಿಡಿಮೂಲಕೆ ಔಷಧಿಯ ಗುಣ ಹೊಂದಿರುವ ಸಸ್ಯಗಳನ್ನು ಬಳಸುವುದರಿಂದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವಂತ ಮಾರಕ ರೋಗವನ್ನು ಗುಣಪಡಿಸಬಹುದು ಎಂದು ಶಾಸಕ ಅರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ರಿಪ್ಪನ್‍ಪೇಟೆ: ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಪಾರಂಪರಿಕ ಅಯುರ್ವೇದ ಪದ್ಧತಿಯಲ್ಲಿ ಗಿಡಿಮೂಲಕೆ ಔಷಧಿಯ ಗುಣ ಹೊಂದಿರುವ ಸಸ್ಯಗಳನ್ನು ಬಳಸುವುದರಿಂದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವಂತ ಮಾರಕ ರೋಗವನ್ನು ಗುಣಪಡಿಸಬಹುದು ಎಂದು ಶಾಸಕ ಅರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.ರಿಪ್ಪನ್‍ಪೇಟೆ ಸಮೀಪದ ಹುಂಚ ಶ್ರೀಸಿದ್ಧಿವಿನಾಯ ಸೇವಾ ಸಮಿತಿ ಹೊಂಬುಜ ಜೈನಮಠ ರೋಟರಿ ಕ್ಲಬ್ ಕೋಣಂದೂರು ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಪಶು ವೈದ್ಯಕೀಯ ಚಿಕಿತ್ಸೆಯ ಸವಾಲುಗಳಿಗೆ ಪಶು ಅಯುರ್ವೇದ ಮತ್ತು ಪರ್ಯಾಯ ವಿಜ್ಞಾನ ಪದ್ಧತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಹೈನುಗಾರಿಕೆಗೆ ಹೆಚ್ಚು ಅದ್ಯತೆ ನೀಡಿದ್ದರೂ ಇಂದಿನ ದಿನಗಳಲ್ಲಿ ಜಾನುವಾರುಗಳಲ್ಲಿ ಸಹ ಮಾರಕ ರೋಗಗಳು ಉಲ್ಬಣಗೊಳ್ಳುತ್ತಿದ್ದು ಸಾಕಾಣಿಕೆ ಸಹ ಕಷ್ಟಕರವಾಗಿದೆ ಎಂದರು.

ಪಶು ಚಿಕಿತ್ಸೆಯಲ್ಲಿ ಪಶುವೈದ್ಯರು ಅಲೋಪತಿ ಡ್ರಗ್ಸ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಯಾಕೆಂದರೆ ಅವರುಗಳು ಪದವಿಯಲ್ಲಿ ಓದುವುದು ಕೇವಲ ಅಲೋಪತಿ ಮೆಡಿಸಿನ್ ಬಗ್ಗೆ ಮಾತ್ರ. ಅದರೆ ಜಾನುವಾರು ಚಿಕಿತ್ಸೆಗೆ ಕಡಿಮೆ ಬೆಲೆಯ ಪಿನಿಸಿಲಿನ್ ಕೆಲಸ ಮಾಡುತ್ತಿಲ್ಲ. ಆದರೆ, ಸಾವಿರಾರು ರುಪಾಯಿ ಬೆಲೆಯ ಹೊಸ ಹೊಸ ಅಂಟಿಬಯೋಟೆಕ್ ಉಪಯೋಗಿಸುವುದು ರೈತರಿಗೆ ಕಷ್ಟ ಸಾಧ್ಯವಾಗಿದೆ. ಅದ್ದರಿಂದ ಸರ್ಕಾರವೂ ಪಶುವೈದ್ಯ ಕಾಲೇಜಿನಲ್ಲಿ ಅಯುರ್ವೇದ (ಬಿವಿಎಎಂಎಸ್) ವಿಜ್ಞಾನ ಹೋಮಿಯೋಪತಿ ವಿಜ್ಞಾನ ವಿಷಯದಲೂ ಪದವಿ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ಯುವಮುಖಂಡ ಆಭೀಷೇಕ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ವೈದ್ಯರಾದ ಡಾ.ಜೀವಂದರ್, ಮೂಲ್ ಜನರಲ್ ಮ್ಯಾನೇಜರ್ ಡಾ.ಕೃಷ್ಣರೆಡ್ಡಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಬಾಬುರತ್ನ, ರೋಟರಿ ಕ್ಲಬ್ ಸದಾಶಿವಾ, ಗ್ರಾಪಂ ಅಧ್ಯಕ್ಷೆ ಸುಮಂಗಲ ದೇವರಾಜ್, ಶ್ರೀಧರ ಕಡಸೂರು, ಜೆ.ಪಿ.ಕಿರಣ್, ಡಾ.ಪಣಿರಾಜ್, ಡಾ.ಮುರುಳಿಧರ, ಈರನಬೈಲು ನಾಗೇಂದ್ರ, ಆಶ್ವತ್‍ಭಟ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು