ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾವೇರಿ ಮೂಲ ಸ್ವರೂಪ ಸಂರಕ್ಷಣಾ ಸಮಿತಿಯ ಪದಾಧಿಕಾರಿ ಉಳ್ಳಿಯಡ ಎಂ.ಪೂವಯ್ಯ ಮಾತನಾಡಿ, ದೇವಯ್ಯ ಅವರ ಸಾಹಸ ಮತ್ತು ಬಲಿದಾನಗಳ ಹಿನ್ನೆಯಲ್ಲಿ ಅವರಿಗೆ ಸೇವಾ ಪದಕಗಳಲ್ಲಿ ಮೊದಲನೆಯದಾದ ಪರಮ ವೀರ ಚಕ್ರವನ್ನೆ ಮರಣೋತ್ತರವಾಗಿ ಪ್ರದಾನ ಮಾಡಬೇಕಾಗಿತ್ತು ರಾಷ್ಟ್ರದೆಡೆಗಿನ ಅವರ ಅಚಲ ನಿಷ್ಠೆ, ದೇಶಪ್ರೇಮ ಎಲ್ಲರಿಗೂ ಮಾದರಿ ಎಂದು ಹೇಳಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ವಾಯುದಳದ ಜೂನಿಯರ್ ವಾರಂಟ್ ಆಫೀಸರ್ ಬಾಳೆಯಡ ಮಂದಪ್ಪ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಕೊಡಗಿನ ಇಬ್ಬರು ಮಹಾವೀರ ಚಕ್ರವನ್ನು ಪಡೆದಿದ್ದಾರೆ. ಅಜ್ಜಮಾಡ ದೇವಯ್ಯ ಅವರ ಬಲಿದಾನದ ಬಳಿಕ 23 ವರ್ಷಗಳ ನಂತರ ಮರಣೋತ್ತರವಾಗಿ ಅವರಿಗೆ ಮಹಾವೀರ ಚಕ್ರವನ್ನು 1988ರಲ್ಲಿ ಪ್ರದಾನ ಮಾಡಲಾಗಿತ್ತು. ಕೊಡಗಿನವರೇ ಆದ ಲೆ.ಜ.ಪುಟ್ಟಿಚಂಡ ಗಣಪತಿ ಅವರು ಇದೇ ಗೌರವವನ್ನು ಪಡೆದ ಮತ್ತೊಬ್ಬರಾಗಿದ್ದಾರೆ ಎಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಡಿವೈಎಸ್‌ಪಿ ಪಿ.ಎ.ಸೂರಜ್, ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಪ್ರೊ.ಮೇಚಿರ ರವಿಶಂಕರ್ ನಾಣಯ್ಯ, ಕೊಡಗು ವಿದ್ಯಾಲಯ ಶಾಲೆಯ ಎನ್‌ಸಿಸಿ ಅಧಿಕಾರಿ ಮೇಜರ್ ದಾಮೋದರ್ ಗೌಡ ಐ., ಮಡಿಕೇರಿ ಕೊಡವ ಸಮಾಜದ ಆಡಳಿತ ಮಂಡಳಿ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ, ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರುಗಳಾದ ಮೂವೆರ ಜಯರಾಂ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಜಿಲ್ಲಾ ಸ್ಥಾನಿಕ ಆಯುಕ್ತ ಹೆಚ್.ಆರ್.ಮುತ್ತಪ್ಪ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಸಾಹಿತಿ ಬೊಜ್ಜಂಗಡ ಡಾ.ಅವನಿಜ ಸೋಮಯ್ಯ, ಅಜ್ಜಮಾಡ ಒಕ್ಕದ ಬೆಳ್ಯಪ್ಪ, ಅಜ್ಜಮಾಡ ಕಾರ್ಯಪ್ಪ, ಅಜ್ಜಮಾಡ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಅಜ್ಜಮಾಡ ಮಂಜುನಾಥ್, ಮಹೇಶ್, ಅಜ್ಜಮಾಡ ಅಯ್ಯಣ್ಣ, ಅಜ್ಜಮಾಡ ಜಗತ್, ಅಜ್ಜಮಾಡ ಸುಮನ್, ಅಜ್ಜಮಾಡ ದೀಕ್ಷ, ಅಜ್ಜಮಾಡ ಅನಿಕಾ, ದಾನಿಗಳಾದ ಉಳ್ಳಿಯಡ ನಂದಾ ನಂಜಪ್ಪ, ಮಾದೇಟಿರ ಟಿ.ಪ್ರಕಾಶ್ ತಿಮ್ಮಯ್ಯ, ನಿವೃತ್ತ ಲೆ.ಕರ್ನಲ್ ಮುಲ್ಲೇರ ಕಾವೇರಪ್ಪ, ಮಾಜಿ ಸೈನಿಕರ ಸಂಘದ ಮಡಿಕೇರಿ ಅಧ್ಯಕ್ಷ ಪಾನಿಕುಟ್ಟಿರ ಕುಟ್ಟಪ್ಪ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಸುಬೇದಾರ್ ಮೇಜರ್ ನಾಟೋಳಂಡ ಸುರೇಶ್ ಸೋಮಯ್ಯ, ಮಾಜಿ ಸೈನಿಕರ ಸಂಘದ ಜಂಟಿ ಕಾರ್ಯದರ್ಶಿ ಸುಬೇದಾರ್ ಮೇಜರ್ ವಾಸಪ್ಪ, ಕುಟ್ಟಂಡ ನಂದ ಮಾದಪ್ಪ, ಮಾದೆಯಂಡ ಕೆ.ನಾಚಪ್ಪ, ಕನ್ನಂಡ ಸುರೇಶ್, ಕೂಪದಿರ ಮುತ್ತಣ್ಣ, ತೊತ್ತಿಯಂಡ ಗಣಪತಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೆ.ಎಂ.ಬಿ.ಗಣೇಶ್, ಸಮಾಜ ಸೇವಕ ಮಂಡೇಪಂಡ ರತನ್ ಕುಟ್ಟಯ್ಯ, ಮಣವಟ್ಟಿರ ಚಿಣ್ಣಪ್ಪ, ನಾಪೋಕ್ಲು ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸೈನಿಕರ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ಆರ್.ಶೆಟ್ಟಿ, ಕೊಡವ ಮಕ್ಕಡ ಕೂಟದ ಸದಸ್ಯರು, ನಿವೃತ್ತ ಯೋಧರು, ಅಭಿಮಾನಿಗಳು, ಸೇರಿದಂತೆ ಅಜ್ಜಮಾಡ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
..........................ಅಯ್ಯಪ್ಪಗೆ ಉಡುಗೊರೆವೀರ ಸೇನಾನಿಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪ್ರತಿವರ್ಷ ಅಚ್ಚುಕಟ್ಟಾಗಿ ಆಚರಿಸುವ ಮೂಲಕ ದೇಶಭಕ್ತಿ ಮತ್ತು ಸೇನಾ ಪರಂಪರೆಯ ಕುರಿತು ಯುವ ಸಮೂಹದಲ್ಲಿ ಸ್ಫೂರ್ತಿಯನ್ನು ತುಂಬುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಕಾರ್ಯವನ್ನು ಶ್ಲಾಘಿಸಿ ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅವರು ಏರ್ ಫೋರ್ಸ್ ಲಾಂಛನದ ಬ್ಯಾಡ್ಜ್ ನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.