ಕನ್ನಡಪ್ರಭ ವಾರ್ತೆ ಗದಗ
ತಾಲೂಕಿನ ಲಕ್ಕುಂಡಿ ಗ್ರಾಮದ ಸರ್ಕಾರಿ ಮಾದರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.ಮಕ್ಕಳು ವಿವಿಧ ಮಹನೀಯರ ಛದ್ಮವೇಷ ಧರಿಸಿ ಗಮನ ಸೆಳೆದರು.
ಅಧ್ಯಕ್ಷತೆ ವಹಿಸಿದ್ದ ೭ನೇ ತರಗತಿ ವಿದ್ಯಾರ್ಥಿ ಕಾರ್ತಿಕ ಪಾಟೀಲ ಮಾತನಾಡಿ, ದೇಶದ ಪ್ರಥಮ ಪ್ರಧಾನಿ ಎಲ್ಲ ಮಕ್ಕಳಿಗೆ ಚಾ ಚಾ ಎಂದೇ ಪ್ರೀಯರಾಗಿದ್ದ ಜವಾರಲಾಲ ನೆಹರು ಅವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಣೆಗೆ ತಂದಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ. ಈ ಸಂತಸವನ್ನು ಈ ಶಾಲೆಯಲ್ಲಿ ನಮ್ಮ ಎಲ್ಲ ಮಕ್ಕಳಿಗೆ ವೇದಿಕೆಯ ಮೇಲೆ ಕುಳಿತುಕೊಳ್ಳುವ ಅವಕಾಶ ಕಲ್ಪಿಸಿದೆ. ಮಕ್ಕಳ ಬಗ್ಗೆ ಇರುವ ಗೌರವವನ್ನು ಗ್ರಾಪಂ ಅಧ್ಯಕ್ಷರು,ಶಾಲಾ ಶಿಕ್ಷಕರು,ಶಾಲಾ ಅಭಿವೃದ್ಧಿ ಸಮಿತಿ ಮಕ್ಕಳ ಬಗ್ಗೆ ಇರುವ ಕಾಳಜಿ ನಮಗೆ ಪ್ರೋತ್ಸಾಹ ತಂದಿದ್ದು ಇಂದಿನ ಮಕ್ಕಳೇ ನಾಳೆಯೇ ಪ್ರಜೆಗಳು ಎಂಬುದನ್ನು ಮನವರಿಕೆ ಮಾಡಿದ್ದು ಹೆಮ್ಮೆ ತಂದಿದೆ ಎಂದರು.ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಜವಾಹರಲಾಲ್ ನೆಹರು ಮಕ್ಕಳ ಮೇಲೆ ಇರುವ ಪ್ರೀತಿಗಾಗಿ ಮಕ್ಕಳ ದಿನವನ್ನಾಗಿ ಆಚರಣೆಗೆ ತಂದಿದ್ದರಿಂದ ಇಂದು ನಮಗೆಲ್ಲ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ಅವರ ಆರೋಗ್ಯ, ಶಿಕ್ಷಣದ ಬಗ್ಗೆ ಜವಾಬ್ದಾರಿ ಬಂದಿದೆ. ಅವರು ಹಾಕಿ ಕೊಟ್ಟ ಮಾರ್ಗದರ್ಶನದಿಂದಲೇ ಇಂದು ದೇಶದ ಅಭಿವೃದ್ಧಿ ಸಾಗುತ್ತಿದೆ ಎಂದರು.
ಈ ವೇಳೆ ಬ್ರಹ್ಮಕುಮಾರ ಬಿ.ಕೆ. ಸರೋಜಕ್ಕ, ಪ್ರಧಾನ ಗುರುಮಾತೆ ಎಸ್.ಎಫ್ ಬಾಳಿಹಳ್ಳಿಮಠ, ಎಂ.ಪಿ. ಹೊನ್ನಾಪೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಶ್ವಿನಿ ಹಿರೇಮಠ ಮಾತನಾಡಿದರು. ಶ್ರವಣ ಉಕ್ಕಲಿ ಪ್ರದರ್ಶನ ನೀಡಿದ ವೀರಗಾಸೆ ನೃತ್ಯ ಗಮನ ಸೆಳೆದರೆ, ಪ್ರಜ್ವಲ್ ಬಿಳೆಕುದರಿ ವಿದ್ಯಾರ್ಥಿಯ ಶ್ರೀಕೃಷ್ಣನ ಛದ್ಮವೇಷ ಆಕರ್ಷಿಸಿತು. ಭಾಷಣ,ನೃತ್ಯ ಕಾರ್ಯಕ್ರಮಗಳು ಜರುಗಿದವು.ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗಮ್ಮ ಹಾಲಿನವರ, ಉಪಾಧ್ಯಕ್ಷ ಗವಿಶಿದ್ದಪ್ಪ ಯಲಿಶಿರುಂಜ, ರಾಜೇಸಾಬ್ ಗುಡಗೇರಿ, ಬಸವರಾಜ ಮಾರನಬಸರಿ, ವಿರುಪಾಕ್ಷಯ್ಯ ಪತ್ರಿಮಠ, ಪಾರ್ವತಿ, ಪಿ.ಎಸ್. ಶಿರೋಳ, ವಿದ್ಯಾರ್ಥಿಗಳಾದ ತರುಣ ಹಾಲಿನವರ, ಸಂಗೀತಾ, ಶರಣಬಸಪ್ಪ, ಶೇಖರಯ್ಯ ಪತ್ರಿಮಠ ಇದ್ದರು. ಎಸ್.ಜಿ.ಕುರುವತ್ತಿಗೌಡ್ರ ನಿರೂಪಿಸಿದರು. ಅಂಜನಾ ಕರಿಯಲ್ಲಪ್ಪನವರ ವಂದಿಸಿದರು.
ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿ.ಎಚ್. ಪಾಟೀಲ ಪ್ರೌಢಶಾಲೆ ಹಾಗೂ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.