ನಾಲೆಗಳ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Apr 7, 2025 12:33 AM

ಸಾರಾಂಶ

ನಾಲೆಗಳು ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತಿಲ್ಲ. ನೀರು ಹೆಚ್ಚು ವ್ಯರ್ಥವಾಗುತ್ತಿದೆ. ಇದನ್ನು ಮನಗೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿ ಕೈಗೊತ್ತಿಕೊಳ್ಳಲಾಗಿದೆ. ಕ್ಷೇತ್ರಾದ್ಯಂತ ನಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ನೀರು ಬಹಳಷ್ಟು ಪೋಲಾಗುತ್ತಿರುವುದರಿಂದ ಮದ್ದೂರು ಕ್ಷೇತ್ರದಲ್ಲಿ ನಾಲೆಗಳ ಆಧುನಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ರೈತರಿಗೆ ನೆರವಾಗುವ ಕೆಲಸ ನನ್ನದಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಸಮೀಪದ ದೇವರಹಳ್ಳಿ-ಕುರಿಕೆಂಪನದೊಡ್ಡಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಲೋಕಸರ ಶಾಖಾ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಾಲೆಗಳು ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತಿಲ್ಲ. ನೀರು ಹೆಚ್ಚು ವ್ಯರ್ಥವಾಗುತ್ತಿದೆ. ಇದನ್ನು ಮನಗೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿ ಕೈಗೊತ್ತಿಕೊಳ್ಳಲಾಗಿದೆ. ಕ್ಷೇತ್ರಾದ್ಯಂತ ನಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಪದ್ಧತಿಗಳನ್ನು ರೈತರು ಅನುಸರಿಸಿಕೊಳ್ಳಬೇಕು. ಒಂದೇ ಬೆಳೆಗೆ ಜೋತು ಬೀಳದೆ ವಿವಿಧ ಬೆಳೆಗಳ ಬಗ್ಗೆ ಹೆಚ್ಚಿನ ಆಶಕ್ತಿ ಬೆಳೆಸಿ ಕೊಂಡು ಬೇಸಾಯ ಮಾಡಿದರೆ ಆರ್ಥೀಕ ಪ್ರಗತಿ ಸಾಧಿಸಬಹುದು ಎಂದರು.

ಮುಂದಿನ ಹತ್ತು ದಿನಗಳಲ್ಲಿ ಹೆಬ್ಬಕವಾಡಿ ನಾಲೆ ಆಧುನೀಕರಣವನ್ನು ಕೈಗೆತ್ತಿ ಕೊಳ್ಳಲಾಗುವುದು. ಮದ್ದೂರಿನ ಕೆಮ್ಮಣ್ಣು ನಾಲೆ ಅಭಿವೃದ್ಧಿ ಸಹ ಪ್ರಗತಿಯಲ್ಲಿದ್ದು, ಕ್ಷೇತ್ರದ ನಾಲೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕುರಿಕೆಂಪನದೊಡ್ಡಿ ಗ್ರಾಮದ ಮುಖಂಡ ಯೋಗೇಶ್ ಬೂಸಿಗೌಡ ಅವರು ಶಾಸಕ ಉದಯ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚೆಲುವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೇವರಹಳ್ಳಿ ದೊಡ್ಡೇಗೌಡ, ಗ್ರಾಪಂ ಅಧ್ಯಕ್ಷ ಶಿವಲಿಂಗೇಗೌಡ, ಸದಸ್ಯ ದೇವರಹಳ್ಳಿ ಡಿ.ಎನ್. ರಘು, ಮುಖಂಡರಾದ ಮೊಜ್ಜೆ ಕೃಷ್ಣ, ಜಯರಾಮು, ಪುಟ್ಟಸ್ವಾಮಚಾರಿ, ಅರ್ಕೇಶ್, ದೇವರಹಳ್ಳಿ ನಂದೀಶ್, ವಿಷಕಂಠೇಗೌಡ, ರಮೇಶ್, ಅನಿಲ್, ಬಿರೇಶ್, ಮಾಳಗಯ್ಯ, ಸಂತೋಷ್, ಮುರುಳಿ, ಶ್ರೀಧರ್, ನಾರಾಯಣ ಸೇರಿದಂತೆ ಮತ್ತಿತರಿದ್ದರು.

Share this article