ಹೈಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಚುನಾವಣೆ ಸಿದ್ಧತೆ

KannadaprabhaNewsNetwork |  
Published : Mar 15, 2024, 01:21 AM IST
ಎಚ್ಕೆಇಸಂಸ್ಥೆ ಚುನಾವಣಯಲ್ಲಿ ತಮ್ಮದೇ ಪೆನಲ್‌ ಮಾಡಿಕೊಂಡು ಅಧ್ಯಕ್ಷ ಹುದ್ದೆಗೆ ಕಣದಲ್ಲಿರುವ ಎಂಎಲ್‌ಸಿ ಶಶಿಲ್‌ ನಮೋಶಿ ನವ ಗ್ಯಾರಂಟಿ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಕಲ್ಯಾಣ ನಾಡಿನ ಪ್ರತಿಷ್ಠ ಹೈಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಚುನವಣೆ ಕಣದಲ್ಲಿರುವ ಎಂಎಲ್‌ಸಿ ಶಶೀಲ್‌ ನಮೋಶಿ ಮತ್ತವರ ಪೆನಲ್‌ ಸದಸ್ಯರ ಇಂದು ಸಂಸ್ಥೆಯ ಸಮಗ್ರ ಸುಧಾರಣೆಗೆ ನವ ಗ್ಯಾರಂಟಿ ಯೋಜನೆ ಪ್ರಕಟಿಸಿ ಗಮನ ಸೆಳದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ನಾಡಿನ ಪ್ರತಿಷ್ಠ ಹೈಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಚುನವಣೆ ಕಣದಲ್ಲಿರುವ ಎಂಎಲ್‌ಸಿ ಶಶೀಲ್‌ ನಮೋಶಿ ಮತ್ತವರ ಪೆನಲ್‌ ಸದಸ್ಯರ ಇಂದು ಸಂಸ್ಥೆಯ ಸಮಗ್ರ ಸುಧಾರಣೆಗೆ ನವ ಗ್ಯಾರಂಟಿ ಯೋಜನೆ ಪ್ರಕಟಿಸಿ ಗಮನ ಸೆಳದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶೀಲ್‌ ನಮೋಶಿ, ತಮ್ಮನ್ನು ಅಧ್ಯಕ್ಷರನ್ನಾಗಿ ಹಾಗೂ ತಮ್ಮ ಇಡೀ ಪೆನಲ್‌ಗೆ ಸಂಸ್ಥೆಯ ಮತದಾರರು ಗೆಲ್ಲಿಸಿದರೆ ವರ್ಷದೊಳಗೆ ನವ ಗ್ಯಾರಂಟಿ ಜಾರಿಗೆ ತರೋದಾಗಿ ಹೇಳಿದರು.

ನವ ಗ್ಯಾರಂಟಿ: ಎಚ್ಕೆಇ ಸಂಸ್ಥೆಯ ಬೋಧಕ ಸಿಬ್ಬಂದಿಗೆ 3 ತಿಂಗಳಲ್ಲಿ 7 ನೇ ವೇತನ ಜಾರಿ, ಬೋಧಕೇತರ ಸಿಬ್ಬಂದಿ ವೇತನ ಹೆಚ್ಚಳ, ಸಂಸ್ಥೆಯ ಸದಸ್ಯತ್ವಕ್ಕೆ ಸೂಕ್ತ ರೀತಿಯಲ್ಲಿ ಚಾಲನೆ, ಸಂಸ್ಥೆಯ ಸದ್ಯರಿಗೆ ಆರೋಗ್ಯ ವಿಮೆ, ಬಸವೇಶ್ವರ, ಸಂಗಮೇಶ್ವರ ಆಸ್ಪತ್ರೆಗಳ ನವೀಕರಣ, ಎಚ್ಕೆಇ ಎಲ್ಲಾ ಶಾಲೆ, ಕಾಲೇಜುಗಳಲ್ಲಿನ ಶಿಕ್ಷಣ ಗುಣಮಟ್ಟ ಸುಧಾರಣೆ, ಸುಸಜ್ಜಿತ ವಿದ್ಯಾರ್ಥಿ ನಿಲಯಗಳು, ಕ್ರೀಡಾ ಸಂಕೀರ್ಣ ನಿರ್ಮಾಣ, ಮಾನವ ಸಂಪನ್ಮೂಲ ಸರಿಯಾದ ಬಳಕೆಗೆ ಸೂಕ್ತ ಯೋಜನೆ, ಆಡಳಿತ ಮಂಡಳಿಯ ಯಾರೊಬ್ಬರೂ ಸಂಸ್ಥೆಗೆ ಸಂಬಂಧಿಸಿದ ಖರೀದಿ, ಪೂರೈಕೆ, ನಿರ್ಮಾಣದಲ್ಲಿ ಮೂಗು ತೂರಿಸೋದಿಲ್ಲ.

ಬಿಲಗುಂದಿಯಿಂದ ಎಚ್ಕೆಇ ಸಂಸ್ಥೆ ತಮ್ಮ ಕುಟುಂಬಕ್ಕೇ ಹೊಂದುವ ಹುನ್ನಾರ: ಹೊಸ ಸದಸ್ಯತ್ವಕ್ಕೆ ಕೋರ್ಟ್‌ ತಡೆಯಾಜ್ಞೆ ಇಲ್ಲ, ಬೈಲಾದಲ್ಲಿ ಆಡಳಿತ ಮಂಡಳಿ ನಿಲುವೇ ಅಂತಿಮ ಎಂದಿದೆ. ಹೀಗಿದ್ದರೂ ಹೊಸ ಸದಸ್ಯರನ್ನು ಮಾಡಲು ಹಿಂದಿನ ಅಧ್ಯಕ್ಷ ಡಾ. ಬಿಲಗುಂದಿಗೆ ಇಷ್ಟವಿಲ್ಲ, ಸಂಸ್ಥೆಯನ್ನ ತಮ್ಮ ಕುಟುಂಬ ಸುಪರ್ಧಿಗೆ ಪಡೆಯುವ ಹುನ್ನಾರ ಅವರದ್ದಾಗಿತ್ತು, ಅದಕ್ಕೇ ಈಗ ಮಗನನ್ನೆ ಅಧ್ಯಕ್ಷರನ್ನಾಗಿ ನಿಲ್ಲಿಸಿದ್ದಾರೆಂದು ನಮೋಶಿ ದೂರಿದರು.

ಚಿಂತಾಜನಕ ಸ್ಥಿತಿಯಲ್ಲಿರುವ ಬಸವೇಶ್ವರ ಆಸ್ಪತ್ರೆ ಅಭಿವೃದ್ಧಿಗೆ ಸಂಕಲ್ಪಿಸಿರುವೆ, ಪ್ಯಾರಾ ಮೆಡಿಕಲ್‌ ಕೋರ್ಸ್‌ ಆರಂಭಿಸಲಾಗುತ್ತದೆ. ಪಿಡಿಎ ಕಾಲೇಜಲ್ಲಿ ಸಾಫ್ಟವೇರ್‌ ಲ್ಯಾಬ್‌ ಅಭಿವೃದ್ಧಿ ಮಾಡುತ್ತೇವೆ. ಹಿಂದಿನ ಆಡಳಿತ ಮಂಡಳಿಯ ಯಾವ ಆದೇಶಗಳನ್ನು ಹಿಂಪಡೆಯದೆ ತಾವು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸೋದಾಗಿ ನಮೋಶಿ ಭರವಸೆ ನೀಡಿದರು.

ಉಪಧ್ಯಕ್ಷ ಸ್ಥಾನ ಸ್ಪರ್ಧಿ ರಾಜಾ ಭೀಮಳ್ಳಿ, ಆಡಳಿತ ಮಂಡಳಿ ಸ್ಪರ್ಧಿಗಳಾದ ವಿಜಯಕುಮಾರ್ ದೇಶಮುಖ, ಶಿವಶರಣಪ್ಪ ಸಿರಿ, ಅರುಣ ಪಾಟೀಲ್‌, ಡಾ. ಶರಣಬಸವಪ್ಪ ಹರವಾಳ್‌, ಡಾ. ಕೈಲಾಶ ಪಾಟೀಲ್‌, ಪ್ರಶಾಂತ ಮಾನ್ಕರ್‌, ಉದಯಕುಮಾರ್‌ ಚಿಂಚೋಳಿ ಸುದ್ದಿಗೊಷ್ಠಿಯಲ್ಲಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ