ಚನ್ನಗಿರಿ: ಸಾವಯವ ಕೃಷಿ ಪದ್ಧತಿಯಲ್ಲಿ ತೋಟಗಾರಿಕಾ ಪ್ರಮುಖ ಬೆಳೆಗಳಾದ ಮಾವು ಮತ್ತು ತೆಂಗಿನ ಬೆಳೆಗಳನ್ನು ಬೆಳೆದು ಉತ್ತಮವಾದ ಆದಾಯಗಳನ್ನು ಗಳಿಸಲು ಸಾಧ್ಯ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಚನ್ನಗಿರಿ ತಾಲೂಕಿನಲ್ಲಿ ಮಾವು ಮತ್ತು ತೆಂಗು ಬೆಳೆಗಾರರು ಹೆಚ್ಚಾಗಿದ್ದು, ಮಾವು ಮತ್ತು ತೆಂಗುಗಳಿಗೆ ಸಾವಯವ ಪದ್ಧತಿಯಲ್ಲಿ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಬೆಳೆಯಬೇಕು. ಆಗ ಉತ್ತಮ ದರ ಸಿಗುವ ಜೊತೆಗೆ ಜನರು ಸಹಾ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು.
ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಬಸವನಗೌಡ ಅವರು ಮಾವು ಮತ್ತು ತೆಂಗಿನ ಬೆಳೆಯಲ್ಲಿ ಸಾವಯವ ಪದ್ಧತಿ ಅಳವಡಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಮಾತನಾಡಿ, ತಾಲೂಕಿನ ಕಾಕನೂರು, ಕೋಗಲೂರು, ಚಿಕ್ಕಬೆನ್ನೂರು, ಸಂತೆಬೆನ್ನೂರು, ಎಸ್.ಬಿ.ಆರ್.ಕಾಲೋನಿ, ತೋಪೇನಹಳ್ಳಿ, ಕಲ್ಲೇನಹಳ್ಳಿ ಪ್ರದೇಶಗಳಲ್ಲಿನ 500 ಹೆಕ್ಟರ್ ಪ್ರದೇಶದಲ್ಲಿ ಮಾವು, ತೆಂಗು ಬೆಳೆಯುತ್ತಿದೆ. ತರಬೇತಿಗಳ ಮೂಲಕ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದರು.
- - -
ಕಾರ್ಯಾಗಾರವನ್ನು ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು.