ಹುಬ್ಬಳ್ಳಿ:
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೀಮಾ ಲದವಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸೀಮಾ ಲದವಾ, ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಹಾಲಿನ ದರ ಹೆಚ್ಚಳ ಮಾಡಿದೆ. ಇದರಿಂದ ಜನಸಾಮಾನ್ಯರ ಕುಟುಂಬಕ್ಕೆ ಹೆಚ್ಚುವರಿ ಹೊರೆ ಬಿದ್ದಿದೆ. ಮಕ್ಕಳಿಗೆ ನಿತ್ಯ ನೀಡುವ ಹಾಲಿನ ದರವೂ ಹೆಚ್ಚಳವಾಗಿರುವುದರಿಂದ ನಾವು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.ಹಾಲು ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹಧನ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಆ ಪ್ರೋತ್ಸಾಹಧನದ ಹೊರೆ ಗ್ರಾಹಕರ ಜೇಬಿಗೆ ಹಾಕುವುದು ಸರಿಯಲ್ಲ. ಸರ್ಕಾರ ತನ್ನ ಬೊಕ್ಕಸದಿಂದ ಪ್ರೋತ್ಸಾಹಧನ ನೀಡಬೇಕು. ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕುವುದು ಎಷ್ಟು ಸಮಂಜಸ. ಮಹಿಳೆಯರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಶೀಲಾ ಕಾಟಕರ, ಪೂಜಾ ಶೇಜವಾಡಕರ, ಉಮಾ ಮುಕುಂದ, ರೂಪಾ ಶೆಟ್ಟಿ, ಪ್ರೀತಿ ಲದ್ವಾ, ಶಾಂತಾ ಹಿರೇಮಠ, ರಾಧಾಬಾಯಿ ಸಫಾರೆ, ಸುಮಿತ್ರಾ ಗುಂಜಾಳ, ಮೇನಕಾ ಹುರಳಿ, ಪೂಜಾ ರಾಯ್ಕರ, ಅನುರಾಧಾ ಚಿಲ್ಲಾಳ, ಪ್ರತಿಭಾ ಪವಾರ, ಶಾಂತಕ್ಕ ಪಂಚಾಂಗಮಠ, ಅಕ್ಕಮಹಾದೇವಿ ಹೆಗಡೆ, ಸುಮಾ ಶಿವನಗೌಡರ, ವಿಜಯ ಗುಡಿಗೇರಿ, ಗೀತಾ ದೇಸಳ್ಳಿ, ವಿಜಯಲಕ್ಷ್ಮಿ ತಿಮ್ಮೊಳಿ, ಲಕ್ಷ್ಮಿ ದೊಡ್ಮನಿ, ಸವಿತಾ ಅಥಣಿ, ಲಕ್ಷ್ಮಿ ಮಿಸ್ಕಿನ್, ಜಯಶ್ರೀ ಮುಳಗುಂದಮಠ ಸೇರಿದಂತೆ ಹಲವರಿದ್ದರು.