೨೪ರಂದು ಶಿರಾದಲ್ಲಿ ಹಿಂದೂ ಸಮಾಜೋತ್ಸವ

KannadaprabhaNewsNetwork |  
Published : Jan 13, 2026, 01:30 AM IST
೧೨ಶಿರಾ೧: ಶಿರಾ ನಗರದ ಗ್ರಾಮ ದೇವತೆ ಶ್ರೀ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಹಿಂದೂ ಸಮಾಜೋತ್ಸವದ ಪ್ರಯುಕ್ತ ಧ್ವಜ ಪೂಜೆ ಹಾಗೂ ಗೋಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಹಿಂದು ಸಂಘಟನೆಯನ್ನು ಬಲಪಡಿಸುವ ಹಾಗೂ ಸಮಾಜದಲ್ಲಿನ ಯುವ ಜನರನ್ನು ಜಾಗೃತಗೊಳಿಸುವ ಸಲುವಾಗಿ ೨೪ರಂದು ಶಿರಾದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆಗಮ ಶಾಸ್ತ್ರ ಪಂಡಿತರು ಹಾಗೂ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷರಾದ ಡಾ.ಸುರೇಶ್ ಶಾಸ್ತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಹಿಂದು ಸಂಘಟನೆಯನ್ನು ಬಲಪಡಿಸುವ ಹಾಗೂ ಸಮಾಜದಲ್ಲಿನ ಯುವ ಜನರನ್ನು ಜಾಗೃತಗೊಳಿಸುವ ಸಲುವಾಗಿ ೨೪ರಂದು ಶಿರಾದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆಗಮ ಶಾಸ್ತ್ರ ಪಂಡಿತರು ಹಾಗೂ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷರಾದ ಡಾ.ಸುರೇಶ್ ಶಾಸ್ತ್ರಿ ಹೇಳಿದರು.

ಅವರು ನಗರದ ಗ್ರಾಮ ದೇವತೆ ಶ್ರೀ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಹಿಂದೂ ಸಮಾಜೋತ್ಸವದ ಪ್ರಯುಕ್ತ ನಡೆದ ಧ್ವಜ ಪೂಜೆ ಹಾಗೂ ಗೋಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದೂ ಧರ್ಮವು ವೈವಿದ್ಯತೆಯಲ್ಲಿ ಏಕತೆಯನ್ನು ಸಾರುತ್ತದೆ ಆರಾಧನೆಯ ವಿಧಗಳು ಬೇರೆ ಬೇರೆ ಇರಬಹುದು ಆದರೆ ನಮ್ಮ ಗುರಿ ಒಂದೇ ಸೌಹಾರ್ದ ಸಮಾಜ ನಿರ್ಮಾಣ ಮಾಡುವುದು. ಇಂತಹ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲುಜಾಗೃತಿಯ ಅವಶ್ಯಕತೆ ಇದೆ ಎಂದರು.

ಹಿಂದೂ ಧರ್ಮ ಕೇವಲ ಧರ್ಮವಲ್ಲ ಅದು ಜೀವನದ ದಾರಿ. ಧರ್ಮ, ಸತ್ಯ, ಅಹಿಂಸೆ ಸಹಬಾಳ್ವೆಯ ಮೌಲ್ಯಗಳನ್ನು ನಮಗೆ ಕಲಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಅದನ್ನು ಮುಂದಿನ ಪೀಳೀಗೆಗೆ ನೀಡುವುದು ನಮ್ಮ ಕರ್ತವ್ಯ, ಯೋಗ, ಆಯುರ್ವೇದ, ಕುಟುಂಬ ಮೌಲ್ಯಗಳು ಹಾಗೂ ದೇವಾಲಯ ಸಂಸ್ಕೃತಿಯನ್ನು ವಿಶ್ವಕ್ಕೆ ನೀಡಿರುವುದು ನಮ್ಮ ಹಿಂದೂ ಧರ್ಮ. ಅಂದ ಮಹತ್ವವನ್ನು ಸಾರಲು ಹಿಂದೂ ಸಮಾಜೋತ್ಸವ ಏರ್ಪಡಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.

ಹಿಂದೂ ಸಮಾಜೋತ್ಸವ ಸಮಿತಿ ಸಂಯೋಜಕರಾದ ಅಭಿಷೇಕ್ ಮಾತನಾಡಿ, ನಮ್ಮ ಸನಾತನ ಹಿಂದೂ ಧರ್ಮದ ಬೆಳವಣಿಗೆಗೆ ಮತ್ತು ಉಳಿವಿಗೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಜ. ೨೪ರ ಶನಿವಾರ ಶಿರಾದಲ್ಲಿ ಹಿಂದೂ ಸಮಾಜೊತ್ಸವ ನಡೆಯಲಿದೆ. ಹಿಂದೂ ಸಮಾವೇಶದಿಂದ ಇಡೀ ಶಿರಾ ನಗರದ ಎಲ್ಲಾ ಸಮುದಾಯಗಳನ್ನು ಒಂದು ವೇದಿಕೆಯಲ್ಲಿ ತಂದು ಜಾಗೃತಿ ಮೂಡಿಸಬೇಕು. ಜ. ೨೪ರಂದು ಮಧ್ಯಾಹ್ನ ೧ ಗಂಟೆಗೆ ದುರ್ಗಮ್ಮ ದೇವಸ್ಥಾನದ ಆವರಣದಿಂದ ಶೋಭಾ ಯಾತ್ರೆ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರೆಸಿಡೆನ್ಸಿ ಶಾಲೆಯ ಪಕ್ಕದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಇಂದಿನ ದಿನಗಳಲ್ಲಿ ನೆರೆಯ ಬಾಂಗ್ಲಾ ಸೇರಿದಂತೆ ಇತರ ಕಡೆ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ಆಕ್ರಮಣಗಳು ನಡೆದು ಅವರನ್ನು ಹಿಂಸಿಸಿ ಕೊಲ್ಲಲಾಗುತ್ತಿದೆ. ಇದು ನಿಲ್ಲಬೇಕು ಇದಕ್ಕೆ ನಾವೆಲ್ಲರೂ ಒಕ್ಕೂರಲಿನಿಂದ ಶ್ರಮಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಖಜಾಂಜಿ ಶಿವಕುಮಾರ್, ನಗರಸಭಾ ಸದಸ್ಯರಾದ ಉಮಾ ವಿಜಯರಾಜ್, ರಂಗರಾಜು, ಚಂದ್ರಣ್ಣ, ಮಂಜುನಾಥ್, ಅನಿಲಾಚಾರ್, ಪ್ರಭಾಕರ ಚಾರ್, ಕನಕ ಬ್ಯಾಂಕ್ ನಿರ್ದೇಶಕ ರಂಗನಾಥ್, ವಿಜಯರಾಜ್, ಪಡಿ ರಮೇಶ್, ನಾಗೇಶ್, ನಟರಾಜ್, ಜಯರಾಮಣ್ಣ, ಸತ್ಯನಾರಾಯಣ, ನಾಗರತ್ನಮ್ಮ, ಮನು, ರತನ್, ಸೌಜನ್ಯ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ