ಜಾತಿ ಸಂಘರ್ಷ ಮರೆತರೆ ಹಿಂದೂ ಸಮಾಜ ಒಗ್ಗಟ್ಟು ಸಾಧ್ಯ: ಸಂಜಯ ಅಡಿಕೆ

KannadaprabhaNewsNetwork | Published : Jan 14, 2025 1:00 AM

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಅಥಣಿ ಶಾಖೆಯ ವಾರ್ಷಿಕೋತ್ಸವ ಹಾಗೂ ಮಕರ ಸಂಕ್ರಮಣ ನಿಮಿತ್ತ ಗಣವೇಷಧಾರಿ ಆರ್‌ಎಸ್‌ಎಸ್‌ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು.

ಕನ್ನಡಪ್ರಭ ವಾರ್ತೆ ಅಥಣಿ

ಹಿಂದೂ ಸಮಾಜ ಜಾತಿ ಜಾತಿಗಳ ನಡುವಿನ ಜಗಳ ಮರೆತರೆ ಮಾತ್ರ ಒಂದಾಗಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ವಿಭಾಗದ ಸಹ ಕಾರ್ಯನಿರ್ವಾಹ ಸಂಜಯ ಅಡಿಕೆ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಅಥಣಿ ಶಾಖೆಯ ವಾರ್ಷಿಕೋತ್ಸವ ಹಾಗೂ ಮಕರ ಸಂಕ್ರಮಣ ನಿಮಿತ್ತ ಪಥಸಂಚಲನ ಬಳಿಕ ಭೋಜರಾಜ ಕ್ರೀಡಾoಗಣದಲ್ಲಿ ನಡೆದಿ ಬೌದ್ಧಿಕ ಸಮಾವೇಶದಲ್ಲಿ ಉಪನ್ಯಾಸ ನೀಡಿದರು.

ಭಾರತದ ಪ್ರತಿ ಹಬ್ಬಕ್ಕೂ ಅದರದೇ ಆದ ವಿಶೇಷ ಮಹತ್ವ ಇದೆ. ಆದರೆ ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಪಟ್ಟು ನಮ್ಮತನ ಮರೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಜಯೇಂದ್ರ ದೇಸಾಯಿ ಮಾತನಾದರು.

ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ ದೇಶಪಾಂಡೆ, ಜಿಲ್ಲಾ ಕಾರ್ಯವಾಹ ಮಹಾಂತೇಶ ಗುಡ್ಡಾಪುರ, ತಾಲೂಕು ಸಂಘ ಚಾಲಕ ಅಶೋಕ ಕುಲಕರ್ಣಿ, ಕಾರ್ಯನಿರ್ವಾಹ ಮಹದೇವ ಐಗಳಿ, ಸ್ವಯಂ ಸೇವಕರು ಉಪಸ್ಥಿತರಿದ್ದರು. ಮಕರಂದ ನಾಯಿಕ ಸ್ವಾಗತಿಸಿ, ನಿರೂಪಿಸಿದರು. ಆನಂದ ಟೋಣಪಿ ವಂದಿಸಿದರು .

ಆಕರ್ಷಕ ಪಥಸಂಚಲನ: ಇದಕ್ಕೂ ಮುಂಚೆ ನೂರಾರು ಗಣವೇಷಧಾರಿ ಸ್ವಯಂಸೇವಕರು ಆಕರ್ಷಕ ಪಥಸಂಚನಲ ನಡೆಸಿದರು. ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಆವರಣದಿಂದ ಆರಂಭವಾದ ಪಥಸಂಚಲನ ಬಸವೇಶ್ವರ ವೃತ್ತ, ಕಾರ್ಪೊರೇಷನ್ ಬ್ಯಾಂಕ್ ಮಾರ್ಗವಾಗಿ ಹರಿ ಮಂದಿರ, ಮರಾಠಾ ಗಲ್ಲಿ, ಹೋಳಿಕಟ್ಟಿ ಗಲ್ಲಿ, ಪಾಟೀಲ ಗಲ್ಲಿ, ಮುಖ್ಯ ಬೀದಿಯ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬೀರೇಶ್ವರ ದೇವಸ್ಥಾನ, ಬೆಣ್ಣಿಪೇಟೆ, ತಾಪಂ ಕಚೇರಿ ಮಾರ್ಗವಾಗಿ ಭೋಜರಾಜ ಕ್ರೀಡಾಂಗಣಕ್ಕೆ ತಲುಪಿ ಸಮಾರೋಪಗೊಂಡಿತು.

ಸ್ಥಳೀಯರು ಮನೆಯ ಮುಂದಿನ ರಸ್ತೆಯಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಡಿಸಿದ್ದರು. ಭಗವಾ ಧ್ವಜ ಬೀಸುತ್ತ, ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತ, ಪಥಸಂಚಲನ ಮೇಲೆ ಹೂಮಳೆಗರೆದರು. ಚಿಕ್ಕ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.

Share this article