ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಹಳೇಬಸ್ ನಿಲ್ದಾಣದ ಆವರಣದಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿ, ವಂದೇ ಮಾತರಂ ಗೀತೆಗೆ 150 ವರ್ಷಗಳ ಇತಿಹಾಸವಿದೆ ಹಾಗೂ ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷಗಳ ಪಯಣವಿದೆ. ಆದರೂ ಸಹ ಸರ್ಕಾರದ ಒಬ್ಬ ಸಚಿವ ಸಂಘಟನೆ ನಿಷೇಧ ಮಾಡುತ್ತೇನೆ ಎಂದು ಹೇಳುತ್ತಾನೆ. ಹೀಗಾಗಿ ನಮ್ಮ ಹಿಂದೂಗಳು ಆತನ ಗುಲಾಮಿ ಮಾನಸಿಕತೆಗೆ ತಕ್ಕ ಉತ್ತರ ನೀಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂಗಳಿಗೆ ಧರ್ಮ ಶಿಕ್ಷಣದ ಕೊರತೆ ಇದೆ. ಯುವಶಕ್ತಿ ಧರ್ಮದ ಜಾಗೃತಿಗಾಗಿ ಶ್ರಮಿಸಬೇಕು. ಧರ್ಮ ಶಿಕ್ಷಣದ ಅಭಾವದಿಂದ ಸಮಾಜದ ಆಚಾರ, ಸಂಸ್ಕೃತಿ ,ಪರಂಪರೆ ಮತ್ತು ರಾಷ್ಟ್ರಭಕ್ತಿ ಮರೆಯಾಗುತ್ತಿದೆ. ಭವಿಷ್ಯ ದೃಷ್ಟಿಯಿಂದಲಾದರೂ ಹಿಂದೂಗಳು ಜಾಗೃತರಾಗಿ ಧರ್ಮರಕ್ಷಣೆಗೆ ಕಂಕಣಬದ್ಧರಾಗಿ ದುಡಿಯಬೇಕು ಎಂದರು.ಸಮಾಜೋತ್ಸವದ ಸಾನಿಧ್ಯ ವಹಿಸಿದ್ದ ಎಸ್.ಐ.ಹೊನ್ನಲಗೆರೆ ಶಿವ ಕ್ಷೇತ್ರ ಮಠದ ಪೀಠಾಧ್ಯಕ್ಷ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದ ಬಹು ಸಂಖ್ಯಾತ ಹಿಂದೂಗಳಾದ ನಾವುಗಳು ಅಲ್ಪಸಂಖ್ಯಾತರಾಗುತ್ತಿದ್ದೇವೆ. ಇಂತಹ ಪರಿಸ್ಥಿತಿಗೆ ಹಿಂದೂಗಳೇ ಕಾರಣ ಎಂದರು.
ಸಮಾಜೋತ್ಸವದ ಆಯೋಜನ ಸಮಿತಿ ಜಿಲ್ಲಾ ಕಾರ್ಯನಿರ್ವಾಹಕ ಅವಿನಾಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಆರ್‌ಎಸ್‌ಎಸ್ ಸಂಚಾಲಕ ಶಾಮಿಯಾನ ಗುರುಸ್ವಾಮಿ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡರಾದ ಎಂ.ಸಿ.ಸಿದ್ದು, ಕೆ.ಎಸ್.ಮಲ್ಲಿಕಾರ್ಜುನ್, ಕೆ.ಟಿ.ನವೀನ್ ಕುಮಾರ್, ಮನುಕುಮಾರ್. ಎಂ.ಜೆ.ಮಧುಕುಮಾರ್, ವಕೀಲ ಪಿ.ಮಲ್ಲೇಶ್, ನೈದಿಲೆ ಚಂದ್ರು, ವೀರಭದ್ರ ಸ್ವಾಮಿ, ಜಿ.ಸಿ.ಮಹೇಂದ್ರ, ಎಂ.ಎಸ್.ಜಗನ್ನಾಥ್ ಮತ್ತಿತರರು ಭಾಗವಹಿಸಿದ್ದರು.