ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಿಂದೂಸ್ತಾನಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ನಂತರ ಭಾರತೀಯ ಸಂಸ್ಕೃತಿಗೆ ಗೌರವ ಬರುತ್ತಿದೆ. ಅಯೋಧ್ಯೆ ಶ್ರೀರಾಮ ಮಂದಿರ ಜನವರಿಯಲ್ಲಿ ಉದ್ಘಾಟನೆ ಆಗುತ್ತಿದೆ. ಕಾನೂನುಬದ್ಧವಾಗಿ ರಾಮ ಮಂದಿರ ಕಟ್ಟಿದ್ದೇವೆ. ಹಿಂದುಗಳಿಗೆ ಇದು ಸಂತೋಷದ ವಿಚಾರ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶಿ ವಿಶ್ವನಾಥನ ದೇವಾಲಯ ಸರ್ವೇ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಅಲ್ಲಿ ಅಕ್ರಮವಾಗಿ ಕಟ್ಟಿರುವ ಮಸೀದಿ ಧ್ವಂಸ ಅಗಿ, ವಿಶ್ವನಾಥನ ದೇವಾಲಯ ಪೂರ್ಣ ಆಗುತ್ತೆ. ಅದೇ ರೀತಿ ಮಥುರಾದ ಕೃಷ್ಣ ದೇವಸ್ಥಾನ ಸರ್ವೇ ಆಗಬೇಕು ಅಂತಾ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶ ಪ್ರಪಂಚದ ಹಿಂದುಗಳಿಗೆ ಸಂತೋಷ ನೀಡಿದೆ ಎಂದು ಹೇಳಿದರು.
ಅಯೋಧ್ಯೆ, ಮಥುರಾ, ಕಾಶಿ ಈ ಮೂರು ಹಿಂದೂಗಳ ಶ್ರದ್ಧಾ ಕೇಂದ್ರಗಳು. ಮುಸ್ಲಿಂರು ಆಕ್ರಮಣ ಮಾಡಿ ಧ್ವಂಸ ಮಾಡಿದ್ದರು. ಗುಲಾಮಗಿರಿಯ ಬಾಬರ್ ಕಟ್ಟಡ ಧ್ವಂಸ ಆಗಿ ಶ್ರೀರಾಮ ಮಂದಿರ ಆಗುತ್ತಿದೆ. ಇದನ್ನು ಹಿಂದುಗಳು ಮಾತ್ರವಲ್ಲ ಮುಸ್ಲಿಂರು, ಕ್ರಿಶ್ಚಿಯನ್ನರು ಇದನ್ನು ಸ್ವಾಗತ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.- - - ಬಾಕ್ಸ್ ಕಾಂಗ್ರೆಸ್‌ನವರಿಗೆ ಉದ್ಯೋಗ ಇಲ್ಲದೇ ಆರೋಪ ಪಾರ್ಲಿಮೆಂಟ್ ಒಳಗಡೆ ಬಿಗಿ ವ್ಯವಸ್ಥೆ ಆಗಬೇಕು. ಮುಂದಿನ ದಿನದಲ್ಲಿ ಅದು ಆಗುತ್ತದೆ. ಪ್ರತಾಪ್ ಸಿಂಹ ಹಿಂದುತ್ವವಾದಿ. ಕಾಂಗ್ರೆಸ್‌ನವರಿಗೆ ಬೇರೆ ಉದ್ಯೋಗ ಇಲ್ಲ. ಹಾಗಾಗಿ, ಸಂಸದ ಪ್ರತಾಪ ಸಿಂಹ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ವಿಧಾನಸಭೆಯಲ್ಲಿ ಒಬ್ಬ ಯಜಮಾನ ಮನುಷ್ಯ ಒಬ್ಬ ಹೋಗಿ ಕುಳಿತಿದ್ದರು. ಆವಾಗ ಏನು ಮಾಡಿದ್ರು? ಇಂತಹ ಅಚಾತುರ್ಯಗಳು ನಡೆಯುತ್ತವೆ ಎಂದು ಪಾರ್ಲಿಮೆಂಟ್‌ನಲ್ಲಿ ಘಟಿಸಿದ ಭದ್ರತಾ ವೈಫಲ್ಯವನ್ನು ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡರು.
- - - (-ಫೋಟೋ: ಕೆ.ಎಸ್.ಈಶ್ವರಪ್ಪ)