ಕನ್ನಡಪ್ರಭ ವಾರ್ತೆ ಗೋಕಾಕ
ಶುಕ್ರವಾರ ಸಂಜೆ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆಯವರು ಹಮ್ಮಿಕೊಂಡ ಬೃಹತ್ ಹಲಿಗೆ ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಗತ್ತಿನಲ್ಲಿಯೇ ಅತಿಹೆಚ್ಚು ಯುವಶಕ್ತಿಯನ್ನು ನಮ್ಮ ದೇಶ ಹೊಂದಿದೆ. ಯುವ ಸಮೂಹ ವ್ಯಸನಮುಕ್ತರಾಗಿ ದೇಶವನ್ನು ಬಲಿಷ್ಠಗೊಳಿಸಲು ಶ್ರಮಿಸಬೇಕು. ಶ್ರೇಷ್ಠ ಸಂಸ್ಕೃತಿಯ ಕಾರಣ ದೇಶ ಪಾಶ್ಚಾತ್ಯರ ದಾಳಿಗೆ ಬಗ್ಗದೇ ಬಲಿಷ್ಠವಾಗಿಯೇ ಉಳಿದಿದೆ. ಇಂತಹ ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ವೇದಿಕೆಯ ಮೇಲೆ ಹಿಂದು ಜಾಗರಣ ವೇದಿಕೆ ಬೆಳಗಾವಿ ಜಿಲ್ಲಾ ಸಂಚಾಲಕ ಸಮರ್ಥ ಖಾಸನೀಸ್, ಆರ್‌ಎಸ್‌ಎಸ್ ಪ್ರಮುಖ ಎಂ.ವೈ. ಹಾರುಗೇರಿ, ಹಿಂದು ಜಾಗರಣ ವೇದಿಕೆಯ ತಾಲೂಕು ಘಟಕದ ಅಂಕುಶ ರೇಣಕೆ, ಸಾಯಿ ಕೋಸಂದರ, ಯಲ್ಲಪ್ಪ ದುರದುಂಡಿ ಸೇರಿದಂತೆ ಇತರರು ಇದ್ದರು.