ಹಿರೇಹಳ್ಳದ ದಿಡಗಿನ ಜಲಪಾತಕ್ಕೆ ಜೀವಕಳೆ

KannadaprabhaNewsNetwork |  
Published : May 21, 2024, 12:43 AM IST
19ಜಿಎಲ್ಡಿ1ಪೋಟೊ:19ಜಿಎಲ್ಡಿ1ಎ,ಬಿ,ಸಿ,ಡಿಗುಳೇದಗುಡ್ಡ: ಕೋಟೆಕಲ್-ಗುಳೇದಗುಡ್ಡ ಹಿರೇ ಹಳ್ಳದ ದಿಡಗಿನ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.  | Kannada Prabha

ಸಾರಾಂಶ

ಗುಳೇದಗುಡ್ಡ: ನಾಲ್ಕೈದು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೋಟೆಕಲ್-ಗುಳೇದಗುಡ್ಡ ಹಿರೇಹಳ್ಳದ ದಿಡಗಿನ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ನಾಲ್ಕೈದು ದಿನಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲು ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೋಟೆಕಲ್-ಗುಳೇದಗುಡ್ಡ ಹಿರೇಹಳ್ಳದ ದಿಡಗಿನ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಎರಡು ದಿನಗಳಿಂದ ಈ ಜಲಪಾತ ಮೈದುಂಬಿ ಹರಿಯುತ್ತಿದ್ದು, ಶನಿವಾರ, ಭಾನುವಾರ ಯುವಕರು, ಯುವತಿಯರು ಜಲಪಾತಕ್ಕೆ ಭೇಟಿ ನೀಡಿ ಧುಮ್ಮಿಕ್ಕಿ ಹರಿಯುವ ನೀರಿಗೆ ಮೈಯೊಡ್ಡಿ ಜಲಕ್ರೀಡೆಯಾಡಿ ಸಂಭ್ರಮಿಸುತ್ತಿದ್ದಾರೆ.

ಕುಟುಂಬ ಸಮೇತರಾಗಿ ಈ ಜಲಪಾತಕ್ಕೆ ಭೇಟಿ ಕೊಡುತ್ತಿರುವುದು ಕಂಡುಬಂತು. ಈ ಜಲಪಾತಕ್ಕೆ ಸರಿಯಾದ ಮಾರ್ಗವಿಲ್ಲದಿದ್ದರೂ ಜನ ಗುಡ್ಡದ ಕಲ್ಲುಗಳನ್ನು ತುಳಿಯುತ್ತ, ಕಷ್ಟಪಟ್ಟು ಹೋಗುತ್ತಿರುವುದು ಕಂಡು ಬಂತು. ಕೋಟೆಕಲ್ ಗ್ರಾಪಂ ವ್ಯಾಪ್ತಿಗೆ ಈ ಜಲಪಾತ ಒಳಪಟ್ಟರೂ ಗ್ರಾಪಂ ಮಾತ್ರ ಜಲಪಾತದವರೆಗೆ ಸುಗಮ ಮಾರ್ಗ ಮಾಡುತ್ತಿಲ್ಲ ಎಂಬುದು ಜನರ ಅಳಲು.

ತಾಲೂಕಿನ ಕೆಲವಡಿ, ಕೋಟೆಕಲ್, ಲಾಯದಗುಂದಿ, ಆಸಂಗಿ, ಪರ್ವತಿ, ತೋಗುಣಶಿ, ತೆಗ್ಗಿ, ಹಂಸನೂರ, ಪಾದನಕಟ್ಟಿ, ಅಲ್ಲೂರ ಎಸ್.ಪಿ. ಸೇರಿದಂತೆ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗ್ರಾಮೀಣ ಪ್ರದೇಶಗಳ ಜಮೀನುಗಳು ನೀರಿನಿಂದ ಆವರಿಸಿದ್ದು, ಒಂದು ವರ್ಷದಿಂದ ಉತ್ತಮ ಮಳೆ ನೋಡದಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು