ಹಿರಿಯಡ್ಕ ಸಮೀಪದ ಶ್ರೀ ಕ್ಷೇತ್ರ ಪೆರ್ಣಂಕಿಲದ ಮಹಾಗಣಪತಿ - ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2ನೇ ಹಂತದ ಕ್ಷೇತ್ರ ಅಭಿಯೃದ್ಧಿಯಂಗವಾಗಿ ಹೊರಾಂಗಣಕ್ಕೆ ತಗಡು ಚಪ್ಪರ ಮತ್ತು ನೂತನ ಮಹಾರಥ ನಿರ್ಮಾಣಕ್ಕೆ ಮುಹೂರ್ತ ನಡೆಸಲಾಯಿತು. ಸುಮಾರು 2 ಕೋಟಿ ರು.ಗಳ ಈ ಎರಡು ಕಾಮಗಾರಿಗಳು ಮುಂದಿನ ರಥೋತ್ಸವದ ಒಳಗೆ ಪೂರ್ಣಗೊಳ್ಳಲಿವೆ.
ಉಡುಪಿ: ಇಲ್ಲಿನ ಹಿರಿಯಡ್ಕ ಸಮೀಪದ ಶ್ರೀ ಕ್ಷೇತ್ರ ಪೆರ್ಣಂಕಿಲದ ಮಹಾಗಣಪತಿ - ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2ನೇ ಹಂತದ ಕ್ಷೇತ್ರ ಅಭಿಯೃದ್ಧಿಯಂಗವಾಗಿ ಹೊರಾಂಗಣಕ್ಕೆ ತಗಡು ಚಪ್ಪರ ಮತ್ತು ನೂತನ ಮಹಾರಥ ನಿರ್ಮಾಣಕ್ಕೆ ಮುಹೂರ್ತ ನಡೆಸಲಾಯಿತು. ಸುಮಾರು 2 ಕೋಟಿ ರು.ಗಳ ಈ ಎರಡು ಕಾಮಗಾರಿಗಳು ಮುಂದಿನ ರಥೋತ್ಸವದ ಒಳಗೆ ಪೂರ್ಣಗೊಳ್ಳಲಿವೆ.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಅದಮಾರು ಮಠದ ಕಿರಿಯ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿಯವರು ಜತೆಯಾಗಿ ಈ ಎರಡು ಮುಹೂರ್ತಗಳನ್ನು ನೆರವೇರಿಸಿದರು.ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಉದ್ಯಮಿ ನೀಲಾವರ ನಾಗರಾಜ ಶೆಟ್ಟಿ, ರಥಶಿಲ್ಪಿ ಗಣೇಶ್ ಆಚಾರ್ಯ ಮುತ್ತೂರು ಮತ್ತು ಚಪ್ಪರ ನಿರ್ಮಾಣ ಗುತ್ತಿಗೆದಾರ ಮೋಹನ್ ಭಾಗವತ್ ಕಡಿಯಾಳಿ ಇದ್ದರು.ಉಮೇಶ್ ನಾಯಕ್ ಪೆರ್ಣಂಕಿಲ ಕಾರ್ಯಕ್ರಮ ಸಂಯೋಜಿಸಿದರು. ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ವಿಷ್ಣುಮೂರ್ತಿ ಆಚಾರ್ಯ, ಮಠದ ಲೆಕ್ಕಾಧಿಕಾರಿ ಇಂದುಶೇಖರ, ಕ್ಷೇತ್ರದ ಅರ್ಚಕ ವರ್ಗ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.