ತುಂಬೆ ಗ್ರೂಪ್, ಭವಿಷ್ಯದ ತಮ್ಮ ಎಲ್ಲ ಸಂಸ್ಥೆಗಳ ಉದ್ಯೋಗಗಳಿಗೆ ಶೇ.3 ಜಿಎಂಯುನಲ್ಲಿ ಕಲಿತವರಿಗೆ ಮೀಸಲಾಗಿರುತ್ತದೆ ಎಂದು ಐತಿಹಾಸಿಕವಾಗಿ ಘೋಷಿಸಿದೆ. ಯುಎಇ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಇದು ದೊಡ್ಡ ಹೆಜ್ಜೆಯಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಯುಎಇ - ೨೦೨೫ರಲ್ಲಿ ನಡೆದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು) ಉದ್ಯೋಗ ಮೇಳ ಮತ್ತು ಕೈಗಾರಿಕಾ ಸಹಭಾಗಿಗಳ ಸಭೆಯಲ್ಲಿ ಖಾಸಗಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತುಂಬೆ ಗ್ರೂಪ್, ಭವಿಷ್ಯದ ತಮ್ಮ ಎಲ್ಲ ಸಂಸ್ಥೆಗಳ ಉದ್ಯೋಗಗಳಿಗೆ ಶೇ.3 ಜಿಎಂಯುನಲ್ಲಿ ಕಲಿತವರಿಗೆ ಮೀಸಲಾಗಿರುತ್ತದೆ ಎಂದು ಐತಿಹಾಸಿಕವಾಗಿ ಘೋಷಿಸಿದೆ. ಯುಎಇ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಇದು ದೊಡ್ಡ ಹೆಜ್ಜೆಯಾಗಿದೆ.ಈ ಉದ್ಯೋಗ ಮೇಳದಲ್ಲಿ ೯೦ಕ್ಕೂ ಹೆಚ್ಚು ಪ್ರಮುಖ ಆರೋಗ್ಯ ಸಂಸ್ಥೆಗಳು ಮತ್ತು ಕೈಗಾರಿಕಾ ಸಹಭಾಗಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಮತ್ತು ಇಲ್ಲಿ ಕಲಿತು ಹೊರಬರುವವರಿಗೆ ಕ್ಲಿನಿಕಲ್, ಆಡಳಿತ, ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳನ್ನು ಅನ್ವೇಷಿಸಲು ಇದು ವೇದಿಕೆಯಾಗಿದೆ ಎಂದು ಜಿಎಂಯು ಪ್ರಭಾರ ಚಾನ್ಸೆಲರ್ ಪ್ರೊ.ಮಂಡ ವೆಂಕಟ್ರಮಣ ಹೇಳಿದರು.
ವೈದ್ಯಕೀಯ, ದಂತಚಿಕಿತ್ಸೆ, ಫಾರ್ಮಸಿ, ನರ್ಸಿಂಗ್, ಆರೋಗ್ಯ ವಿಜ್ಞಾನಗಳ ಕ್ಷೇತ್ರಗಳಲ್ಲಿ ಜಿಎಂಯು ಯುಎಇಗೆ ಅತ್ಯುನ್ನತ ಮಟ್ಟದ ತಜ್ಞರನ್ನು ನೀಡುತ್ತಿದೆ. ೧೦೬ಕ್ಕೂ ಹೆಚ್ಚು ದೇಶಗಳಿಂದ ವಿದ್ಯಾರ್ಥಿಗಳು ಹೊಂದಿರುವ ಜಿಎಂಯು ಜಾಗತಿಕ ಮಾನ್ಯತೆ ಪಡೆದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಕೇಂದ್ರವಾಗಿದೆ.೨೦೨೫ರ ಉದ್ಯೋಗ ಮೇಳದಲ್ಲಿ ಎಐ ಆಧಾರಿತ ಕೌನ್ಸಿಲಿಂಗ್ ಉಪಕರಣಗಳು, ತಕ್ಷಣದ ಸಂದರ್ಶನಗಳು ಮತ್ತು ನೇಮಕಾತಿದಾರರೊಂದಿಗೆ ಸಂವಾದಗಳು ಏರ್ಪಟ್ಟಿತು. ಉದ್ಯಮಿ ಡಾ.ತುಂಬೆ ಮೊಹಿಯುದ್ದೀನ್ ಸ್ಥಾಪಿಸಿದ ತುಂಬೆ ಗ್ರೂಪ್, ಖಾಸಗಿ ಅಕಾಡೆಮಿಕ್ ಆಸ್ಪತ್ರೆಗಳ ಅತಿದೊಡ್ಡ ಜಾಲವನ್ನೇ ನಡೆಸುತ್ತಿದೆ. ಇದರಲ್ಲಿ ತುಂಬೆ ಯೂನಿವರ್ಸಿಟಿ ಆಸ್ಪತ್ರೆ, ತುಂಬೆ ಡೆಂಟಲ್ ಆಸ್ಪತ್ರೆ, ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಸೇರಿವೆ. ಇತ್ತೀಚೆಗೆ ಅವರು ಪಶುವೈದ್ಯಕೀಯ, ಮಾನಸಿಕ ಆರೋಗ್ಯ ಮತ್ತು ವೆಲ್‌ನೆಸ್ ಕೇಂದ್ರಗಳನ್ನು ಘೋಷಿಸಿದ್ದಾರೆ. 20ಕ್ಕೂ ಹೆಚ್ಚು ವರ್ಷಗಳ ಶ್ರೇಷ್ಠತೆಯೊಂದಿಗೆ ಈ ಗುಂಪು ಆರೋಗ್ಯ ಸೇವೆ, ಶಿಕ್ಷಣ ಮತ್ತು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ.೨೦೨೫ರ ಶೈಕ್ಷಣಿಕ ವರ್ಷದ ಪ್ರವೇಶ ಪ್ರಾರಂಭವಾಗಿದೆ. ಸೀಟುಗಳು ಸೀಮಿತವಾಗಿವೆ. ಅರ್ಜಿ ಸಲ್ಲಿಸಲು www.gmu.ac.ae ಸಂಪರ್ಕಿಸಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.