ಹದಿಹರೆಯದ ಕುತೂಹಲ, ಮೊಬೈಲ್ ಗೀಳಿನಿಂದಲೆ ಸೋಂಕು
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವ ಜನರ ಸಂಖ್ಯೆಯೇ ಹೆಚ್ಚಾಗುತ್ತಿರುವ ಆತಂಕಕಾರಿ ಸಂಗತಿಯೊಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ.
22ರ ವಯಸ್ಸಿನ ಒಳಗಿನವರೆ ಜಾಸ್ತಿ;
ಕಳೆದ 2 ವರ್ಷಗಳ ವರದಿಯ ಪ್ರಕಾರ ಶೇ.10ರಷ್ಟು ಎಚ್‌ಐವಿ ಸೋಂಕಿತರು ಸಲಿಂಗಕಾಮಿಗಳು ಇರುವುದು ಕೂಡ ದಾಖಲಾಗಿದೆ. ಈ ಅಂಕಿ-ಅಂಶಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿರುವುದು ಕೂಡ ಆರೋಗ್ಯ ಇಲಾಖೆಗೆ ಇನ್ನೊಂದು ಸವಾಲಾಗಿದೆ. ಇದರಲ್ಲಿ ಹೆಚ್ಚಾಗಿ ಸುಶಿಕ್ಷಿತರೆ ಹೆಚ್ಚಾಗಿ ಇರುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ.ಎಚ್‌ಐವಿ ಪತ್ತೆಯಾದಾಗ ಸೋಂಕಿತರೊಡನೆ ಆಪ್ತ ಸಮಾಲೋಚನೆ ನಡೆಸಿದಾಗ ಹದಿಹರೆಯದ ಕುತೂಹಲ, ಮೊಬೈಲ್ ಗೀಳಿನಿಂದಲೆ ಸೋಂಕು ಹಬ್ಬಿಸಿಕೊಂಡಿರುವುದು ಪತ್ತೆಯಾಗಿದೆ. ಯುವ ಜನತೆಯಲ್ಲೆ ಹೆಚ್ಚಾಗಿ ಎಚ್‌ಐವಿ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ವಿದ್ಯಮಾನವನ್ನು ಗಂಭೀರವಾಗಿ ತೆಗೆದುಕೊಂಡು ಶಾಲೆ ಕಾಲೇಜುಗಳಿಗೆ ತೆರಳಿ ಜಾಗೃತಿ ಆಂದೋಲನ ಹಾಗೂ ವಿವಿಧ ಕಾರ್ಯಕ್ರಮ ಆಯೋಜಿಸಿ ಎಚ್‌ಐವಿ ನಿರ್ಮೂಲನೆಗೆ ಶ್ರಮಿಸಲಾಗುತ್ತಿದೆ ಎನ್ನುತ್ತಾರೆ ಅಂಕೋಲಾದ ಐಸಿಟಿಸಿ ಆಪ್ತ ಸಮಾಲೋಚಕಿ ರಾಜೇಶ್ವರಿ ಕಿಲೋಸ್ಕರ.