2 ತಿಂಗಳ ಹಿಂದೆಯೇ ಶಿವಮೊಗ್ಗಕ್ಕೆ ಬಂದು ಹೋಗಿತ್ತು ಚೀನಿ ವೈರಸ್‌ : ತಡವಾಗಿ ಬೆಳಕಿಗೆ

KannadaprabhaNewsNetwork |  
Published : Jan 08, 2025, 01:31 AM ISTUpdated : Jan 08, 2025, 04:56 AM IST
ಎಚ್‌ಎಂಪಿ | Kannada Prabha

ಸಾರಾಂಶ

ಚೀನಾ, ಜಪಾನ್ ಮಾತ್ರವಲ್ಲದೆ ಭಾರತದಲ್ಲಿಯೂ ಸದ್ದು ಮಾಡುತ್ತಿರುವ ಎಚ್‌ಎಂಪಿ (ಚೀನಾ ವೈರಸ್) 2 ತಿಂಗಳ ಹಿಂದೆಯೇ ಶಿವಮೊಗ್ಗಕ್ಕೆ ಬಂದು ಹೋಗಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

 ಶಿವಮೊಗ್ಗ : ಚೀನಾ, ಜಪಾನ್ ಮಾತ್ರವಲ್ಲದೆ ಭಾರತದಲ್ಲಿಯೂ ಸದ್ದು ಮಾಡುತ್ತಿರುವ ಎಚ್‌ಎಂಪಿ (ಚೀನಾ ವೈರಸ್) 2 ತಿಂಗಳ ಹಿಂದೆಯೇ ಶಿವಮೊಗ್ಗಕ್ಕೆ ಬಂದು ಹೋಗಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ಸರ್ಜಿ ಆಸ್ಪತ್ರೆಯಲ್ಲಿ 5 ಮಕ್ಕಳಲ್ಲಿ ವೈರಸ್‌ ಕಾಣಿಸಿದ್ದು, ಯಾವುದೇ ಸಮಸ್ಯೆ ಇಲ್ಲದೆ ಎಲ್ಲ ಮಕ್ಕಳೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಸರ್ಜಿ ಆಸ್ಪತ್ರೆಯ ಡಾ। ಧನಂಜಯ ಸರ್ಜಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜ್ವರ, ಶೀತದಿಂದ ಬಳಲುತ್ತಿದ್ದ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡುವ ವೇಳೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಈ ವೈರಸ್ ಇರುವುದು ಪತ್ತೆಯಾಯಿತು. ಇದು ಇತರೆ ವೈರಸ್ ರೀತಿಯಲ್ಲಿಯೇ ಸಾಮಾನ್ಯ ವೈರಸ್ ಆಗಿದ್ದು, ಎಲ್ಲ ಮಕ್ಕಳೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ತಿಳಿಸಿದರು.

ಸಾಮಾನ್ಯವಾಗಿ 6 ತಿಂಗಳಿಂದ 4 ವರ್ಷದೊಳಗಿನ ಮಕ್ಕಳಿಗೆ ಹೆಚ್ಚಾಗಿ ಬರಬಹುದು. ಜೊತೆಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಇದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ವೈರಸ್ ಕಾಣಿಸಬಹುದು. ಎಚ್‌ಎಂಪಿ ವೈರಸ್ ಕಾಣಿಸಿದವರು ಮಾಸ್ಕ್ ಬಳಸಬೇಕು. ಬೇರೆಯವರು ಬಳಸಿದ ಕರ್ಚೀಫ್ ಇತರ ವಸ್ತುಗಳನ್ನು ಬಳಸುವುದು ಸರಿಯಲ್ಲ. ಇಂತಹ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಾಕು. ಗಾಬರಿಯಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

ಉಸಿರಾಟ ಸಂಬಂಧಿ  ಕಾಯಿಲೆ ಮೇಲೆ ನಿಗಾ

ಹೆಚ್ಚಿಸಿ: ಕೇಂದ್ರ ಸಲಹೆನವದೆಹಲಿ: ಉಸಿರಾಟ ಸಂಬಂಧಿ ಕಾಯಿಲೆ ಕುರಿತು ನಿಗಾ ವ್ಯವಸ್ಥೆ ರೂಪಿಸುವಂತೆ ಮತ್ತು ಎಚ್‌ಎಂಪಿವಿ ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಸೋಮವಾರ ರಾಜ್ಯಗಳ ಜೊತೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದೆ.

 ಮಹಾರಾಷ್ಟ್ರದಲ್ಲಿ 2 ಶಂಕಿತ ಎಚ್‌ಎಂಪಿ

ವೈರಸ್‌ ಕೇಸು ದೃಢನಾಗಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ 2 ಹೊಸ ಶಂಕಿತ ಎಚ್‌ಎಂಪಿವಿ ಪ್ರಕರಣ ವರದಿಯಾಗಿವೆ. ‘ಶಂಕಿತ ಸೋಂಕಿತರು 7 ಹಾಗೂ 14 ವರ್ಷದ ಬಾಲಕರಾಗಿದ್ದು, ಅವರಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ ಹಾಗೂ ಚೇತರಿಸಿಕೊಂಡ ನಂತರ ಇಬ್ಬರೂ ರೋಗಿಗಳನ್ನು ಮನೆಗೆ ಕಳಿಸಲಾಗಿದೆ. ಅವರ ಮಾದರಿಗಳನ್ನು ಸಂಗ್ರಹಿಸಿ ದಿಲ್ಲಿಯ ಏಮ್ಸ್ ವೈರಾಲಜಿಗೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!