ದುಗ್ಗಳ ಸದಾನಂದನಾಪೋಕ್ಲು: ಚೇನಂಡ ಹಾಕಿ ನಮ್ಮೆಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆಪ್ಪುಡಿರ ಮತ್ತು ಕುಲ್ಲೇಟಿರ ತಂಡಗಳ ನಡುವೆ ನಡೆಯಲಿರುವ ಫೈನಲ್ ಪಂದ್ಯಕ್ಕೆ ಸ್ಥಳೀಯ ಕೆಪಿಎಸ್ ಶಾಲಾ ಜ.ತಿಮ್ಮಯ್ಯ ಕ್ರೀಡಾಂಗಣ ಸಜ್ಜಾಗಿದ್ದು, ಫೈನಲ್ ಪಂದ್ಯಾವಳಿ ವೀಕ್ಷಣೆಗೆ ಸುಮಾರು 35ರಿಂದ 40 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಶನಿವಾರ ಮೂರು ಮತ್ತು ನಾಲ್ಕನೇ ಸ್ಥಾನ ಹಾಗೂ ಮೊದಲ ಹಾಗೂ 2ನೇ ಸ್ಥಾನಕ್ಕಾಗಿ 2 ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 1ಗಂಟೆಗೆ ಫೈನಲ್ ಪಂದ್ಯಾವಳಿ ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದಲೇ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಚೇನಂಡ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.40 ಸಾವಿರ ಜನ ಸೇರುವ ನಿರೀಕ್ಷೆ: ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಗೌರವ ಅತಿಥಿಗಳಾಗಿ ಕೇಂದ್ರ ಕ್ರೀಡಾ ಮಂತ್ರಿ ಡಾ.ಮನ್ಸೂಖ್ ಮಾಂಡವಿಯಾ ಅವರು ಪಾಲ್ಗೊಗೊಳ್ಳಲಿದ್ದಾರೆ. ಇವರೊಂದಿಗೆ ಶಾಸಕ ಎ.ಎಸ್ ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿರುವ ಹಿನ್ನೆಲೆ ವೇದಿಕೆಗೆ ವಿವಿಐಪಿ ಮತ್ತು ವಿಐಪಿ ಪ್ರವೇಶ ಮಾರ್ಗಗಳನ್ನು ಸಿದ್ಧಪಡಿಸಲಾಗಿದೆ. ಹಾಗೂ ಪಾಸ್ಗಳನ್ನು ನೀಡುವ ವ್ಯವಸ್ಥೆಯಾಗಿದ್ದು, ಕ್ರೀಡಾಭಿಮಾನಿಗಳು ಸಹಕರಿಸಬೇಕು ಎಂದು ಚೇನಂಡ ಕುಟುಂಬಸ್ಥರು ಕೋರಿದ್ದಾರೆ.ಪಂದ್ಯಾವಳಿಯಲ್ಲಿ 35ರಿಂದ 40 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಮುಖ್ಯ ಮೈದಾನದ ಹಿಂಭಾಗ ಮತ್ತು 2ನೇ ಹಾಗೂ 3ನೇ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಕೆಳಭಾಗದ ಗದ್ದೆಯಲ್ಲಿಯೂ ಪಾರ್ಕಿಂಗ್ ಮಾಡಬಹುದಾಗಿದೆ. ಇದಲ್ಲದೇ ಮೈದಾನಕ್ಕೆ ಬರುವ ದಾರಿಯಲ್ಲಿ ಸೀನಿಯರ್ ಕಾಲೇಜು ಮೈದಾನದಲ್ಲಿಯೂ ಪಾರ್ಕಿಂಗ್ಗೆ ವ್ಯವಸ್ಥೆಯಿದ್ದುö, ಅಲ್ಲಿ ವಾಹನ ನಿಲ್ಲಿಸಿ ಬರುವವರಿಗೆ ಶೆಟಲ್ ವಾಹನ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಬರುವ ದಾರಿಯಲ್ಲಿ ರಸ್ತೆಯ 2 ಬದಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲö ಹಾಗಾಗಿ ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಚೇನಂಡ ಹಾಕಿ ನಮ್ಮೆಯ ಕಾರ್ಯಾಧ್ಯಕ್ಷ ಚೇನಂಡ ದೀನ ಚಂಗಪ್ಪ ಹಾಗೂ ಪ್ರಮುಖರು ಮನವಿ ಮಾಡಿದ್ದಾರೆ.