- ಚಿಕ್ಕಮಗಳೂರು ಜಿಲ್ಲೆಯಿಂದ ಸಮೀಪದ ಬೆಟ್ಟತಾವರೆಕೆರೆಯಲ್ಲಿ ನಡೆದ ಸಭೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ತರೀಕೆರೆಪ್ರತಿ ಗ್ರಾಮಾಂತರ ಪ್ರದೇಶದಲ್ಲಿ ಜಾನಪದ ಸಮ್ಮೇಳನ ಕಲೋತ್ಸವ ನಡೆಸಬೇಕು ಎಂದು ಸಮಾಜ ಸೇವಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ವಿ.ಕಲ್ಲೇಶಪ್ಪ ಹೇಳಿದ್ದಾರೆ.ಕರ್ನಾಟಕ ಜಾನಪದ ಪರಿಷತ್ತು ತರೀಕೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆಯಿಂದ ಸಮೀಪದ ಬೆಟ್ಟತಾವರೆಕೆರೆಯಲ್ಲಿ ನಡೆದ ಸಭೆ ಉದ್ಘಾಟಿಸಿ ಮಾತನಾಡಿದರು. ಪ್ರತಿ ಗ್ರಾಮಾಂತರ ಪ್ರದೇಶದಲ್ಲಿ ಜಾನಪದ ಸಮ್ಮೇಳನ, ಜಾನಪದ ಕಲೋತ್ಸವ, ಜಾನಪದ ಕಲೆಗಳ ತರಬೇತಿ ಶಿಬಿರ, ಜಾನಪದ ವಿಚಾರ ಸಂಕಿರಣ, ಉಪನ್ಯಾಸ,ಜಾನಪದ ಗೀತೆ ಗಾಯನ ತರಬೇತಿ ಶಿಬಿರ ಮುಂತಾದ ಮೌಲ್ಯದಾರಿತ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಮಾತನಾಡಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿ ಜಾನಪದಕ್ಕಿದೆ. ನಮ್ಮ ಭಾರತೀಯ ಆಚಾರ ವಿಚಾರ ಉಡುಗೆ ತೊಡುಗೆ ಧರ್ಮ, ಭಾಷೆ, ಆಹಾರ ಪದ್ಧತಿ, ಧಾರ್ಮಿಕ ಸಹಿಷ್ಣತೆ ಮುಂತಾದವುಗಳ ಅರಿವು ಮೂಡಿಸಬೇಕಾದರೆ ಶಾಲಾ ಕಾಲೇಜುಗಳಲ್ಲಿಯೂ ಸಹ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದು ತಿಳಿಸಿದರು.ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕ, ರಾಜ್ಯಾದ್ಯಂತ ಜಿಲ್ಲಾ ಶಾಖೆಗಳನ್ನು ಹೊಂದಿದ್ದು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ರಾಜ್ಯ ಮಟ್ಟದಲ್ಲಿ, ವೀರಗಾಸೆ, ಡೊಳ್ಳು ಕುಣಿತ ಪಟ ಕುಣಿತ, ಪೂಜಾ ಕುಣಿತ ಸುಮ್ಮನೆ ಕುಣಿತ, ಗಾರುಡಿ ಗೊಂಬೆ ಕುಣಿತ ಕೋಲಾಟ. ಜಾನಪದ ನೃತ್ಯ, ಜಾನಪದ ಗೀತೆಗಳು, ಗೀಗಿ ಪದ, ಒಗಟು ಗಾದೆ, ಮುಂತಾದ ಕಲೆಗಳನ್ನು ಇಂದಿನ ಯುವಕ ಯುವತಿ ಯರಲ್ಲಿ ಬಿತ್ತಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.ಈ ಎಲ್ಲಾ ಕಲೆಗಳನ್ನು ಪ್ರದರ್ಶಿಸಲು ತಾಲೂಕು ಮಟ್ಟದ ಸಮ್ಮೇಳನದಲ್ಲಿ ಅವಕಾಶ ನೀಡಲಾಗುವುದೆಂದು ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ತು ತರೀಕೆರೆ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್. ರಾಜಶೇಖರ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬೆಟ್ಟತಾವರೆಕೆರೆ ಜಾನಪದ ಕಲೆಗಳಿಗೆ ಹೆಸರುವಾಸಿಯಾಗಿದ್ದು, ಹೆಚ್ಚು ಕಲಾವಿದರನ್ನು ಹೊಂದಿದ ಜಾನಪದ ಕಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಊರಾಗಿದೆ. ಆದ್ದರಿಂದ ಈ ಗ್ರಾಮದಲ್ಲಿ ತಾಲೂಕು ಮಟ್ಟದ ಸಮ್ಮೇಳನ ಗ್ರಾಮದ ಎಲ್ಲಾ ಸದಸ್ಯರ ಸಹಕಾರ ಮಾರ್ಗದರ್ಶನದೊಂದಿಗೆ ಹಮ್ಮಿಕೊಂಡಿದೆ. ಜಿಲ್ಲೆಯ ಎಲ್ಲಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನ ಯಶಸ್ವಿಯಾಗಿ ನಡೆಸ ಕೊಡಬೇಕೆಂದು ವಿನಂತಿಸಿಕೊಂಡರು. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಬಜನಾ ಕಲಾವಿದ ಬಿ.ವಿ ಜಯಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಜಯಮ್ಮ ಜಿಲ್ಲಾ ಉಪಾಧ್ಯಕ್ಷ ಗೊಂಡೆದಳ್ಳಿ ತಿಪ್ಪೇಶ್, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ,ಹಿರಿಯ ಕಲಾವಿದ ಚಿಕ್ಕಾನಂಗಲ ಶಂಕರಪ್ಪ, ಮರಳು ಸಿದ್ದಪ್ಪ, ತ್ಯಾಗದಬಾಗಿ ದೇವರಾಜ್, ಗ್ರಾಪಂ ಸದಸ್ಯರಾದ ಸುಮಿತ್ರಮ್ಮ,ಜಯಣ್ಣ, ತಿಪ್ಪೇರುದ್ರಪ್ಪ, ತಿಪ್ಪೇಶಪ್ಪ, ಮಹಾಂತೇಶ, ಪಿ ದೇವರಾಜು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ತಾಲೂಕು ಮಟ್ಟದ ಜಾನಪದ ಸಮ್ಮೇಳನವನ್ನು ಆಗಸ್ಟ್ 31 ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.21ಕೆಟಿಆರ್.ಕೆ.8ಃ ತರೀಕೆರೆ ಸಮೀಪದ ಬೆಟ್ಟತಾವರೆಕೆರೆಯಲ್ಲಿ ನಡೆದ ಸಭೆಯಲ್ಲಿ ಸಮಾಜ ಸೇವಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಬಿ.ವಿ.ಕಲ್ಲೇಶಪ್ಪ, ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್, . ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮಾಳೇನಹಳ್ಳಿ ಬಸಪ್ಪ ಮತ್ತಿತರರು ಭಾಗವಹಿಸಿದ್ದರು.