ಕೋಳಿಗಳನ್ನು ಹಿಡಿದು ಡಿಸಿ ಕಚೇರಿ ಮುಂದೆ ಪ್ರತಿಭಟನೆ

KannadaprabhaNewsNetwork |  
Published : Nov 15, 2024, 12:34 AM IST
೧೪ಕೆಎಲ್‌ಆರ್-೧೦ಡಿ.ಸಿ.ಸಿ ಬ್ಯಾಂಕ್ ಗೆ ಚುನಾವಣೆ ದಿನಾಂಕ ನಿಗದಿ ಮಾಡಿ ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಪೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ರೈತ ಕೂಲಿಕಾರ್ಮಿಕ ಹಾಗೂ ಮಹಿಳೆಯರನ್ನು ರಕ್ಷಿಸುವಂತೆ ರೈತ ಸಂಘದಿಂದ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿ.ಸಿ.ಸಿ ಬ್ಯಾಂಕ್ ಚುನಾವಣೆ ನಡೆಸದೆ ಇರಲು ಕಾರಣವೇನು? ಎಂದು ರೈತ ಸಂಘದ ಅಧ್ಯಕ್ಷೆ ನಳಿನಿಗೌಡ ಪ್ರಶ್ನಿಸಿದರು

ಕನ್ನಡಪ್ರಭ ವಾರ್ತೆ ಕೋಲಾರಡಿ.ಸಿ.ಸಿ ಬ್ಯಾಂಕ್‌ಗೆ ಚುನಾವಣೆ ದಿನಾಂಕ ನಿಗದಿ ಮಾಡಿ ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ರೈತ ಕೂಲಿ ಕಾರ್ಮಿಕ ಹಾಗೂ ಮಹಿಳೆಯರನ್ನು ರಕ್ಷಣೆ ಮಾಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕೋಳಿಗಳು ಹಾಗೂ ನಷ್ಟವಾದ ಬೆಳೆ ಸಮೇತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಮನವಿ ಸಲ್ಲಿಸಿದರು.ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿ.ಸಿ.ಸಿ ಬ್ಯಾಂಕ್ ಚುನಾವಣೆ ನಡೆಸದೆ ಇರಲು ಕಾರಣವೇನು? ಯಾರು ಬ್ಯಾಂಕಿನ ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿಗೆ ಬ್ಯಾಂಕ್ ತಲುಪುತ್ತಿದೆಯೇ ಇಲ್ಲವೇ ಖಾಸಗಿ ಫೈನಾನ್ಸ್ ಮಾಫಿಯಾ ಜೊತೆ ಕಣ್ಣಿಗೆ ಕಾಣದ ಬ್ಯಾಂಕ್ ವಿರೋಧಿಗಳು ಕೈ ಜೋಡಿಸಿದ್ದಾರೆಯೇ ಎಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಪ್ರಶ್ನಿಸಿದರು.ಹೀನಾಯ ಸ್ಥಿತಿಯಲ್ಲಿದ್ದ ಬ್ಯಾಂಕ್‌ನ್ನು ಅಭಿವೃದ್ದಿಪಡಿಸಿ ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ರೈತ ಕೂಲಿಕಾರ್ಮಿಕರನ್ನು ರಕ್ಷಣೆ ಮಾಡಿದ್ದ ಮಾಜಿ ಅದ್ಯಕ್ಷ ಬ್ಯಾಲಹಳ್ಳಿ ಗೊವಿಂದೇಗೌಡರು ಚುನಾವಣೆ ನಡೆಸದ ಬ್ಯಾಂಕ್‌ನ ಬಗ್ಗೆ ಧ್ವನಿ ಎತ್ತದೆ ಮೌನವಾಗಿರಲು ಕಾರಣ ಏನು ಎಂದು ಪ್ರಶ್ನೆ ಮಾಡಿದರು.ರೈತರು, ಸ್ತ್ರೀ ಶಕ್ತಿ ಸಂಘಗಳ ಠೇವಣಿ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು. ಒಂದು ಕಡೆ ಚುನಾವಣೆ ಇಲ್ಲದೆ ತಂದೆ ತಾಯಿ ಇಲ್ಲದ ಅನಾಥ ಮಕ್ಕಳಂತೆ ಆಗಿರುವ ಬ್ಯಾಂಕ್‌ನ ಅವ್ಯವಸ್ಥೆಯನ್ನೇ ಬಂಡವಾಳವಾಗಿಸಿಕೊಂಡು ಗ್ರಾಮೀಣ ಪ್ರದೇಶದ ರೈತ ಕೂಲಿಕಾರ್ಮಿಕರ ಮಹೀಳೆಯರ ಅಮಾಯಕತನವನ್ನು ಬಂಡವಾಳವಾಗಿಸಿಕೊಂಡು ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ, ಕೃಷಿ, ವೈಯಕ್ತಿಕ ಸಾಲದ ಜೊತೆಗೆ ಕನಸಿನ ಮನೆ ಕಟ್ಟಲು ಗೃಹ ಸಾಲ ನೀಡುತ್ತೇನೆಂದು ವಂಚಿಸಲಾಗುತ್ತಿದೆ.ನಯವಾದ ಮಾತುಗಳನ್ನಾಡಿ 1 ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡಿ ಆ ನಂತರ ತಿಂಗಳು ಕಳೆಯುತ್ತದೆಯೋ ಇಲ್ಲವೋ ಎಂಬಂತೆ ತಿಗಣೆ ಹೀರುವ ರಕ್ತದಂತೆ ಬಡವರನ್ನು ಸಾಲ ತೀರಿಸುವಂತೆ ಹಿಂಸೆ ನೀಡುತ್ತಿರುವ ಪ್ರಕರಣಗಳು ಕಣ್ಣಮುಂದೆ ನಡೆಯುತ್ತಿದ್ದರೂ ಸಹಕಾರ ಬ್ಯಾಂಕ್‌ನ್ನು ಉಳಿಸಲು ಮಾತ್ರ ಜನಪ್ರತಿನಿಧಿಗಳು ಮುಂದಾಗದೆ ಬಡವರ ಬ್ಯಾಂಕಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಕಿಡಿಕಾರಿದರು.ಸಾಲ ವಂಚಿತ ರೈತ ಮಹಿಳೆ ಶೈಲಜ ಮಾತನಾಡಿ, ಚುನಾವಣಾ ಸಮಯದಲ್ಲಿ ವೇಮಗಲ್‌ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತು ತಪ್ಪದ ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಹಕಾರ ಸಂಘಗಳಲ್ಲಿ ಮಹಿಳೆಯರು ಎಲ್ಲಾ ಸಾಲ ಮನ್ನಾ ಎಂದು ಮಾತು ಕೊಟ್ಟು ಮಹಿಳೆಯರ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಮಾತು ತಪ್ಪಿದರೆ ಸರ್ಕಾರಕ್ಕೆ ಮಹಿಳೆಯರ ಶಾಪ ತಟ್ಟುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.ಒಂದು ವಾರದಲ್ಲಿ ಡಿ.ಸಿ.ಸಿ ಬ್ಯಾಂಕ್‌ಗೆ ಚುನಾವಣೆ ನಡೆಸಿ ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ರಕ್ಷಣೆ ಮಾಡಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಸಾಲ ವಂಚಿತ ಮಹಿಳೆಯರಿಂದ ಬ್ಯಾಂಕಿನ ಉಳಿವಿಗಾಗಿ ಮಾತು ತಪ್ಪಿದ ಸಿಎಂ ಮನೆ ಮುಂದೆ ಕುಟುಂಬ ಸಮೇತ ಅಹೋರಾತ್ರಿ ಧರಣಿ ಮಾಡುವ ಎಚ್ಚರಿಕೆಯೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ, ಬ್ಯಾಂಕಿಗೆ ಸಂಬಂಧಪಟ್ಟ ಚುನಾವಣೆ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಆದೇಶ ಬಂದ ಕೂಡಲೇ ಚುನಾವಣೆ ನಡೆಸುವ ಭರವಸೆ ನೀಡಿದರು.ಈ ವೇಳೆ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜಗೌಡ, ತಿಮ್ಮಣ್ಣ, ವೆಂಕಟೇಶಪ್ಪ, ಶಿವಾರೆಡ್ಡಿ, ಹೆಬ್ಬಣಿ ಆನಂದ್‌ರೆಡ್ಡಿ, ಯಲ್ಲಪ್ಪ, ಹರೀಶ್, ಚಂದ್ರಪ್ಪ,ತೆರ್ನಹಳ್ಳಿ ಆಂಜಿನಪ್ಪ ಪಾರುಕ್‌ಪಾಷ, ರಾಜೇಶ್, ರತ್ನಮ್ಮ, ವೆಂಕಟಮ್ಮ, ಭಾಗ್ಯಮ್ಮ, ಕಾಂತಮ್ಮ, ಚೌಡಮ್ಮ, ವೆಂಕಟರತ್ನ ಮುನಿಯಮ್ಮ ಇದ್ದರು.ಫೋಟೋ:

ಚಿಕ್ಕಬಳ್ಳಾಪುರದಲ್ಲಿ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕೋಳಿಗಳು ಹಾಗೂ ನಷ್ಟವಾದ ಬೆಳೆ ಸಮೇತ ಪ್ರತಿಭಟನೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌