- ಶಾಸಕ ಡಾ.ಶಿವಶಂಕರಪ್ಪರಿಂದ ಚಾಲನೆ, 13ರ ಸಂಜೆ ಕಾಮದಹನ - - - ದಾವಣಗೆರೆ: ನಗರದ ರಾಂ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದಿಂದ ಮಾ.14ರಂದು ಹೋಳಿ ಆಚರಣೆ ನಡೆಸಲಾಗು ವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ನಾಗೇಂದ್ರ ರೆಡ್ಡಿ ಹೇಳಿದರು.
ಮಾ.13ರಂದು ಸಂಜೆ 7 ಗಂಟೆಗೆ ಕಾಮದಹನ ಮಾಡಲಾಗುವುದು. ಮಾ.14ರ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹೋಳಿ ಆಚರಿಸಲಾಗುತ್ತದೆ. ಸುಮಾರು ಎರಡು ಸಾವಿರ ಪುರುಷರು, ಇತರರು ಸೇರಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಥಳಾವಕಾಶ ಮಾಡಿಕೊಡಲಾಗುವುದು. ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವರು. ಬೆಳಗಾವಿಯಿಂದ ಡಿಜೆ ಸೌಂಡ್ ತರಿಸಲಾಗುವುದು ಎಂದರು.
ಕಾಮದಹನ ಮಾಡುವ ಸಂದರ್ಭದಲ್ಲಿ ಕಾಮದಹನದ ಹಿಂದಿನ ಕಥೆಯ ಬಗ್ಗೆ ಡಿವಿಡಿಯಲ್ಲಿ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಣೆ ಮಾಡಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಈ ಹಿಂದಿನ ವರ್ಷದಂತೆಯೇ ಹೋಳಿ ಆಚರಿಸಲಾಗುವುದು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೋಳಿ ಆಚರಣೆಗೆ ಚಾಲನೆ ನೀಡುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಭಿಷೇಕ್ ಬೇತೂರು, ಬೇತೂರು ಬಸವರಾಜ್, ಶಂಭು ಉರೇಕೊಂಡಿ, ಅಜಿತ್ ಆಲೂರು, ಸುಭಾಶ್ಚಂದ್ರ ಇದ್ದರು.
- - - -9ಕೆಡಿವಿಜಿ41.ಜೆಪಿಜಿ:ದಾವಣಗೆರೆಯ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಿಸುವ ಕುರಿತು ಕೆ. ನಾಗೇಂದ್ರ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.