ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ನಗರದಲ್ಲಿ ಯುವಕ, ಯುವತಿ ಡಾನ್ಸ್ ಮಾಡುವ ಮೂಲಕ ಗಮನ ಸೆಳೆದರೆ, ಗ್ರಾಮೀಣ ಕಲಬುರಗಿಯಲ್ಲಿ ತರಹೇವಾರಿ ವೇಷ ತೊಟ್ಟ ಯುವಕರು ಹೋಳಿ ಸಂಪ್ರದಾಯಗಳನ್ನು ತಮ್ಮೂರುಗಳಲ್ಲಿ ಆಚರಿಸುತ್ತ ಸಂಭ್ರಮಿಸಿದರು.
ಕಲಬುರಗಿ ನಗರದ ಬ್ರಹ್ಮಪೂರ, ಷಹಾಬಜಾರ್, ಸ್ಟೇಷನ್ ಬಜಾರ್, ಕುಂಬಾರವಾಡಿ, ಸಮತಾ ಕಾಲೋನಿ, ರಿಂಗ್ ರಸ್ತೆ ಓಝಾ ಬಡಾವಣೆ, ದತ್ತ ನಗರ, ದೇವ ನಗರ ಇಲ್ಲೆಲ್ಲಾ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಪಟ್ಟರು.ಸೂಪರ್ ಮಾರ್ಕೇಟ್, ಗಂಜ್ ಪ್ರದೇಶ, ಬಸವೇಶ್ವರ ನಗರ ಇಲ್ಲೆಲ್ಲಾ ಬಮ್ಣದೋಕುಳಿಯಿಂದ ತುಂಬಿದ್ದ ನೀರಿನ ಬ್ಯಾರಲ್‌ಗಳಿರುವ ಬಂಡಿಗಳೊಂದಿಗೆ ಯುವಕರು ಹಲಗೆ, ಬಾಂಜಾ, ಭಜಂತ್ರಿ ಬಡಿಯುತ್ತ ಹಾಡು ಹಾಕಿ ಕುಮಿದು ಕುಪ್ಪಳಿಸುತ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಪಟ್ಟರು.
ಹೋಳಿ ಕಾಮ ದಹನ: ಹೋಳಿ ಹಬ್ಬದ ಮುನ್ನಾದಿನವಾದ ಹುಣ್ಣಿಮೆಯದು ನಗರ ಹಾಗೂ ಜಿಲ್ಲಾದ್ಯಂತ ಪ್ರಮುಖ ಗಲ್ಲಿಗಳು, ಬಡಾವಣೆ, ವೃತ್ತಗಳಲ್ಲಿ ಯುವಕರು ಸೇರಿಕೊಂಡು ಕಾಮ ಹನ ಆಚರಿಸಿದರು.
ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿದ್ದರು. ಪತ್ರಕರ್ತರೊಂದಿಗೆ ಬಣ್ಣದೋಕುಳಿ ಆಡಿದ ಉಮೇಶ ಜಾಧವ್, ಬಹುಹೊತ್ತು ಪತ್ರಿಕಾ ಭವನದಲ್ಲೇ ಇದ್ದು ಡಿಜೆ ಸೌಂಡ್‌ಗೂ ಹೆಜ್ಜೆ ಹಾಕಿ ಗಮನ ಸೆಳೆದರು.