ಸಾಲು ಸಾಲು ರಜೆಯಿದ್ದ ಕಾರಣ ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಹೋಗಿ ಕೊನೆಯ ದಿನವಾದ ಇಂದು ಬೆಳಗ್ಗೆ ಐದು ಗಂಟೆಗೆ ನಂದಿ ಹಿಲ್ಸ್‌ಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ಟ್ರಾಫಿಕ್ನಲ್ಲಿ ಸಿಕ್ಕಿಕೊಂಡು ಒದ್ದಾಡುವಂತಾಗಿದೆ
ಚಿಕ್ಕಬಳ್ಳಾಪುರ : ವೀಕೆಂಡ್ ಮತ್ತು ದಸರೆ ರಜೆ ಮುಕ್ತಾಯದ ದಿನವಾದ ಭಾನುವಾರದ ಹಿನ್ನೆಲೆ ನಂದಿಗಿರಿಧಾಮ ಮತ್ತು ಈಶಾಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಇದರಿಂದ ತಾಲೂಕಿನ ನಂದಿಬೆಟ್ಟ ಮತ್ತು ಈಶಾಗೆ ತೆರಳುವ ರಸ್ತೆಗಳು ಮತ್ತು ಪಾರ್ಕಿಂಗ್ ಲಾಟ್ ಫುಲ್ ಆಗಿ ಟ್ರಾಫಿಕ್ ಜಾಮ್ ಉಂಟಾಯಿತು.
ನಂದಿಬೆಟ್ಟದ ರಸ್ತೆಯಲ್ಲಿ ಎಲ್ಲಿ ನೋಡಿದರು ವಾಹನಗಳಿಂದ ತುಂಬಿ ತುಳಿಕಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಐದಾರು ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರರು ಹೈರಾಣ
ಸಂಚಾರದಟ್ಟಣೆ ನಿಯಂತ್ರಿಸಲು ನಂದಿ ಗಿರಿಧಾಮ ಪೊಲೀಸರರು ಹೈರಾಣರಾಗಿದ್ದಾರೆ. ನಂದಿ ಗಿರಿಧಾಮದ ಮೇಲೆ 300 ಕಾರ್‌ಗಳಿಗೆ ಮತ್ತು ಸುಮಾರು ಆರು ನೂರು ಬೈಕ್‌ಗಳಿಗೆ ಮಾತ್ರ ಪಾರ್ಕಿಂಗ್ ವ್ಯೆವಸ್ಥೆ ಇದ್ದು, ಪಾರ್ಕಿಂಗ್ ಲಾಟ್ ಸಹ ತುಂಬಿ ತುಳುಕುತ್ತಿದ್ದು, ವಾಹನ ಸವಾರರ ಮತ್ತು ಪ್ರವಾಸಿಗರ ನಿಯಂತ್ರಿಸಲು ನಂದಿ ಗಿರಿಧಾಮದ ಸಿಬ್ಬಂದಿ ಹರಸಾಹಸಪಟ್ಟರು. ಕಚೇರಿಗಳಿಗೆ ರಜೆ ಇದ್ದು, ಮಕ್ಕಳಿಗೂ ರಜೆ ಇರುವ ಕಾರಣ ನಂದಿಬೆಟ್ಟ ವೀಕ್ಷಣೆಗೆಂದು ಬೆಳಗ್ಗೆ ನಾಲ್ಕುವರೆಗೆ ಆಗಮಿಸಿದ್ದರೂ ಬೆಟ್ಟದ ಅರ್ಧದಾರಿಯಲ್ಲಿಯೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕೊಂಡೆವು. ಸೂರ್ಯೋದಯ, ಇಬ್ಬನಿ ಬೀಳುವುದನ್ನು ಮಕ್ಕಳಿಗೆ ತೋರಿಸಲು ಬಯಸಿದ್ದೆವು. ಆದರೆ ಆಗಲಿಲ್ಲಾ. ಹೋಗಲಿ ನಡೆದು ಹೋಗೋಣಾವೆಂದರೆ ಸುಸ್ತಾಗುತ್ತದೆ ಎಂದು ಬೆಂಗಳೂರಿನ ಟೆಕ್ಕಿ ಹರಿಪ್ರೀತ್ ಸಿಂಗ್ ಹೇಳಿದರು.ಟ್ರಾಫಿಕ್‌ನಲ್ಲಿ ಸವಾರರ ಸಂಕಷ್ಟ
ಸಾಲು ಸಾಲು ರಜೆಯಿದ್ದ ಕಾರಣ ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಹೋಗಿ ಕೊನೆಯ ದಿನವಾದ ಇಂದು ಬೆಳಗ್ಗೆ ಐದು ಗಂಟೆಗೆ ನಂದಿ ಹಿಲ್ಸ್‌ಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ಟ್ರಾಫಿಖ್‌ನಲ್ಲಿ ಸಿಕ್ಕಿಕೊಂಡು ಒದ್ದಾಡುವಂತಾಗಿದೆ. ಪ್ರವಾಸಿಗರು ವಾಪಸ್ ಹೋಗಲು ಸಾಧ್ಯವಾಗದಷ್ಟು ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ಮೊದಲೆಲ್ಲಾ ನಂದಿ ಬೆಟ್ಟದ ಪ್ರವೇಶದಲ್ಲೇ ಪೋಲಿಸರು ಸೀಮಿತ ವಾಹನಗಳನ್ನು ಮಾತ್ರ ಕಳುಹಿಸಿ ಅವು ವಾಪಸ್ ಬಂದಂತೆ ಬೇರೆ ವಾಹನ ಕಳುಹಿಸುತ್ತಿದ್ದರು. ಈಗ ಆ ಪದ್ಧತಿಯೂ ಇಲ್ಲ.
ನಂದಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯ ಸವಿಯಲು ಎಷ್ಟೋ ದೂರದ ಸ್ಥಳಗಳಿಂದ ಪ್ರವಾಸಿಗರು ಆಗಮಿಸಿರುತ್ತಾರೆ. ಆದರೆ ಿಲ್ಲಿಯ ಅವ್ಯವಸ್ಥೆ ಅವರ ನಿರೀಕ್ಷೆಗಳನ್ನೆಲ್ಲ ಹುಸುಗೊಳಿಸುತ್ತದೆ. ಚುಮು ಚುಮು ಚಳಿಗೆ ಕಾಫೀ, ಟೀ ಕುಡಿಯೋಣ ಅಥವಾ ಏನಾದರು ಸ್ನಾಕ್ಸ್ ತಿಣ್ಣೋನ ಎಂದರೆ ಹಣವಿದ್ದರೂ ಏನೂ ಸಿಗುತ್ತಿಲ್ಲಾ ಎಂಬುದು ಪ್ರವಾಸಿಗರ ಆರೋಪ.
ನಂದಿಬೆಟ್ಟದಲ್ಲಿ ಜನವೋಜನ
ಭಾನುವಾರ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಮುಂಜಾನೆಯಿಂದಲೆ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರ ದಾಂಗುಡಿ ಜೋರಾಗಿತ್ತು. ಪ್ರಕೃತಿಯ ಮಡಿಲಲ್ಲಿ ಪ್ರೇಮ ಪಕ್ಷಿಗಳ ಕಲರವ ಹೆಚ್ಚಾಗಿತ್ತು. ಪ್ರವಾಸಿಗರು ಬಂದ ವಾಹನಗಳಿಂದ ಬೆಟ್ಟದ ಮೇಲಿನ ಪಾರ್ಕಿಂಗ್ ಲಾಟ್ ಫುಲ್ ಆಗಿತ್ತು.
ನಂದಿ ಬೆಟ್ಟದಲ್ಲಿ ಕಾರು ಪಾರ್ಕಿಂಗ್ ಹೌಸ್ ಫುಲ್ ಆದ ಕಾರಣ ಕೆಲವರು ಬೆಟ್ಟದ ಬುಡದವರೆಗೂ ಬಂದು ವಾಪಸ್ ಹೋಗುವಂತಾಯಿತು. ಅಧೇ ರೀತಿ ಈಶಾಗೆ ಬಂದವರಿಗೆ ರಾಷ್ಟ್ರೀಯ ಹೆದ್ದಾರಿ 44 ರ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು
ವೀಕೆಂಡ್ ಆಗಿದ್ದರಿಂದ ಆವಲಗುರ್ಕಿಬಳಿಯ ಈಶಾದ 112 ಅಡಿ ಆದಿಯೋಗಿ ಪ್ರತಿಮೆ ವೀಕ್ಷಸಲು ಭಾನುವಾರ ಪ್ರವಾಸಿಗರ ದಂಡೇ ನೆರೆದಿತ್ತು. ಸಾಕಷ್ಟು ಮಂದಿ ಬಂದಿದ್ದರಿಂದ ಗಂಟೆಗಟ್ಟಲೇ ಸಾಲಿನಲ್ಲಿ ಕಾಯಬೇಕಾಯಿತು.