ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ ಶಿಪ್ ಯಶಸ್ವಿ

KannadaprabhaNewsNetwork |  
Published : Aug 25, 2026, 01:15 AM IST
28 | Kannada Prabha

ಸಾರಾಂಶ

ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ 52 ವಿಜೇತರಿಗೆ ಪ್ರಶಸ್ತಿಗಳು ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಯೋಗ ವಿಭಾಗವು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ 1ನೇ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ ಶಿಪ್– 2026 ಅನ್ನು ಯಶಸ್ವಿಯಾಗಿ ಆಯೋಜಿಸಿತು.ಯೋಗಾಸನದ ಮೂಲಕ ದೈಹಿಕ ಸದೃಢತೆ, ಮಾನಸಿಕ ಕ್ಷೇಮ, ಏಕಾಗ್ರತೆ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ. ನಾರಾಯಣಪ್ಪ ಉದ್ಘಾಟಿಸಿದರು. ಸರ್ಕಾರಿ ನೇಚರ್ ಕ್ಯೂರ್ ಯೋಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಡಿ.ಎಸ್. ಭರತೀಶ್, ಜೆಎಸ್ಎಸ್ ಅಹೆರ್ ಉಪ ಡೀನ್ ಡಾ.ಎಸ್. ಚಂದನ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಜಿ. ದೇವರಾಜು, ಯೋಗ ವಿಭಾಗದ ಡಾ.ಎಂ.ಯು. ಸುಜನ್, ವಿ.ಎಂ. ಜಾಹ್ನವಿ, ರುದ್ರೇಶ್, ಸಂಜಯ್ ಮೊದಲಾದವರು ಇದ್ದರು.ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ 52 ವಿಜೇತರಿಗೆ ಪ್ರಶಸ್ತಿಗಳು ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಸಮಾರೋಪ ಸಮಾರಂಭದಲ್ಲಿ ಪುರುಷರ ವಿಭಾಗದಲ್ಲಿ ಎಚ್.ಎಂ. ತನೂಷ್ ಅವರಿಗೆ ಯೋಗಾಸನ ಶ್ರೀ ಹಾಗೂ ಮಹಿಳಾ ವಿಭಾಗದಲ್ಲಿ ವೇದಿಕಾ ಮಾನ್ಯ ಶಿವಂ ಅವರಿಗೆ ಯೋಗಾಸನ ಸಿರಿ ಬಿರುದುಗಳನ್ನು ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು.ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಎಸ್.ಆರ್. ಸತೀಶ್ ಚಂದ್ರ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ರಮೇಶ್ ಕುಮಾರ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಫುರ ಜಿಲ್ಲೇಲಿ 9,44,623 ಮತದಾರರು
ಕರಾಟೆ ಇನ್ನೊಬ್ಬರ ಮೇಲಿನ ದಾಳಿಗೆ ಉಪಯೋಗಿಸುವಂಥ ಕಲೆಯಲ್ಲ: ಪಿ. ವೈ.ಶಿಹಾನ್ ನಾಸಿರುದ್ದೀನ್