ಕುಕನೂರು: ಸೈನಿಕರು, ರೈತರ ಜತೆಗೆ ಗೃಹ ರಕ್ಷಕ ದಳ ಸಿಬ್ಬಂದಿಗೆ ಸರ್ಕಾರ ನಾನಾ ಸೌಲಭ್ಯ ಸಿಗಬೇಕು ಎಂದು ತಾಪಂ ಮಾಜಿ ಉಪಾದ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಜಿಲ್ಲಾ ಗೃಹ ರಕ್ಷಕ ದಳದ ಮಾಜಿ ಸಮಾದೇಷ್ಠ ಸೋಮನಗೌಡ ಎಂ.ಪಾಟೀಲ್ ಮಾತನಾಡಿ, 1980ರ ದಶಕದಲ್ಲಿ ಗೃಹ ರಕ್ಷಕ ದಳ ಸೇವೆಯಲ್ಲಿದ್ದವರಿಗೆ ಸರ್ಕಾರಿ ನೌಕರಿ ನೇಮಕಾತಿಯಲ್ಲಿ 5%ರಷ್ಟು ಮೀಸಲಾತಿ ಇತ್ತು. ಅದು ಸದ್ಯ ಇಲ್ಲ. ಅದನ್ನು ಮರಳಿ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ 13 ಪೊಲೀಸ್ ಠಾಣೆಯಲ್ಲಿಯೇ ರಾಜ್ಯದಲ್ಲಿ ಎಲ್ಲೂ ಇರದಂತೆ ಗೃಹ ರಕ್ಷಕ ದಳ ಘಟಕಗಳಿವೆ. ಪೊಲೀಸರಿಗೆ ಸದಾ ಹೆಗಲು ಕೊಟ್ಟು ಗೃಹ ರಕ್ಷಕ ದಳ ಸಿಬ್ಬಂದಿ ಕಾರ್ಯ ಮಾಡುತ್ತಾರೆ. ಸೇವೆ, ಶಿಸ್ತು, ತ್ಯಾಗ ಹಾಗೂ ಬದ್ಧತೆಗೆ ಗೃಹ ರಕ್ಷಕ ದಳ ಹೆಸರು ಆಗಿದೆ ಎಂದರು.
ಗುರುಕುಲ ಸಂಸ್ಥೆಯ ಕಾರ್ಯಾಧ್ಯಕ್ಷ ಶರಣಪ್ಪ ಹೊಸಮನಿ ಮಾತನಾಡಿ, ಗೃಹ ರಕ್ಷಕ ದಳದವರನ್ನು ಪ್ರತಿಯೊಬ್ಬರು ಗೌರವಿಸಬೇಕು.ಅವರ ಸೇವೆಗೆ ತಕ್ಕ ಪ್ರತಿಫಲ ಸಿಗಬೇಕು ಎಂದರು.ನಿವೃತ್ತ ಪ್ರಾಚಾರ್ಯ ಕೆ.ಆರ್.ಕುಲಕರ್ಣಿ ಮಾತನಾಡಿ, ರಾಜ್ಯ ಸರ್ಕಾರ ಗೃಹ ರಕ್ಷಕ ದಳ ನಿಗಮ ಸ್ಥಾಪಿಸಬೇಕು ಎಂದರು.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಬಸವನಗೌಡ ಮಾಲಿಪಾಟೀಲ್, ಕುಷ್ಟಗಿಯ ಗೃಹ ರಕ್ಷಕ ದಳ ಸಿನಿಯರ್ ಪ್ಲಟೂನ್ ರವೀಂದ್ರ ಬಾಕಳೆ ಮಾತನಾಡಿದರು.ಗೃಹ ರಕ್ಷಕ ದಳ ಜಿಲ್ಲಾ ಸಮಾದೇಷ್ಠ ಕೆ.ಲಕ್ಷ್ಮಣ, ಪಪಂ ಅಧ್ಯೆಕ್ಷೆ ಲಲಿತಮ್ಮ ಯಡಿಯಾಪೂರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ಪಪಂ ಸದಸ್ಯ ಗಗನ ನೋಟಗಾರ, ಜ.ವಿ.ಜಹಗೀರದಾರ, ಅಮರೇಶ ಮಡ್ಡೆಕರ್, ವೀರಣ್ಣ ಅಣ್ಣಿಗೇರಿ, ಶ್ರೀಕಾಂತ ಕುಲಕರ್ಣಿ, ವೈದ್ಯ ಶಿವಕುಮಾರ ಕಂಬಳಿ, ಚಂದ್ರು ಹಲಗೇರಿ, ಈಶಯ್ಯ ಶಿರೂರಮಠ, ಗೃಹ ರಕ್ಷಕ ದಳದ ಕಂಪನಿ ಕಮಾಂಡರ್ ವೀರಣ್ಣ ಬಡಿಗೇರ, ಕುಕನೂರು ಘಟಕಾಧಿಕಾರಿ ಬಾಳಪ್ಪ ಯತ್ನಟ್ಟಿ, ಗೃಹ ರಕ್ಷದ ದಳದ ಸಿಬ್ಬಂದಿಗಳಿದ್ದರು.