-ಚರಬಸವೇಶ್ವರ ಸಂಗೀತ ಸೇವಾ ಸಮಿತಿಯಿಂದ 16ನೇ ವರ್ಷದ ಮಹಿಳಾ ಮಹೋತ್ಸವ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ಶಹಾಪುರ
ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಪರಂಪರೆಯನ್ನು ಮುಂದಿನ ಜನಾಂಗಕ್ಕಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಮ್ಮ ಸಂಸ್ಕೃತಿ, ಸಂಸ್ಕಾರದ ತವರೂರು ನಮ್ಮ ಸಗರನಾಡಾಗಿದೆ. ಈ ನಾಡಿಗೆ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಸೇವಾ ಕಾರ್ಯ ಶ್ಲಾಘನೀಯ ಎಂದು ಭಾರತಿ ಎಸ್. ದರ್ಶನಾಪುರ ಹೇಳಿದರು.ನಗರದಲ್ಲಿ ಚರಬಸವೇಶ್ವರ ಸಂಗೀತ ಸೇವಾ ಸಮಿತಿಯಿಂದ ನಡೆದ 16ನೇ ವರ್ಷದ ಮಹಿಳಾ ಮಹೋತ್ಸವ ಹಾಗೂ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶರಣರು 12ನೇ ಶತಮಾನದಲ್ಲಿಯೇ ಸ್ತ್ರೀಯರಿಗೆ ಸಮಾನತೆ ನೀಡುವ ಮೂಲಕ ಅವರ ಆತ್ಮಗೌರವ ಹೆಚ್ಚಿಸಿದರು. ಅವರಿಗೆ ಇನ್ನು ಹೆಚ್ಚಿನ ಆದ್ಯತೆ ನೀಡುವ ಮೂಲಕ ನವಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು.ಕಾರ್ಯಕ್ರಮದ ವ್ಯವಸ್ಥೆಯನ್ನು ಶಿವಲೀಲಾ ಸಿದ್ದರಾಮ ಉಪ್ಪಿನ್ ಸೇವೆ ಸಮರ್ಪಿಸಿದರು. ನೂರಾರು ಮುತ್ತೈದೆಯರಿಗೆ ಉಡಿತುಂಬಿ ಶುಭ ಹಾರೈಸಲಾಯಿತು. ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಚರಬಸವೇಶ್ವರ ಗದ್ದುಗೆಯ ಪೀಠಾಧಿಪತಿ ಬಸವಯ್ಯ ಶರಣರು ಹಾಗೂ ಶರಣು ಗದ್ದುಗೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಅವರ ಪತ್ನಿ ಭಾರತಿ ಎಸ್. ದರ್ಶನಾಪುರ ದಂಪತಿಗೆ ಸನ್ಮಾನಿಸಿ, ಗೌರವಿಸಿದರು.ವಾಸ್ತು ಸಂಶೋಧಕ ಎ.ಬಿ. ಪಾಟೀಲ್, ಅಂಬಾರಾಯ ಅಷ್ಟಿಗೆ, ಡಾ. ಗುರುಲಿಂಗಪ್ಪ, ಯಾದಗಿರಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷೆ ಕವಿತಾ ವಿನಯ್ ಪಾಟೀಲ್, ಡಾ. ಸ್ನೇಹಾರೆಡ್ಡಿ, ಡಾ. ಸುಧಾ, ಡಾ.ರಾಜೇಶ್ವರಿ, ನಗರಸಭೆ ಮಾಜಿ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ ಇದ್ದರು.
ಫೋಟೊ..17ವೈಡಿಆರ್4: ಶಹಾಪುರ ನಗರದಲ್ಲಿ ನಡೆದ ಚರಬಸವೇಶ್ವರ ಸಂಗೀತ ಸೇವಾ ಸಮಿತಿಯಿಂದ 16ನೇ ವರ್ಷದ ಮಹಿಳಾ ಮಹೋತ್ಸವ ಕಾರ್ಯಕ್ರಮ ಜರುಗಿತು.
-17ವೈಡಿಆರ್5: ಶಹಾಪುರ ನಗರದಲ್ಲಿ ನಡೆದ ಚರಬಸವೇಶ್ವರ ಸಂಗೀತ ಸೇವಾ ಸಮಿತಿಯಿಂದ 16ನೇ ವರ್ಷದ ಮಹಿಳಾ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ದರ್ಶನಾಪುರ ಹಾಗೂ ಅವರ ಪತ್ನಿ ಭಾರತಿ ಎಸ್. ದರ್ಶನಾಪುರ ದಂಪತಿಗೆ ಸನ್ಮಾನಿಸಲಾಯಿತು.