ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕೃಷ್ಣನಗರ ಮೂರನೇ ಹಂತದ ಅರಣ್ಯ ಇಲಾಖೆ ಬಳಿ ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ರಾಮನಗರ ರಾಕ್ಸ್ ಹಾಗೂ ಚುಂಚನಗಿರಿ ತಂಡಗಳ ಸೆಣಸಾಟ ನಡೆಸಿದವು.
ಪ್ರಾರಂಭದಿಂದಲೂ ಉತ್ತಮ ಆಟ ಪ್ರದರ್ಶಿಸುವ ಮೂಲಕ ಚುಂಚನಗಿರಿ ತಂಡ ಮೇಲುಗೈ ಸಾಧಿಸಿತು. ಅಂತಿಮವಾಗಿ ಚುಂಚನಗಿರಿ ತಂಡವು 30-6 ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿತು. ಬಳಿಕ ಬಿಡದಿ ಹಾಗೂ ಹಂಪಾಪುರ ನಡುವೆ ಸೆಣಸಾಟದಲ್ಲಿ ಎರಡು ತಂಡಗಳು ಸಮ ಬಲ ಹೋರಾಟ ನಡೆಸಿದವು. ಅಂತಿಮವಾಗಿ ಬಿಡದಿ ತಂಡವು 14-12 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.ಈ ವೇಳೆ ಪ್ರಾಯೋಗಿಕವಾಗಿ ನಡೆದ ಚಿಕ್ಕಮಕ್ಕಳ ಪಂದ್ಯಾವಳಿಯಲ್ಲಿ ಕಿರಿಕ್ ಬಾಯ್ಸ್ ಹಾಗೂ ಭಜರಂಗಿ ತಂಡಗಳು ಸೆಣಸಾಟ ನಡೆಸಿದವು. ಕಿರಿಕ್ ಬಾಯ್ಸ್ ತಂಡ ಅಂತಿಮವಾಗಿ ಗೆಲುವು ಸಾಧಿಸಿತು. ತೀವ್ರ ಕೂತುಹಲ ಕೆರಳಿಸಿದ್ದ ಈ ಪಂದ್ಯಾವಳಿಯಲ್ಲಿ ಹಲವು ರೋಚಕಗಳು ನಡೆದವು. ಎರಡು ತಂಡಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.
ಪಂದ್ಯಾವಳಿಯಲ್ಲಿ ರಾಮನಗರ, ಬಿಡದಿ, ಚುಂಚನಗಿರಿ ಹಾಗೂ ಹಂಪಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ತಂಡಗಳು ಭಾಗವಹಿಸಿದ್ದವು.