ಪ್ರಾಮಾಣಿಕತೆಯೇ ಜೀವನದ ಮೌಲ್ಯ: ಸಾಹಿತಿ ಚಟ್ನಹಳ್ಳಿ ಮಹೇಶ್

KannadaprabhaNewsNetwork |  
Published : Dec 01, 2024, 01:30 AM IST
      ಪ್ರಾಮಾಣಿಕತೆಯೇ ಜೀವನದ ಮೌಲ್ಯಃ ಸಾಹಿತಿ ಚಟ್ನಹಳ್ಳಿ ಮಹೇಶ್ | Kannada Prabha

ಸಾರಾಂಶ

ತರೀಕೆರೆ, ಪ್ರಾಮಾಣಿಕತೆಯೇ ಜೀವನದ ಮೌಲ್ಯ ಎಂದು ಚಿಕ್ಕಮಗಳೂರು ಸಾಹಿತಿ ಚಟ್ನಹಳ್ಳಿ ಮಹೇಶ್ ಹೇಳಿದರು.ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತರೀಕೆರೆ ಕಸಾಪ ಆಶ್ರಯದಲ್ಲಿ ಶಿಕ್ಷಕರು ಚೇತನ್ ಗೌಡ ಅವರ ಮನೆಯಂಗಳದಲ್ಲಿ ಚಿಂತನ ಕಾರ್ತಿಕ-2024, ದಾಸ ಮತ್ತು ಶರಣ ಸಾಹಿತ್ಯದ ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಂತನ ಕಾರ್ತಿಕ-2024 । ದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯದ ಅನುಸಂಧಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಪ್ರಾಮಾಣಿಕತೆಯೇ ಜೀವನದ ಮೌಲ್ಯ ಎಂದು ಚಿಕ್ಕಮಗಳೂರು ಸಾಹಿತಿ ಚಟ್ನಹಳ್ಳಿ ಮಹೇಶ್ ಹೇಳಿದರು.ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತರೀಕೆರೆ ಕಸಾಪ ಆಶ್ರಯದಲ್ಲಿ ಶಿಕ್ಷಕರು ಚೇತನ್ ಗೌಡ ಅವರ ಮನೆಯಂಗಳದಲ್ಲಿ ಚಿಂತನ ಕಾರ್ತಿಕ-2024, ದಾಸ ಮತ್ತು ಶರಣ ಸಾಹಿತ್ಯದ ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಬದುಕಿನ ಲಾಲಿತ್ಯಕ್ಕೆ ಸಾಹಿತ್ಯ ಬಹಳ ಉಪಯುಕ್ತ. ಜೀವನದ ಒಂದು ಭಾಗವಾದ ಸಾಹಿತ್ಯ ಮನುಷ್ಯನನ್ನು ಉತ್ತೇಜಿಸುತ್ತದೆ. ಇಂದು ಮನುಷ್ಯ ಒತ್ತಡದ ಜೀವನ ಸಾಗಿಸುತ್ತಿದ್ದಾನೆ. ಆದರೆ 12ನೇ ಶತಮಾನದಲ್ಲಿ ಶರಣರು ಮೌಲ್ಯಯುತ , ದಾಸರು ಬದುಕಿನ ವಾಸ್ತವತೆ ಅರಿತು ಜೀವನ ನಡೆಸಿದ್ದರು ಎಂದು ಹೇಳಿದರು.

ಮಾತೆಂಬುದು ಜ್ಯೋತಿರ್ಲಿಂಗ ಎಂದು ಶರಣರು ಹೇಳಿದ್ದು ಬಸವಣ್ಣರ ಪ್ರಕಾರ ಮಾತು ಸುಭಾಷಿತ ವಾಗಿರಬೇಕು. ಸರ್ವಕಾಲಕ್ಕೂ ಅದು ಎಲ್ಲರಿಗೂ ಒಪ್ಪಿಗೆಯಾಗುವಂತಿರಬೇಕು. ನಡೆ ನುಡಿ ಒಂದಾಗಿರಬೇಕು ಅದು ನಾಲಿಗೆ ಪರಿಶುದ್ಧವಾಗಿದ್ದರೆ ಮಾತ್ರ ಸಾಧ್ಯ. ನಾಲಿಗೆ ಕುಲವನ್ನು ಹೇಳುತ್ತದೆ. ಜಾತಿ ವಿರುದ್ಧ ಹೋರಾಡಿದ ವಚನಕಾರರು. ಬಹಳ ಉತ್ಕೃಷ್ಟವಾದ ವಚನಗಳ ಮುಖಾಂತರ ಜಾತಿ ಅಸಮಾನತೆ ವಿರುದ್ಧ ಹೋರಾಡಿದ್ದಾರೆ.

ಭಜನೆ, ಪ್ರಾರ್ಥನೆ ಸಾಹಿತ್ಯ ಓದುವ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮನಸುಗಳ ಬೆಸುಗೆಯಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದಕ್ಕೆ ಹಬ್ಬಗಳು ಎಲ್ಲರೂ ಒಂದು ಎಂಬ ಭಾವನೆ ಮೂಡಿಸುತ್ತವೆ, ಸಡಗರ ಸಂಭ್ರಮ ಸಹ ಅಲ್ಲಿ ಮನೆ ಮಾಡಿರುತ್ತದೆ. ಸಾಹಿತ್ಯದ ಬಲದಿಂದ ಆತ್ಮಸ್ಥೈರ್ಯ ವೃದ್ಧಿಸುತ್ತದೆ ಸಾಹಿತ್ಯ ಓದಬೇಕು ಅದು ವಾಸ್ತವತೆ ಅರಿವಿನೊಂದಿಗೆ ಸಾತ್ವಿಕ ಪ್ರಜ್ಞೆ ಮೂಡಿಸಿ ಮನಸ್ಸು ಹಗುರಾಗುತ್ತದೆ ಎಂದು ತಿಳಿಸಿದರು.

ಅದೇ ರೀತಿ ದಾಸ ಸಾಹಿತ್ಯದಲ್ಲಿ ಕನಕದಾಸರು ಸಹ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ನೇನಾದರೂ ಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ. ಜಾತಿಗಳ ನಡುವಿನ ಕಂದಕ ಅಳಿಸಲು ಬಹಳಷ್ಟು ಶ್ರಮ ಪಟ್ಟವರು ಕನಕದಾಸರು ಎಂದರು. ದಾಸ ಸಾಹಿತ್ಯದಲ್ಲಿ ದೇವರ ಇರುವಿಕೆ ಒತ್ತಿ ಹೇಳಿದ್ದಾರೆ. ಕನಕದಾಸರ ಬಾಳೆಹಣ್ಣಿನ ಪ್ರಸಂಗದ ಮುಖಾಂತರ ಅದರ ದುಷ್ಟಾಂತ ವಿವರಿಸಿದ್ದಾರೆ. ನಾನು ಎಂಬ ಅಹಂಕಾರ ಬಿಟ್ಟರೆ ಸ್ವರ್ಗಕ್ಕೂ ಹೋಗಬಹುದು ಎಂದು ಹೇಳಿದ್ದಾರೆ. ಜ್ಞಾನ ಎಂಬುದು ಎಲ್ಲರ ಸ್ವತ್ತು. ಜ್ಞಾನವನ್ನು ಎಲ್ಲರೂ ಸಂಪಾದಿಸಿಕೊಳ್ಳಬೇಕು. ಬಲ್ಲವರೊಡನೆ ಸಂಘ ಮಾಡಬೇಕು, ಸತ್ಯವಂತರ ಸಂಘವಿರಲು ತೀರ್ಥವಾತಕೆ, ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕ್ಕೆ ಎಂದು ಜೀವನದ ಮೌಲ್ಯ ಎತ್ತಿ ಹಿಡಿದಿದ್ದಾರೆ ದಾಸ ಮತ್ತು ಶರಣ ಸಾಹಿತ್ಯ ಎರಡೂ ಒಂದೇ ಮಿಳತದಿಂದ ಉಗಮಿಸಿದವು ಎಂದು ಹೇಳಿದರು. ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಈ ಚಿಂತನ ಕಾರ್ಯಕ್ರಮ ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿ. ಹಲವು ಮನಸ್ಸುಗಳನ್ನು ಒಂದೆಡೆ ಸೇರಿಸುವ ಕಾರ್ಯಕ್ರಮ. ಮನೆಯಂಗಳದ ಕಾರ್ಯಕ್ರಮಗಳು ಚಿಂತನ ಲಹರಿಗಳು ಚರ್ಚಾಗೋಷ್ಠಿಗಳ ಮುಖಾಂತರ ಸಾಹಿತ್ಯದ ಅರಿವು ಹೆಚ್ಚಾಗುತ್ತದೆ. ಸಾಹಿತ್ಯ ವೃದ್ಧಿಯಾಗುವುದು ಕೇಳುವಿಕೆಯಿಂದ ಮನಸು ಸಹ ಹಗುರಾಗುತ್ತದೆ. ಅರ್ಥಪೂರ್ಣವಾದ ಇಂತಹ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.ಸಹಕಾರ ರತ್ನಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ಮಾತನಾಡಿ ಜೀವನದಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು ನುಡಿದಂತೆ ನಡೆಯುವುದು ಒಂದು ಆದರ್ಶ ಜೀವನ. ಇಂತಹ ಮನೆಯಂಗಳದ ಕಾರ್ಯಕ್ರಮ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ ಮನುಷ್ಯ ಜಾತಿ ತಾನೊಂದೇ ವಲಂ ಎಂಬಂತೆ ಎಲ್ಲರನ್ನೂ ಒಟ್ಟುಗೂಡಿಸಿ, ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಹೆಚ್ಚು ಹೆಚ್ಚು ಸಾಹಿತ್ಯದ ಅರಿವು ಮೂಡಿಸುವ ಕಾರ್ಯಕ್ರಮ ಜರುಗಬೇಕು ಎಂದು ಹೇಳಿದರು. ಬೆಂಗಳೂರು ಗುತ್ತಿಗೆದಾರ ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ರವಿದಳವಾಯಿ, ಟಿ.ದಾದಾಪೀರ್, ಪುರಸಭೆ ಮುಖ್ಯಾಧಿ ಕಾರಿ ಎಚ್.ಪ್ರಶಾಂತ್, ಮಂಜುನಾಥ್, ಚಂದ್ರಶೇಖರ್ ಕನ್ನಡ ಗೀತ ಹಾಡಿದರು. ಎಂ. ಎಸ್. ವಿಶಾಲಾಕ್ಷಮ್ಮ, ಹೊನ್ನೇಶ್, ತಾ. ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ, ಕಸಾಪ ನಿಕಟಪೂರ್ವ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಎ. ದಾದಾಪೀರ್, ಶಶಿಧರ್, ದೇವರಾಜು, ಜಯಸ್ವಾಮಿ, ಚೇತನ್ ಗೌಡ. ವಿರೂಪಾಕ್ಷ, ಶಂಕ್ರಪ್ಪ ಭಾಗವಹಿಸಿದ್ದರು.

29ಕೆಟಿಆರ್.ಕೆ.08ಃ

ತರೀಕೆರೆಯ ಶಿಕ್ಷಕ ಚೇತನ್ ಗೌಡ ಮನೆಯಂಗಳದಲ್ಲಿ ನಡೆದ ಚಿಂತನ ಕಾರ್ತಿಕ-2024 ದಾಸ ಸಾಹಿತ್ಯ ಮತ್ತು ಶರಣ ಸಾಹಿತ್ಯ ಅನುಸಂಧಾನದಲ್ಲಿ ಚಿಕ್ಕಮಗಳೂರು ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿದರು. ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ