ಪ್ರಸಕ್ತ ಸಾಲಲ್ಲಿ ಹೊನ್ನಾಳಿ ಕೃಷಿ ಬ್ಯಾಂಕ್‌ಗೆ ₹ 44 ಲಕ್ಷ ಲಾಭ: ಕೆ.ಜಿ.ರಮೇಶ್

KannadaprabhaNewsNetwork |  
Published : Aug 13, 2025, 12:30 AM IST
ಹೊನ್ನಾಳಿಃ- ಪಟ್ಟಣದ  ಹಿರೇಕಲ್ಮಠದ  ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬ್ಯಾಂಕ್ ನ 87ನೇ ವಾರ್ಷಿಕ  ಮಹಾಸಭೆಯನ್ನು ಉದ್ಘಾಟಿಸಿ ಹಾಗೂ ಅಧ್ಯಕ್ಷತೆವಹಿಸಿಬ್ಯಾಂಕ್ ನ ಅಧ್ಯಕ್ಷ ಅರಬಗಟ್ಟೆ ಕೆ.ಜಿ.ರಮೇಶ್  ಮಾತನಾಡಿದರು.  | Kannada Prabha

ಸಾರಾಂಶ

ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2024-25ನೇ ಸಾಲಿಗೆ ₹44.01 ಲಕ್ಷ ನಿವ್ವಳ ಲಾಭಗಳಿಸಿದ್ದು, ಇಂದಿನ ಸ್ಪರ್ಧಾತ್ಮಕ ಬ್ಯಾಂಕಿಂಗ್ ಯುಗದಲ್ಲೂ ಕೂಡ ತಾಲೂಕಿನ ಹೆಮ್ಮೆಯ ಈ ನಮ್ಮ ಬ್ಯಾಂಕ್ ತನ್ನ ವಿಶಿಷ್ಟತೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2024-25ನೇ ಸಾಲಿಗೆ ₹44.01 ಲಕ್ಷ ನಿವ್ವಳ ಲಾಭಗಳಿಸಿದ್ದು, ಇಂದಿನ ಸ್ಪರ್ಧಾತ್ಮಕ ಬ್ಯಾಂಕಿಂಗ್ ಯುಗದಲ್ಲೂ ಕೂಡ ತಾಲೂಕಿನ ಹೆಮ್ಮೆಯ ಈ ನಮ್ಮ ಬ್ಯಾಂಕ್ ತನ್ನ ವಿಶಿಷ್ಟತೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ ಎಂದರೆ ಇದಕ್ಕೆ ಬ್ಯಾಂಕ್‌ನ ಎಲ್ಲಾ ಸದಸ್ಯರ, ಅಡಳಿತ ಮಂಡಳಿ, ಸಿಬ್ಬಂದಿಳ ಸಹಕಾರ ಕಾರಣ ಎಂದು ಬ್ಯಾಂಕ್‌ನ ಅಧ್ಯಕ್ಷ ಅರಬಗಟ್ಟೆ ಕೆ.ಜಿ.ರಮೇಶ್ ಹೇಳಿದರು.

ಪಟ್ಟಣದ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬ್ಯಾಂಕ್‌ನ 87ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊನ್ನಾಳಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ 1938ರ ಅ.20ರಂದು ಆರಂಭಗೊಂಡಿದ್ದು, ಈ ಬ್ಯಾಂಕಿನ ಕಾರ್ಯವ್ಯಾಪ್ತಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕನ್ನು ವ್ಯಾಪಿಸಿದೆ. 2024-25ರ ಆರಂಭದ ಸದಸ್ಯರ ಸಂಖ್ಯೆ 6021 ಈ ಸಾಲಿನಲ್ಲಿ ಸೇರ್ಪಡೆಯಾದ ಸದಸ್ಯರು 206, ಸದಸ್ಯತ್ಯದಿಂದ ಕಡಿಮೆಯಾದವರು 64, ಇರುವ ಒಟ್ಟು ಸದಸ್ಯರ ಸಂಖ್ಯೆ 6123 ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಬ್ಯಾಂಕಿಗೆ ಕೊಡಬೇಕಾದ ವಾರ್ಷಿಕ ತಗಾದೆ 274.11 ಲಕ್ಷ ರು., ರಾಜ್ಯ ಬ್ಯಾಂಕಿಗೆ ಪಾವತಿಸಿದ ಮೊತ್ತವೂ ಅದೇ ಅಗಿದ್ದು ಯಾವುದೇ ಬಾಕಿ ಇರುವುದಿಲ್ಲ. ಪಾವತಿಸಿದ ಸಾಧನೆ ಶೇಕಡ 100 ಅಗಿದ್ದು ಇದು ಬ್ಯಾಂಕಿನ ಸಾಧನೆಯಾಗಿದೆ ಎಂದು ಹೇಳಿದರು.

2025-26ನೇ ಸಾಲಿಗೆ ನಿರೀಕ್ಷೆ ಖಾತೆಗಳ ಅಂದಾಜು ಆದಾಯ ಒಟ್ಟು 266520000 ರು. ಅಗಿದ್ದು, ನಿರೀಕ್ಷೆ ಖಾತೆಗಳ ಅಂದಾಜು ಖರ್ಚುಗಳು ಒಟ್ಟು 20680000 ರು. ಅಗಿದೆ/ 2025-26ನೇ ಸಾಲಿಗೆ ಒಟ್ಟು ನಿರೀಕ್ಷಿಸಬಹುದಾದ ಉಳಿತಾಯ ಒಟ್ಟು 5972000 ರು. ಅಗಿದೆ ಎಂದು ಸಭೆಯಲ್ಲಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸಹಕಾರಿ ಬ್ಯಾಂಕ್ ನ ವ್ಯವಸ್ಥಾಪಕರಾದ ಶ್ವೇತಾ ದೇವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪಾಧ್ಯಕ್ಷೆ ರುದ್ರಮ್ಮಹೊಟ್ಯಾಪುರ, ಪಿಕಾರ್ಡ್ ಬ್ಯಾಂಕ್‌ನ ನಿರ್ದೇಶಕರಾದ ಕೆ.ವಿ.ನಾಗರಾಜ್, ಎಂ.ಜಿ.ಆರ್.ಮಂಜುನಾಥ್, ಜಿ.ಶಂಕರಪ್ಪ, ಸಿ.ಎಚ್.ಸಿದ್ದಪ್ಪ, ಎಸ್.ಕುಬೇರನಾಯ್ಕ, ಕೆ.ಚೇತನ್, ರಾಘವೇಂದ್ರ, ಎಚ್.ಡಿ.ಸುನೀಲ್ ಕುಮಾರ್, ಅನಸೂಯಮ್ಮ, ಆಶಾ, ಹೊನ್ನಾಳಿ ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಕಿ ಸಿ.ಎನ್.ವಿಶಾಲಾಕ್ಷಿ, ಕ್ಷೇತ್ರಾಧಿಕಾರಿ ಜಿ.ಕುಬೇರನಾಯ್ಕ, ಸಹಾಯಕರಾದ ಎನ್.ಶೃತಿ,ಬಿ.ವಿ. ಮಹೇಶ್ವರಪ್ಪ, ಸಿಬ್ಬಂದಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳ ಸಹಕಾರಿ ಕ್ಷೇತ್ರದ ರೈತರು ಇದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ