ಪ್ರಾಮಾಣಿಕ ಸೇವೆ ಗುರುತಿಸಿ ಜೇಸಿ ಸಂಸ್ಥೆಯಿಂದ ಸನ್ಮಾನ: ಎಂ.ಪಿ.ಮನು

KannadaprabhaNewsNetwork |  
Published : Aug 15, 2024, 01:53 AM IST
ನರಸಿಂಹರಾಜಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯವರು ಪಟ್ಟಣದ ಸೇಂಟ್‌ ನೋಬರ್ಟ್ ಅಂಗ ವಿಕಲ ಮಕ್ಕಳ ಶಾಲೆಯಲ್ಲಿ ಸೆಲ್ಯೂಟ್ ದ ಸೈಲೆಂಟ್ ವ ರ್ಕರ್ ಕಾರ್ಯಕ್ರಮದಡಿ ಮಕ್ಕಳ ಶಾಲೆಯ  ನಿರ್ದೇಶಕ ಫಾದರ್‌ ಜಸ್ಟಿನ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಮತ್ತಿತರರು  ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರನ್ನು ಜೇಸಿ ಸಂಸ್ಥೆಯಿಂದ ಗುರುತಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಎಂ.ಪಿ.ಮನು ಹೇಳಿದರು.

- ಜೇಸಿ ಸಂಸ್ಥೆಯಿಂದ ಸೇಂಟ್ ನೋಬಟ್‌ರ್ ಅಂಗ ವಿಕಲ ಮಕ್ಕಳ ಶಾಲೆಯಲ್ಲಿ ಫಾ.ಜಸ್ಟಿನ್ ಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರನ್ನು ಜೇಸಿ ಸಂಸ್ಥೆಯಿಂದ ಗುರುತಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಎಂ.ಪಿ.ಮನು ಹೇಳಿದರು.

ಪಟ್ಟಣದ ಸೇಂಟ್ ನೋಬರ್ಟ್ ಅಂಗವಿಕಲ ಮಕ್ಕಳ ಶಾಲೆಯಲ್ಲಿ ಬುಧವಾರ ಜೇಸಿ ಸಂಸ್ಥೆಯಿಂದ ನಡೆದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಹಾಗೂ ಉಚಿತ ಅಗತ್ಯ ದಿನ ಬಳಕೆ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ದೇಶಕ ಫಾದರ್ ಜಸ್ಟಿನ್ ಅವರನ್ನು ಸನ್ಮಾನಿಸಿ ಮಾತನಾಡಿದರು.

1949ರಲ್ಲಿ ಸ್ಥಾಪನೆಯಾದ ಜೇಸಿ ಸಂಸ್ಥೆ ಯುವಕರ ಏಳಿಗೆ, ಯುವಕರ ಪರಿವರ್ತನೆ, ಸ್ವಾವಲಂಬನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಫಾದರ್ ಜಸ್ಟಿನ್ ಅಂಗವಿಕಲ ಮಕ್ಕಳನ್ನು ಪ್ರತಿನಿತ್ಯ ಅವರ ಮನೆಗೆ ಹೋಗಿ ಕರೆದುಕೊಂಡು ಬಂದು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದು, ತಮ್ಮ ಕರ್ತವ್ಯವನ್ನು ಆತ್ಮತೃಪ್ತಿ, ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಮಾಡುತ್ತಿರುವುದರಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಇವರನ್ನು ಸನ್ಮಾನಿಸಲಾಗುತ್ತಿದೆ. ನೋಬರ್ಟ್ ಸಂಸ್ಥೆ ಸಮಾಜ ಮುಖಿ ಕಾರ್ಯ ಗುರುತಿಸಿ ಜೇಸಿ ಸಂಸ್ಥೆ ಎಲ್ಲಾ ಸದಸ್ಯರ ಸಹಕಾರದಿಂದ 5 ಸಾವಿರ ರು. ಮೊತ್ತದ ಆಹಾರ ಧಾನ್ಯದ ಕಿಟ್ ನ್ನು ವಿತರಿಸಲಾಗಿದೆ ಎಂದರು. ಜೇಸಿ ವಲಯ ಅಧಿಕಾರಿ ಚರಣ್ ರಾಜ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಜನ್ಮದಿನವನ್ನು ಅಂಗವಿಕಲ ಮಕ್ಕಳ ಶಾಲೆಯಲ್ಲಿ ಆಚರಿಸುವ ಮೂಲಕ ಸಹಾಯ ಹಸ್ತ ಚಾಚಿದರೆ ಸಂಸ್ಥೆಗೆ ಸಹಕಾರವಾಗುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ಸಂಸ್ಥೆ ನಿರ್ದೇಶಕ ಫಾದರ್ ಜಸ್ಟಿನ್ ಮಾತನಾಡಿ, ನರಸಿಂಹರಾಜಪುರದಲ್ಲಿ ಈ ಸಂಸ್ಥೆ 2008 ರಿಂದ ನಿಸ್ವಾರ್ಥ ಸೇವೆ ಯನ್ನು ನೀಡುತ್ತಾ ಬಂದಿದೆ. ಈ ಸಂಸ್ಥೆ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಹನೆ, ಪ್ರೀತಿಯಿಂದ ನಿರ್ವಹಿಸು ತ್ತಿದ್ದಾರೆ. ಇಲ್ಲಿ ಎಲ್ಲರಿಗೂ ಏಕ ರೂಪದ ಶಿಕ್ಷಣ ನೀಡಲಾಗುತ್ತಿದ್ದು ಇದನ್ನು ಸದುಪಯೋಗ ಪಡೆಸಿಕೊಳ್ಳ ಬೇಕೆಂದರು.

ಶಿಕ್ಷಕಿ ಸಿನಿ 79ನೇ ಸ್ವಾತಂತ್ರ್ಯ ದಿನಾಚರಣೆ ವಿಶೇಷತೆಗಳು, ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನದ ಬಗ್ಗೆ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಹಾಗೂ ಹಿರಿಯ ಕ್ಷಯರೋಗ ಮೇಲ್ವಿಚಾರಕ ಪವನ್ ಕರ್ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಹಸ್ತಾಂತರಿಸಲಾಯಿತು.

ಜೇಸಿ ಸಂಸ್ಥೆಯ ಕಾರ್ಯದರ್ಶಿ ವಿನುತ, ಉಪಾಧ್ಯಕ್ಷ ಅಪೂರ್ವ ರಾಘವೇಂದ್ರ, ಖಜಾಂಜಿ ಜೀವನ್, ಸದಸ್ಯರಾದ ಆದರ್ಶ, ಪ್ರೀತಮ್, ಜೋಸೆಫ್, ಪ್ರಾಂಶುಪಾಲೆ ಸಿಸ್ಟರ್ ಬಸಲಿಯ,ಶಿಕ್ಷಕಿಯರಾದ ಗ್ರೇಸಿ, ಸೋನಿಯಾ, ಪುಷ್ಪ ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ