ರಾಮನಗರ: ಸರ್ಕಾರ ಕೂಡ ನಿಸ್ವಾರ್ಥ ಸಾಧಕರು, ಕಲಾವಿದರನ್ನು ಗುರುತಿಸಿ ಗೌರವಿಸಬೇಕಾಗಿದೆ. ಆದರೆ, ಇಲ್ಲಿ ಎಲ್ಲವನ್ನು ಶಕ್ತಿವಂತರೇ ಪಡೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಗಾಯಕ ಗುರುರಾಜ್ ಹೊಸಕೋಟೆ ಬೇಸರ ವ್ಯಕ್ತಿಪಡಿಸಿದರು.
ನಗರದ ಶ್ರೀ ಕೃಷ್ಣ ಸ್ಮುತಿ ಕಲ್ಯಾಣ ಮಂಟಪದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ 17 ವರ್ಷದ ಸಂಸ್ಕೃತಿ ಉತ್ಸವದಲ್ಲಿವಿವಿಧ ಕ್ಷೇತ್ರಗಳ ಸಾಧಕರಿಗೆ ಸಂಸ್ಕೃತಿ ಪುರಸ್ಕಾರ ಪ್ರದಾನ ಮಾಡಿದ ಅವರು, ಆಧುನಿಕ ಜಗತ್ತಿನ ಸಾಮಾಜಿಕ ಜಾಲತಾಣಗಳು ಏನೇನೂ ಅಲ್ಲದವರನ್ನು ವೈಭವೀಕರಿಸುತ್ತಾ ಯುವ ಜನಾಂಗವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಈ ಸಮಾಜಕ್ಕೆ ಅಂತಹವರ ಕೊಡುಗೆ ಏನೂ ಎಂದು ಪ್ರಶ್ನಿಸಬೇಕಾಗಿದೆ. ಇಂದು ಎಲ್ಲಾ ಸಂಘ-ಸಂಸ್ಥೆಗಳಲ್ಲಿ ಸ್ವಹಿತಾಸಕ್ತಿಯೇ ಹೆಚ್ಚಾಗಿದೆ. ಸಮಾಜಮುಖಿ ಆಲೋಚನೆಗಳು ಕಣ್ಮರೆಯಾಗುತ್ತಿವೆ. ಎಷ್ಟೋ ಜನ ನೈಜ ಕಲಾವಿದರು, ಸಾಧಕರು, ತೆರೆಮರೆಯಲ್ಲಿಯೇ ಇದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್ .ಕೆ.ಬೈರಲಿಂಗಯ್ಯ ಮಾತನಾಡಿ, ಮನುಷ್ಯ ಇಂದು ಯಾಂತ್ರಿಕ ಜೀವನದೊತ್ತಡದಲ್ಲಿ ನಗುವನ್ನು ಮರೆತು ಬಿಟ್ಟಿದ್ದಾನೆ. ಸಂಗೀತ ಮತ್ತು ಹಾಸ್ಯಕ್ಕೆ ಮನಸ್ಸನ್ನು ಹಗುರಗೊಳಿಸುವ ಶಕ್ತಿ ಇದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ನೂರಾರು ಟ್ರಸ್ಟ್‌ಗಳಿವೆ. ಆದರೆ ಬೆರಳಣಿಕೆಯ ಸಂಘ-ಸಂಸ್ಥೆಗಳು ಮಾತ್ರ ಕೆಲಸ ಮಾಡುತ್ತಿವೆ. ಆ ನಿಟ್ಟಿನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಕಳೆದ 17 ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥವಾಗಿ ಕಲಾಸೇವೆಯನ್ನು ಮಾಡುತ್ತಾ ಬಂದಿವೆ. ಈ ನಾಡಿನ ಅನೇಕ ಪ್ರಸಿದ್ದ ಕಲಾವಿದರನ್ನು ಆಹ್ವಾನಿಸಿ ಸಂಗೀತ, ನೃತ್ಯ, ಹಾಸ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಅದರ ಜೊತೆಯಲ್ಲಿ ತೆರೆ-ಮರೆಯ ಸಾಧಕರು, ಸಮಾಜಮುಖಿ ಸೇವಕರನ್ನು ಗೌರವಿಸುತ್ತಾ ಬರುತ್ತಿರುವ ಟ್ರಸ್ಟ್ ಅಧ್ಯಕ್ಷ ಡಾ. ರಾ.ಬಿ.ನಾಗರಾಜು ಕಲಾಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಮಾತನಾ, ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಅನೇಕ ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದಾರೆ. ಇವರು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳು ಅರ್ಥಪೂರ್ಣ ಹಾಗೂ ವೈವಿಧ್ಯಮಯ , ಮನೋರಂಜನೆಯಿಂದ ಕೂಡಿರುತ್ತವೆ. ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಅನೇಕ ಕಲಾವಿದರನ್ನು ರಾಮನಗರಕ್ಕೆ ಆಹ್ವಾನಿಸಿ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಸರ್ಕಾರ ಇಂತಹ ಪ್ರಮಾಣಿಕ ಸಂಘಟಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದರು.ವಕೀಲರಾದ ಎಚ್.ಜಯರಾಮು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆರ್.ಜಿ. ಚಂದ್ರಶೇಖರ್, ರಂಗಭೂಮಿ ಕಲಾವಿದರಾದ ಪ್ರಭಾಕರ್ ಕವಣಾಪುರ, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷರಾದ ರಾ.ಶಿ. ಬಸವರಾಜು ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಡಾ.ರಾ.ಬಿ.ನಾಗರಾಜ್ ರವರು ಟ್ರಸ್ಟ್ ನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ರಂಗಭೂಮಿ ಕಲಾವಿದರಾದ ಎಚ್.ಎನ್. ರಮೇಶ್, ದೇವರಾಜು ಅರಸು ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಚ್.ಸುರೇಶ್, ಸಮಾಜ ಸೇವಕರಾದ ಶ್ರೀಧರ್ ಕ್ಯಾಸಾಪುರ, ಕೂನಮುದ್ದನಹಳ್ಳಿ ರುದ್ರೇಶ್ , ಅರ್ಕಾವತಿ ಶ್ರೀವಿದ್ಯಾಗಣಪತಿ ಯುವ ಸೇವಾಸಂಘದ ಅಧ್ಯಕ್ಷ ಪಿ.ವೈ. ರವೀಂದ್ರ ಹೇರ್ಳೆ, ಟ್ರಸ್ಟ್ ಕಾರ್ಯದರ್ಶಿ ಎಚ್.ಬಿ. ಸಿದ್ದರಾಜು, ಕರಾಟೆ ತರಬೇತುದಾರ ಎಂ. ಪ್ರಭುದಾಸ್, ಧಾರ್ಮಿಕ ಪರಿಚಾರಕ ದೇವರ ಗುಡ್ಡಪ್ಪ ಉಪಸ್ಥಿತರಿದ್ದರು.ಚಲನಚಿತ್ರ ನಟ ಮೈಸೂರು ಶ್ರೀಹರಿ 70 ರ ದಶಕದಿಂದ ಇಲ್ಲಿಯವರೆಗೆ ಚಲನಚಿತ್ರಗಳಲ್ಲಿ ಬದಲಾದ ನೃತ್ಯ ಶೈಲಿಯನ್ನು ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನಸೆಳೆದರು. ಹಿರಿಯ ಗಾಯಕರಾದ ಮೈಸೂರು ಕೃಷ್ಣಮೂರ್ತಿ , ಎಸ್.ರಘುನಾಥ್, ಕೆಂಗಲ್ ವಿನಯ್ ಕುಮಾರ್, ಗೋಪಾಲ್ ಬೊಮ್ಮಚನಹಳ್ಳಿ, ಕೀಬೋರ್ಡ್ ವಾದಕರಾದ ಎಸ್.ಸಿದ್ದರಾಜು, ಪುಷ್ಪರಾಜ್ ಹಾಗೂ ಜಗದೀಶ್ ತಂಡ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಗೀತ ವಿದ್ವಾನ್ ಎಸ್.ಎನ್. ಶ್ರೀನಿವಾಸ ಪ್ರಸನ್ನ ತಂಡದವರು ನಡೆಸಿಕೊಟ್ಟ ಗಾಯನ ಗಮನ ಸೆಳೆಯಿತು. ಪುಣ್ಯಶ್ರೀ ಮತ್ತು ಹೊನ್ನಶ್ರೀ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.ಬಾಕ್ಸ್ ................
ಸಂಸ್ಕೃತಿ ಪುರಸ್ಕಾರ2024ರ ಸಾಲಿನ ಸಂಸ್ಕೃತಿ ಪುರಸ್ಕಾರವನ್ನು ರಂಗಭೂಮಿ ಕಲಾವಿದರಾದ ಬಿ.ಜಿ.ಗುರುಮಲ್ಲಯ್ಯ, ಸಂಗೀತ ವಿದ್ವಾನ್ ಶ್ರೀನಿವಾಸ ಪ್ರಸನ್ನ, ರಂಗಭೂಮಿ ನಟ-ನಿರ್ದೇಶಕ ಗೋಪಿನಂದನ್, ಶ್ರೀಚಾಮುಂಡೇಶ್ವರಿ ಕರಗದಾರಕರಾದ ದೇವಿ ಪ್ರಸಾದ್ ಸಿಂಗ್ , ಸರ್ಕಾರಿ ನೌಕರರ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ , ಶನಿದೇವರ ಆರ್ಚಕರಾದ ಎ.ಎಲ್ . ಮಹೇಶ್ ಕುಮಾರ್ , ಬ್ರಹ್ಮಕುಮಾರಿ ಕೆ.ದಿವ್ಯಾ, ಗಾಯಕಿ ಶಾರದ ಯಾದವ್, ಮಿಸ್ಟರ್ ಸಿಲ್ಕ್ ಸಿಟಿ ಖ್ಯಾತಿ ದೇಹದಾರ್ಢ್ಯಪಟು ಮೈಕಲ್ ಮೀನೇಜಸ್ ಅವರಿಗೆ ನೀಡಿ ಗೌರವಿಸಲಾಯಿತು.26ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಶ್ರೀ ಕೃಷ್ಣ ಸ್ಮುತಿ ಕಲ್ಯಾಣ ಮಂಟಪದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ 17 ವರ್ಷದ ಸಂಸ್ಕೃತಿ ಉತ್ಸವವನ್ನು ಅತಿಥಿಗಳು ಉದ್ಘಾಟಿಸಿದರು.