ಕನ್ನಡ ಪ್ರಭ ವಾರ್ತೆ ಮುಧೋಳ
ಗೊಂದಳಿ ಸಮಾಜದ ಮುಖಂಡ ಸುಭಾಸ ಗಾಯಕವಾಡ ಮಾತನಾಡಿ, ಹಿಂದುಳಿದ ಗೊಂದಳಿ ಸಮಾಜದ ಮಕ್ಕಳು ಶೇ.90ಕ್ಕೂ ಅಧಿಕ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾದ ಈ ವಿದ್ಯಾರ್ಥಿಗಳಿಂದ ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ಪಡೆಯಲು ಅವರಿಗೆ ಪ್ರೋತ್ಸಾಹದಾಯಕ ಈ ಸನ್ಮಾನ ಸಮಾರಂಭದ ಮುಖ್ಯ ಉದ್ದೇಶ ಆಗಿದೆ ಎಂದರು.
ಶಿವಾಜಿ ಅಡೇಕರ ಮಾತನಾಡಿ ಯಾವದೇ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದಲ್ಲಿ ಅಂತವರನ್ನು ಗುರುತಿಸಿ ಇಂತಹ ಪ್ರೋತ್ಸಾಹದಾಯಕ ಕಾರ್ಯಗಳು ಹಮ್ಮಿಕೊಳ್ಳುವಲ್ಲಿ ಸಮಾಜದ ಮುಖಂಡರ ಸಹಕಾರ ಅಗತ್ಯವಿದೆ. ಇದರಿಂದ ಮುಂಬರುವ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡಿದಂತಾಗುತ್ತದೆ ಎಂದರು.ಸನ್ಮಾನಿತ ವಿದ್ಯಾರ್ಥಿಗಳು: ಪ್ರೀತಮ್ ಸಂ. ಮುಖೆ (ಶೇ.96), ಕೋಮಲ್ ಸಂ. ಭೋಸಲೆ (ಶೇ.93), ವಾಸಂತಿ ಅ. ವಾಗ್ಮೊರೆ (ಶೇ.92), ಶಿಲ್ಪಾ ಶಿ. ಅಡೇಕರ (ಶೇ.91) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾದ ಈ ವಿದ್ಯಾರ್ಥಿಗಳನ್ನು ಸಮಾಜದ ಮುಖಂಡರು, ಗಣ್ಯರು ಸನ್ಮಾನಿಸಿ ಗೌರವಿಸಲಾಯಿತು.
ಪರಶುರಾಮ ವಾಗ್ಮೋಡೆ ನಿರುಪಿಸಿದರು, ಶಿವಾಜಿ ಅಡೇಕರ ಸ್ವಾಗತಿಸಿದರು, ವಿದ್ಯಾರ್ಥಿನಿ ಪ್ರಾರ್ಥಿಸಿದಳು, ಪಾಂಡು ಕಾಳೆ ವಂದಿಸಿದರು.