ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ ಅವರ ಸ್ಮರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯಗಿದೆ ಎಂದು ವಡಗೇರಾದ ತಹಸೀಲ್ದಾರ್ ಮಂಗಳಾ ಎಂ. ಹೇಳಿದರು.
ಯಾದಗಿರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ ಅವರ ಸ್ಮರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯಗಿದೆ ಎಂದು ವಡಗೇರಾದ ತಹಸೀಲ್ದಾರ್ ಮಂಗಳಾ ಎಂ. ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ನಂತರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಶಾ ಮುಕ್ತ ಜಿಲ್ಲೆಗಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಆಶಾ ಮತ್ತು ಅಂಗನವಾಡಿ ಶಿಕ್ಷಣ ಇಲಾಖೆಯವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಹಿರೇಮಠ, ಶಿರಸ್ತೇದಾರ ಸಂಗಮೇಶ ನಾಯಕ್, ಕಂದಾಯ ನಿರೀಕ್ಷಕ ಬಸಯ್ಯಸ್ವಾಮಿ, ಪಟ್ಟಣದ ಮುಖಂಡರು ಮಕ್ಕಳ ತಜ್ಞರಾದ ಡಾ. ಸುಭಾಷ್ ಕರಣಿಗಿ, ಸಿದ್ದಣ್ಣಗೌಡ ಕಾಡಂನೂರ್, ಬಾಷುಮಿಯಾ ನಾಯ್ಕೋಡಿ, ಅಶೋಕ ಸಾಹು ಕರಣಗಿ,ಮಲ್ಲುಗೌಡ ಪೊಲೀಸ್ ಪಾಟೀಲ್, ಡಾ.ಗಾಳೆಪ್ಪ ಪೂಜಾರಿ, ಬಸವರಾಜ ಸೊನ್ನದ, ಅಶೋಕ್ ಮುಸ್ತಾಜೀರ್, ಡಾ.ಮರೆಪ್ಪ ನಾಟೇಕಾರ, ಹಣಮಂತರಾಯ ಜಡಿ ,ಪ್ರಮೋದ್ ಸ್ವಾಮಿ, ಬಸವರಾಜ್ ನೀಲಹಳ್ಳಿ, ಮರೆಪ್ಪ ಜಡಿ, ಯಂಕಪ್ಪ ಬಸಂತಪುರ, ಶರಣು ಇಟಗಿ ಮುಂತಾದವರಿದ್ದರು.
-
15ವೈಡಿಆರ್17 : ವಡಗೇರಾ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.