ಶೀರೂರು ಪರ್ಯಾಯ: ಕನ್ನರ್ಪಾಡಿ ದೇವಸ್ಥಾನ ಹೊರೆಕಾಣಿಕೆ

KannadaprabhaNewsNetwork |  
Published : Jan 04, 2026, 03:15 AM IST
ಕನ್ನರ್ಪಾಡಿ ದೇವಸ್ಥಾನದಲ್ಲಿ ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆಯಲ್ಲಿ ಕೃಷ್ಣಮೂರ್ತಿ ಆಚಾರ್ಯರು ಮಾತನಾಡಿದರು | Kannada Prabha

ಸಾರಾಂಶ

ಈ ಬಾರಿಯ ಶೀರೂರು ಪರ್ಯಾಯಕ್ಕೂ ಶ್ರೀಕ್ಷೇತ್ರದಿಂದ ವೈಭವದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅಚಾರ್ಯ ಹೇಳಿದರು.

ಉಡುಪಿ: ಕಳೆದ 36 ವರ್ಷಗಳಿಂದ ನಿರಂತರವಾಗಿ ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪರ್ಯಾಯದ ಹೊರೆಕಾಣಿಕೆ ಅತ್ಯಂತ ವಿಜೃಂಭಣೆಯಿಂದ ಸಮರ್ಪಣೆಯಾಗಿದ್ದು, ಈ ಬಾರಿಯ ಶೀರೂರು ಪರ್ಯಾಯಕ್ಕೂ ಶ್ರೀಕ್ಷೇತ್ರದಿಂದ ವೈಭವದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಶ್ರೀ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅಚಾರ್ಯ ಹೇಳಿದರು.ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಶೀರೂರು ಪರ್ಯಾಯದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವಸ್ಥಾನದ ಭಕ್ತವೃಂದವರು ಅಧಿಕ ಸಂಖ್ಯೆಯಲ್ಲಿ ಸೇರಿ ಹೊರೆಕಾಣಿಕೆ ಸಮರ್ಪಿಸಲಿದ್ದಾರೆ ಎಂದು ಹೇಳಿದರು.

ಪರ್ಯಾಯ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಮಾತನಾಡಿ, ಶೀರೂರು ಶ್ರೀ ವೇದವರ್ಧನ ತೀರ್ಥರ ಸಂಕಲ್ಪದಂತೆ ಶ್ರೀ ಕೃಷ್ಣ ದೇವರ ನೈವೇದ್ಯದ ಪ್ರತಿಯಾಗಿ ಪ್ರತಿ ಮನೆಯಿಂದ ಹದಿನಾಲ್ಕು ತೆಂಗಿನಕಾಯಿ ಸಮರ್ಪಣೆ ಸಹಿತ ಹೊರೆಕಾಣಿಕೆಯ ವಿವರಗಳನ್ನು ನೀಡಿದರು.ಸ್ಥಳೀಯ ಪ್ರಮುಖರಾದ ಎ. ಸಂಜೀವ, ರಘುನಾಥ್ ಕೋಟ್ಯಾನ್, ನವೀನ್ ಶೆಟ್ಟಿ, ಜಯಕರ ಶೇರಿಗಾರ್, ಗುರುರಾಜ್ ಉಪಾಧ್ಯ, ಎಂ. ರಾಜೇಂದ್ರ, ನಿರುಪಮಾ ಪ್ರಸಾದ್, ದಾಮೋದರ ಶೇರಿಗಾರ್, ವಿಷ್ಣುಪ್ರಸಾದ್ ಪಾಡಿಗಾರ್, ನಾರಾಯಣ ರಾವ್ ಕನ್ನರ್ಪಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪಾದಾಧಿಕಾರಿಗಳು ಅನೇಕರು ಉಪಸ್ಥಿತರಿದ್ದರು. ಸಂದೀಪ್ ಮಂಜ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌