ಹುಬ್ಬಳ್ಳಿ: ಓಮಿನಿ ಕಾರೊಂದರ ಟೈರ್ ಬ್ಲಾಸ್ಟ್ ಆಗಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ಹೆಬಸೂರ- ಕಿರೇಸೂರ ಗ್ರಾಮದ ಮಧ್ಯೆ ಶುಕ್ರವಾರ ರಾತ್ರಿ ನಡೆದಿದೆ.
ಇನ್ನು ಇಮಾಮಸಾಬ ಮಂಗಳೂರ, ಚಾಲಕ ಹುಸೇನಭಾಷಾ ಮಂಗಳೂರ ಮತ್ತು ಬಾಲಕ ಫೈಜಲ್ ಮಂಗಳೂರ ಗಾಯಗೊಂಡಿದ್ದು, ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ವೃದ್ಧರಾದ ಇಮಾಮಸಾಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಬಂಧಿಕರ ಮನೆಗೆ ಹೋಗಬೇಕಾದವರು ಮಸಣಕ್ಕೆ!
ಹಲಗಾಕ್ಕೆ ಹೋಗಿ ವಾಪಸ್ ಕೊಪ್ಪಳಕ್ಕೆ ಹೋಗುವ ಮುನ್ನ ಹೆಬಸೂರಲ್ಲಿರುವ ಸಂಬಂಧಿಕರನ್ನು ಭೇಟಿಯಾಗಿ ಹೋಗಲು ಹೆಬಸೂರಿನತ್ತ ಹೊರಟಿದ್ದರು. ಆದರೆ, ದಾರಿ ಮಧ್ಯೆ ಕಿರಸೂರ ಬಳಿ ಜೋಡಬೆಂಚಿಕೇರಿ ಸೇತುವೆ ಬಳಿ ಕಾರಿನ ಟೈರ್ ಬ್ಲಾಸ್ಟ್ ಆಗಿ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ.