ಯಲಬುರ್ಗಾ: ಸ್ವೀಫ್ಟ್ ಡಿಜೈರ್ ಹಾಗೂ ಬಲೋನಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟು, ೧೧ ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಕೊಪ್ಪಳ ರಸ್ತೆ ಬ್ರೀಜ್ ಹತ್ತಿರ ಭಾನುವಾರ ಬೆಳಗ್ಗೆ ನಡೆದಿದೆ.
ಕೊಪ್ಪಳದ ೧೧ ವರ್ಷದ ಮಹಾಲಕ್ಷ್ಮೀ ವಿರೂಪಾಕ್ಷಯ್ಯ ಕೊರಗಲ್‌ಮಠ, ಚಾಲಕ ಶಿವಪ್ಪ ಶರಣಯ್ಯ ಕೊರಗಲ್‌ಮಠ, ವಿರೂಪಾಕ್ಷಯ್ಯ ಬಸಯ್ಯ ಕೊರಗಲ್‌ಮಠ, ಗಂಗಮ್ಮ ವಿರೂಪಾಕ್ಷಯ್ಯ ಕೊರಗಲ್‌ಮಠ ಕೊಪ್ಪಳ ಹಾಗೂ ಪ್ರೀತಿ ಸಂಗಯ್ಯ ಹಿರೇಮಠ (ಟಣಕನಕಲ್) ಮತ್ತು ಸಂಗಪ್ಪ ದೇವಪ್ಪ ಗಡಾದ ನಿವೃತ್ತ ಸೈನಿಕ (ಸಂಗನಾಳ) ಹಾಗೂ ಪ್ರಭುದೇವ ಶಾಂತಪ್ಪ ಹೊಸಂಗಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಪ್ಪಳ ಸಿದ್ದೇಶ್ವರ ನಗರದವರು ಹಾಗೂ ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದವರು ಸ್ವಿಫ್ಟ್ ಡಿಜೈನರ್ ಕಾರಿನಲ್ಲಿ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ದೇವಸ್ಥಾನಕ್ಕೆ ಹೋಗಿ ಕೊಪ್ಪಳಕ್ಕೆ ಹೋಗುತ್ತಿದ್ದಾಗ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಬಲೋನಾ ಕಾರು ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಿಂದ ಸಂಗನಾಳ ಗ್ರಾಮಕ್ಕೆ ಬರುವ ವೇಳೆ ಈ ಅಪಘಾತ ನಡೆದಿದೆ. ಯಲಬುರ್ಗಾ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.ಬೈಕಿಗೆ ಹಿಂಬಂದಿಯಿಂದ ವಾಹನ ಡಿಕ್ಕಿ: ಇಬ್ಬರ ಸಾವುಕುಷ್ಟಗಿ: ಬೈಕಿಗೆ ಹಿಂಬಂದಿಯಿಂದ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಡೇಕೊಪ್ಪ ಕ್ರಾಸ್‌ನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರು ಇಲಕಲ್ ನಗರದತ್ತ ತೆರಳುತ್ತಿದ್ದರು. ಬೈಕಿನಲ್ಲಿ ಹೋಗುವಾಗ ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ವಾಹನದ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.ಈ ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ ಹಾಗೂ ಪಿಎಸ್‌ಐ ಹನುಮಂತಪ್ಪ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆಗೆ ಕಳಿಸಲಾಗಿದ್ದು, ಈ ಕುರಿತು ಕುಷ್ಟಗಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.