ಮೆಸ್ಕಾಂ ಲಾರಿ- ಓಮಿನಿ- ಆಲ್ಟೋ ಕಾರ್ ನಡುವೆ ಅಪಘಾತ । ಧರ್ಮಸ್ಥಳದಿಂದ ಬರುವಾಗ ಅಪಘಾತಕನ್ನಡಪ್ರಭ ವಾರ್ತೆ, ಮೂಡಿಗೆರೆ
ಧರ್ಮಸ್ಥಳಕ್ಕೆ ತೆರಳಿದ್ದ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದವರು. ಎರಡು ವಾಹಣಗಳಲ್ಲಿ ಚಾರ್ಮಾಡಿ ಮೂಲಕ ಮೂಡಿಗೆರೆಗ ಬರುವಾಗ ಈ ದುರ್ಘಟನೆ ನಡೆದಿದೆ.
ಹಂಪಯ್ಯ (65), ಮಂಜಯ್ಯ (65), ಪ್ರೇಮಾ (62) ಅವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಪ್ರಭಾಕರ್ (45) ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ. ನಾಗರಾಜಯ್ಯ, ಮಂಜುನಾಥಯ್ಯ, ಅಕ್ಕಮ್ಮ, ಪ್ರತೀಕ್ಷಾ, ಮಲ್ಲಿಕಾರ್ಜುನ, ನಂದೀಶ್, ಉಮೇಶ್, ಶಿವಲೀಲಾ ಹಾಗೂ ನಯನ ಅವರಿಗೆ ಗಾಯಗಳಾಗಿದ್ದು, ಕೆಲವರನ್ನು ಚಿಕ್ಕಮಗಳೂರಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೆ, ಮತ್ತೆ ಕೆಲವರನ್ನು ಮಂಗಳೂರಿಗೆ ಕರೆದು ಕೊಂಡು ಹೋಗಲಾಗಿದೆ. ಪೂಜಾ, ಚಂದನ, ವೀರೇಶ್ ಹಾಗೂ ಸೃಜನಾ ಪಾರಾಗಿದ್ದಾರೆ.ಒಂದೇ ಕುಟುಂಬದವರು:ಚನ್ನಪಟ್ಟಣ ಗ್ರಾಮದ ಒಂದೇ ಕುಟುಂಬದ 17 ಜನರು ಓಮಿನಿ ಹಾಗೂ ಆಲ್ಟೋ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿ, ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಕೊಟ್ಟಿಗೆಹಾರಕ್ಕೆ ಬಂದು ಅಲ್ಲಿಂದ ಮೂಡಿಗೆರೆಗೆ ಬರುವಾಗ ಬಣಕಲ್ ಸಮೀಪ ಎದುರಿಗೆ ಬಂದ ಮೆಸ್ಕಾಂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಭೀಕರ ಅಪಘಾತ:
ಶುಕ್ರವಾರ ಇದೇ ರೀತಿ ಅಪಘಾತ ಬಣಕಲ್‌ನಲ್ಲಿ ನಡೆದಿದೆ. ಒಂದೇ ಸ್ಥಳದಲ್ಲಿ ಮೂರು ವಾಹನಗಳು ಅಪಘಾತಕ್ಕೆ ಈಡಾಗಿವೆ. ಲಾರಿ ಹಾಗೂ ಆಲ್ಟೋ ಕಾರು ಡಿಕ್ಕಿ ಹೊಡೆದ ಪರಿಣಾಮ ಓಮಿನಿ ನಜ್ಜು ಗುಜ್ಜಾಗಿದೆ.
--- ಬಾಕ್ಸ್----ಮೃತಪಟ್ಟವರುಪ್ರಭಾಕರ್
ಮಂಜಯ್ಯ
----
ಮಂಜುನಾಥಯ್ಯ
ಅಕ್ಕಮ್ಮಪ್ರತೀಕ್ಷಾ
ಮಲ್ಲಿಕಾರ್ಜುನನಂದೀಶ್
ಉಮೇಶ್ಶಿವಲೀಲಾ
ನಯನ----ಪಾರಾದವರುಪೂಜಾ
ಚಂದನವಿರೇಶ್
ಸೃಜನಾ---ಪೋಟೋ ಫೈಲ್ ನೇಮ್ 24 ಕೆಸಿಕೆಎಂ 7ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಜ್ಜು ಗುಜ್ಜಾದ ಓಮಿನಿ ಹಾಗೂ ಆಲ್ಟೋ ಕಾರ್.