ಆರೋಗ್ಯ ಸಂಜೀವಿನಿ ಯೋಜನೆ ನೋಂದಣಿಗೆ ಆಸ್ಪತ್ರೆಗಳ ಹಿಂದೇಟು

KannadaprabhaNewsNetwork |  
Published : Dec 12, 2025, 02:15 AM IST
444 | Kannada Prabha

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ವಿವಿಧ ಹಂತದಲ್ಲಿ ಅಂದಾಜು 22 ಸಾವಿರ ಸರ್ಕಾರಿ ನೌಕರರಿದ್ದಾರೆ. ಜಿಲ್ಲೆಯ ಎಲ್ಲ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯೋಜನೆ ತಲುಪಿಸಿ, ಯಶಸ್ವಿಗೊಳಿಸಲು ಖಾಸಗಿ ಆಸ್ಪತ್ರೆಗಳ ಸಹಕಾರ ಮುಖ್ಯ.

ಧಾರವಾಡ:

ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಗೆ ಜಿಲ್ಲೆಯಲ್ಲಿ 16 ಆಸ್ಪತ್ರೆಗಳು ಈಗಾಗಲೇ ಸೇರ್ಪಡೆಯಾಗಿವೆ. ಹುಬ್ಬಳ್ಳಿ ಹಾಗೂ ಧಾರವಾಡದ ತಲಾ ಒಂದು ಆಸ್ಪತ್ರೆ ಯೋಜನೆಗೆ ಒಳಪಡಲು ಒಪ್ಪಿಗೆ ಸೂಚಿಸಿವೆ. ಅಂತೆಯೇ, ಅವಳಿ ನಗರದ ಪ್ರಮುಖ ನರ್ಸಿಂಗ್ ಆಸ್ಪತ್ರೆಗಳು ಈ ಯೋಜನೆಗೆ ಸ್ವಯಂ ಪ್ರೇರಣೆಯಿಂದ ಒಳಪಡಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪ್ರಮುಖ ಆಸ್ಪತ್ರೆಗಳ ವೈದ್ಯರ ಹಾಗೂ ಮುಖ್ಯಸ್ಥರ, ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಹಂತದಲ್ಲಿ ಅಂದಾಜು 22 ಸಾವಿರ ಸರ್ಕಾರಿ ನೌಕರರಿದ್ದಾರೆ. ಜಿಲ್ಲೆಯ ಎಲ್ಲ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯೋಜನೆ ತಲುಪಿಸಿ, ಯಶಸ್ವಿಗೊಳಿಸಲು ಖಾಸಗಿ ಆಸ್ಪತ್ರೆಗಳ ಸಹಕಾರ ಮುಖ್ಯ. ಆದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಪ್ರಮುಖ ಆಸ್ಪತ್ರೆಗಳಿಗೆ ಭೇಟಿ ನೀಡಿ, ಯೋಜನೆಯ ಕುರಿತು ತಿಳಿವಳಿಕೆ ನೀಡಲು ತಿಳಿಸಿದರೂ ಧಾರವಾಡದ ಕೆಲವು ಪ್ರಮುಖ ಆಸ್ಪತ್ರೆಗಳು ಯೋಜನೆಗೆ ಒಳಪಡಲು ವಿಳಂಬ ಮಾಡುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.

ನೋಂದಣಿಯಾದ ಆಸ್ಪತ್ರೆ

ಹುಬ್ಬಳ್ಳಿಯ ಅಶೋಕ ಆಸ್ಪತ್ರೆ, ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಸಂಜೀವಿನಿ ಸ್ಪೆಶಾಲಿಟಿ ಆಸ್ಪತ್ರೆ, ಶಿವಕೃಪಾ ಆಸ್ಪತ್ರೆ, ಸುಚಿರಾಯು, ಮಾನಸಾ ಮೆಂಟಲ್ ಹೆಲ್ತ್ ಇನ್ಸ್ಟಿಟ್ಯೂಟ್, ವಿ. ಕೇರ್ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ತತ್ವದರ್ಶಿ, ಜಯಪ್ರಿಯಾ ಆಸ್ಪತ್ರೆ, ಎಚ್.ಸಿ.ಜಿ. ಎನ್‌ಎಂಆರ್ ಕ್ಯೂರ್ ಸೆಂಟರ್ ಆಪ್ ಅಂಕೊಲೊಜಿ, ಬಾಲಾಜಿ ಇನ್ಸ್ಟಿಟ್ಯೂಟ್ ಆಪ್ ನ್ಯೂರೊ ಸೈನ್ಸ್ ಆಸ್ಪತ್ರೆ, ವಿವೇಕಾನಂದ ಜನರಲ್ ಆಸ್ಪತ್ರೆಗಳು, ಸೆಕ್ಯೂರ್ ಆಸ್ಪತ್ರೆ, ವಿಹಾನ್ ಆಸ್ಪತ್ರೆಗಳು ಈಗಾಗಲೇ ನೋಂದಣಿ ಆಗಿವೆ. ಅಂತೆಯೇ, ಧಾರವಾಡದ ಯುನಿಟಿ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಗಳು ಯೋಜನೆ ಸೇರ್ಪಡೆ ಒಪ್ಪಿಗೆ ಸೂಚಿಸಿವೆ.

ಒಪ್ಪದ ಆಸ್ಪತ್ರೆಗಳಿವು

ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ, ದಂತ ಆಸ್ಪತ್ರೆ, ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ, ತಾವರಗೇರಿ ನರ್ಸಿಂಗ್ ಹೋಮ್, ವಿಠ್ಠಲ ಚಿಕ್ಕಮಕ್ಕಳ (ದೇಶಪಾಂಡೆ) ಆಸ್ಪತ್ರೆ, ಡಾ.ಎಸ್.ಆರ್.ರಾಮನಗೌಡರ ಆಸ್ಪತ್ರೆ, ಶ್ರವ್ಯಾ ಡಾ.ಎಸ್.ಆರ್.ಜಂಬಗಿ, ಎಸ್.ಡಿ.ಎಂ ನಾರಾಯಣ ಹೃದಯಾಲಯ, ಚಿರಾಯು, ವಾಸನ್ ಐ ಕೇರ್, ನಿರ್ಮಲಾ ಆಸ್ಪತ್ರೆ, ನವಸ್ಪಂದನ, ಶ್ರೇಯಾ ಆಸ್ಪತ್ರೆ, ಜರ್ಮನ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಶೂಶ್ರುತಾ ಆಸ್ಪತ್ರೆ, ಸಿಟಿ ಕ್ಲಿನಿಕ್, ರೆಡಾನ್ ಕ್ಯಾನ್ಸರ್ ಆಸ್ಪತ್ರೆ, ಎಚ್.ಸಿ.ಜಿ.ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಅವಳಿನಗರದ ಪ್ರಮುಖ ಆಸ್ಪತ್ರೆಗಳು ಯೋಜನೆಗೆ ನೋಂದಣಿ ಆಗಬೇಕು ಎಂದು ಜಿಲ್ಲಾಧಿಕಾರಿ

ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಪಂ ಸಿಇಒ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಎಸಿ ಶಾಲಂ ಹುಸೇನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪಾ ಗಾಬಿ, ದೇವರಾಜಯ್ಯ ರಾಯಚೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ