ಹಾಸ್ಟೆಲ್‌ ಅವ್ಯವಸ್ಥೆ: ಸಿಬ್ಬಂದಿಗೆ ತರಾಟೆ

KannadaprabhaNewsNetwork |  
Published : Oct 13, 2026, 02:45 AM IST
ಫೋಟೋ: 21 ಜಿಎಲ್‌ಡಿ3-  ಗುಳೇದಗುಡ್ಡದ  ಕಮತಗಿ ರಸ್ತೆಗೆ ಇರುವ ಮ್ಯಾಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ  ಊಟ, ನೀರು, ಶೌಚಾಲಯ ಇತ್ಯಾದಿಗಳ ವ್ಯವಸ್ಥೆಗಳು ಸರಿಯಾಗಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿ ಎಬಿವಿಪಿ ವಿದ್ಯಾರ್ಥಿಗಳೊಂದಿಗೆ   ವಸತಿ ನಿಲಯದಲ್ಲಿ ಅಧಿಕಾರಿಗಳ ಮುಂದೆ ವಿದ್ಯಾರ್ಥಿಗಳು ಮಾಹಿತಿ ನೀಡುತ್ತಿರುವುದು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ಇಲ್ಲಿನ ಕಮತಗಿ ರಸ್ತೆ ಬಳಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಊಟ, ನೀರು, ಶೌಚಾಲಯ ಇತ್ಯಾದಿ ವ್ಯವಸ್ಥೆಗಳು ಸರಿಯಾಗಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿ ಎಬಿವಿಪಿ ಕಾರ್ಯಕರ್ತರು ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಇಲ್ಲಿನ ಕಮತಗಿ ರಸ್ತೆ ಬಳಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಊಟ, ನೀರು, ಶೌಚಾಲಯ ಇತ್ಯಾದಿ ವ್ಯವಸ್ಥೆಗಳು ಸರಿಯಾಗಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿ ಎಬಿವಿಪಿ ಕಾರ್ಯಕರ್ತರು ವಸತಿ ನಿಲಯದ ಎದುರು ಪ್ರತಿಭಟನೆ ನಡೆಸಿದರು.

ವಸತಿ ನಿಲಯಕ್ಕೆ ಸೋಮವಾರ ಹಿಂದುಳಿದ ವರ್ಗದ ಜಿಲ್ಲಾ ಕಲ್ಯಾಣಾಧಿಕಾರಿ ಪಂಕಜ ಜೋಶಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್ ಅಜಿತ್ ಹೊನವಾಡ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಡುಗೆ ಮೇಲ್ವಿಚಾರಕರಲ್ಲಿ ಇಬ್ಬರಿದ್ದು ಒಬ್ಬರನ್ನ ಅಮಾನತು ಮಾಡಲು ಪತ್ರ ನೀಡುವಂತೆ ವಾರ್ಡನ್ ಅಜಿತ್ ಹೊನವಾಡಗೆ ಸೂಚಿಸಿದರು.

ಎಬಿವಿಪಿ ಮನವಿ: ಎಬಿವಿಪಿ ಕಾರ್ಯಕರ್ತರು ಬೆಳಗ್ಗೆ 10 ಗಂಟೆಗೆ ವಸತಿ ನಿಲಯಕ್ಕೆ ಆಗಮಿಸಿ ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆ ಸರಿ ಪಡಿಸುವಂತೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಕರೆ ಮಾಡಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಮಧ್ಯಾಹ್ನ12 ಗಂಟೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಅಲ್ಲಿರುವ ಅವ್ಯವಸ್ಥೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.ವಸತಿ ನಿಲಯದಲ್ಲಿ ಸುವ್ಯವಸ್ಥೆ ಇಲ್ಲ, ಸ್ವಚ್ಛತೆ ಇಲ್ಲ, ಅಲ್ಲಿರುವ ಮಲೀನ ನೀರು, ಡ್ರೈನೇಜ್ ಮೂಲಕ ಹೋಗುತ್ತಿಲ್ಲ, ಹಾಸ್ಟೆಲ್ ಗೋಡೆಗೆ ಶೌಚಾಲಯದ ಹತ್ತಿರ ನೀರು ಹೊರ ಬರುತ್ತಿದ್ದು, ದುರ್ನಾತ ಭೀರುತ್ತಿದೆ. ಕುಡಿಯುವ ನೀರು ಶುದ್ದವಾಗಿಲ್ಲ, ಆಹಾರ ಉತ್ತಮವಾಗಿಲ್ಲ ಎಂದು ವಿದ್ಯಾರ್ಥಿಗಳ ದೂರು ಆಧರಿಸಿ ಅಧಿಕಾರಿಗಳು ಪರಿಶೀಲಿಸಿ ಸಂಬಂಧಿಸಿದವರನ್ನು ತರಾಟೆ ತೆಗೆದುಕೊಂಡರು.ಎಬಿವಿಪಿ ವಿಭಾಗ ಸಂಚಾಲಕ ಪ್ರಥಮೇಶ ವಾಗ್ಮೊಡೆ, ಎಬಿವಿಪಿ ಸದಸ್ಯರಾದ ಅಪ್ಪು ಚೌಹಾನ್, ದೀಪಕ್ ರಾಠೋಡ್, ಪ್ರವೀಣ್ ರಾಠೋಡ್, ಆಕಾಶ್ ಚೌಹಾನ್ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳಿದ್ದರು.

-----

ಕೋಟ್‌

ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಹಾಗೂ ಪ್ರತ್ಯಕ್ಷವಾಗಿ ಅವ್ಯವಸ್ಥೆಯನ್ನು ನೋಡಿದ್ದೇನೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಹಾಗೂ ವ್ಯವಸ್ಥೆಯ ಕೊರತೆ ಕಂಡುಬಂದಿದೆ. ಅಲ್ಲಿನ ವಾರ್ಡನ್ ಹಾಗೂ ತಾಲೂಕು ಬಿಸಿಎಂ ಅಧಿಕಾರಿಗಳು ನೀಡುವ ವರದಿ ಮೇಲೆ ಮುಂದಿನ ಕ್ರಮಕೈಗೊಳ್ಳುತ್ತೇನೆ. ---ಪಂಕಜ ಜೋಶಿ, ಹಿಂದುಳಿದ ವರ್ಗದ ಜಿಲ್ಲಾ ಕಲ್ಯಾಣಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏತ ನೀರಾವರಿ ಯೋಜನೆಗಳಿಗೆ ಸಿಎಂ ಚಾಲನೆ
ವಿದ್ಯಾರ್ಥಿ, ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಎಸ್ಪಿ ಸಿದ್ದಾರ್ಥ ಪ್ರೇರಣೆ