ಕೊಪ್ಪಳ: ಜಿಲ್ಲೆಯ ಕೊಪ್ಪಳ, ಮುನಿರಾಬಾದ್ ಸೇರಿದಂತೆ ವಿವಿಧೆಡೆ ಮನೆ ಬೀಗ ಮುರಿದು ಕಳ್ಳತನ ಮಾಡಿದ ನಾಲ್ಕು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಕನಕಗಿರಿ ತಾಲೂಕಿನ ಉಪ್ಪನ್ನಮಳ್ಳಿ ಕ್ಯಾಂಪ್ ಪ್ರತಾಪ ಹುಲಗಪ್ಪ ಮುಚಿಗೇರ ಬಂಧಿತ ಆರೋಪಿ. ಆರೋಪಿಗಳಿಂದ ₹4.53 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾದ್ಯಂತ ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಭೇದಿಸಲು ಶತಾಯಗತಾಯ ಶ್ರಮಿಸುತ್ತಿರುವ ಕೊಪ್ಪಳ ಪೊಲೀಸರು, 10 ದಿನಗಳಲ್ಲಿ ನಾಲ್ಕು ಕಳ್ಳತನ ಪ್ರಕರಣ ಪತ್ತೆ ಮಾಡಿದ್ದಾರೆ.
ಕೊಪ್ಪಳ ನಗರ ಠಾಣೆಯಲ್ಲಿ ಎರಡು ಪ್ರಕರಣ, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದವು.ಪಿಐ ಸಂತೋಷ ಹಳ್ಳೂರು, ಪಿಎಸ್ಐ ಶರಣಪ್ಪ ಕಟ್ಟಿಮನಿ ಅವರನ್ನೊಳಗೊಂಡ ತಂಡ ಪ್ರಕರಣ ಭೇದಿಸಿದೆ.