ಕೊಡಗಿನಲ್ಲಿ ಭಾರಿ ಗಾತ್ರದ ಉಡ ಪ್ರತ್ಯಕ್ಷ

KannadaprabhaNewsNetwork | Published : Oct 25, 2023 1:15 AM

ಸಾರಾಂಶ

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದಲ್ಲಿ ಇತ್ತೀಚೆಗೆ 6 ಅಡಿ ಉದ್ದದ ಉಡ ಕಾಣಿಸಿಕೊಂಡಿದೆ. ಕುಂದ ಗ್ರಾಮದ ಕೊಡಂದೇರ ದಿಲೀಪ್ ಎಂಬವರ ಮನೆಯ ಸಮೀಪ ಪ್ರತ್ಯಕ್ಷವಾದ ಉಡವನ್ನು ರಕ್ಷಿಸಿ ಸಮೀಪದ ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ಭಾರಿ ಗಾತ್ರದ ಅಪರೂಪದ ಹಾಗೂ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಉಡ ಕೊಡಗಿನಲ್ಲಿ ಪ್ರತ್ಯಕ್ಷಗೊಂಡಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮದಲ್ಲಿ ಇತ್ತೀಚೆಗೆ 6 ಅಡಿ ಉದ್ದದ ಉಡ ಕಾಣಿಸಿಕೊಂಡಿದೆ. ಕುಂದ ಗ್ರಾಮದ ಕೊಡಂದೇರ ದಿಲೀಪ್ ಎಂಬವರ ಮನೆಯ ಸಮೀಪ ಪ್ರತ್ಯಕ್ಷವಾದ ಉಡವನ್ನು ರಕ್ಷಿಸಿ ಸಮೀಪದ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಜಿಲ್ಲೆಯಲ್ಲಿ ಉಡ ಇದ್ದರೂ ಇಷ್ಟೊಂದು ದೊಡ್ಡ ಗಾತ್ರದ ಉಡ ಇದು ವರೆಗೆ ಪ್ರತ್ಯಕ್ಷಗೊಂಡಿರಲಿಲ್ಲ. ಇದೀಗ ಕಾಣಿಸಿಕೊಂಡಿರುವ ಉಡ ಜಗತ್ತಿನಲ್ಲೇ ಅಪರೂಪ ಎನಿಸುವ ಕೊವೊಡೊ ಡ್ರ್ಯಾಗನ್ ಎಂದು ತಿಳಿದುಬಂದಿದೆ. ಇದರ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Share this article