ಮನುಷ್ಯ ಜೀವಿ ಪರಿಸರದ ಅಂಗ: ಡಾ.ಕೆ.ಎಸ್.ವೆಂಕಪ್ಪ

KannadaprabhaNewsNetwork |  
Published : Feb 07, 2026, 01:15 AM IST
ಿು | Kannada Prabha

ಸಾರಾಂಶ

ಶೃಂಗೇರಿ: ಪ್ರಕೃತಿಯಲ್ಲಿಯ ಜೀವರಾಶಿಗಳಲ್ಲಿ ಮನುಷ್ಯ ಜೀವಿಯೂ ಪರಿಸರದ ಪ್ರಮುಖ ಅಂಗ ಎಂದು ನಿವೃತ್ತ ಕನ್ನಡ ಶಿಕ್ಷಕ ಡಾ.ಕೆ.ಎಸ್.ವೆಂಕಪ್ಪ ಹೇಳಿದರು.

ಶೃಂಗೇರಿ: ಪ್ರಕೃತಿಯಲ್ಲಿಯ ಜೀವರಾಶಿಗಳಲ್ಲಿ ಮನುಷ್ಯ ಜೀವಿಯೂ ಪರಿಸರದ ಪ್ರಮುಖ ಅಂಗ ಎಂದು ನಿವೃತ್ತ ಕನ್ನಡ ಶಿಕ್ಷಕ ಡಾ.ಕೆ.ಎಸ್.ವೆಂಕಪ್ಪ ಹೇಳಿದರು.

ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಗ್ರಾಮದ ಸಿರಿಮನೆ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಇಕೋ ಕ್ಲಬ್ ನಿಂದ ಆಯೋಜಿಸಿದ್ದ ಪರಿಸರ ನೈರ್ಮಲ್ಯ ಕುರಿತ ಮಾಹಿತಿ ಸಂವಾದದಲ್ಲಿ ಮಾತನಾಡಿದರು. ಪ್ರಕೃತಿಯಲ್ಲಿ ಯಾವುದೇ ಏರುಪೇರು ಉಂಟಾದರೂ ಅದು ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಅವುಗಳ ಅಸ್ತಿತ್ವ ನಶಿಸಿ ಹೋಗುವ ಸಾಧ್ಯತೆಗಳಿವೆ. ಪ್ರಕೃತಿ ಜೀವ ಸಂಕುಲದ ಬದುಕಿನ ಮೂಲ. ನೀರು,ಗಾಳಿ ,ಆಹಾರ ಎಲ್ಲವನ್ನು ಪ್ರಕೃತಿ ನೀಡುತ್ತದೆ.

ಇಂದು ಮನುಷ್ಯ ಪ್ರಕೃತಿಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾನೆ. ಪ್ರಕೃತಿ ಮುನಿದರೆ ಜೀವಸಂಕುಲ ನಾಶ ಕಟ್ಟಿಟ್ಟ ಬುತ್ತಿ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಸೀತಾಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ವಿರಬೇಕು. ಸಿರಿಮನೆಯಂತಹ ನಿಸರ್ಗದತ್ತ ವಾತಾವರಣ ಮಕ್ಕಳ ಕಲಿಕೆ ಮೇಲೆ ಉತ್ತಮ ವಾತಾವರಣ ಉಂಟುಮಾಡುತ್ತದೆ ಎಂದರು.ಶಾಲಾ ಮುಖ್ಯ ಶಿಕ್ಷಕ ದಿನೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

6 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಸಿರಿಮನೆಯಲ್ಲಿ ನಡೆದ ಪರಿಸರ ನೈರ್ಮಲ್ಯ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಡಾ.ಕೆ.ಎಸ್.ವೆಂಕಪ್ಪ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ