ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ: ಪವಾಡಶ್ರೀ

KannadaprabhaNewsNetwork |  
Published : Jul 09, 2026, 12:45 AM IST
ಪೋಟೋ 1 : ರೈಲ್ವೆಗೊಲ್ಲಹಳ್ಳಿಯ ಶ್ರೀ ಸತ್ಯಸಾಯಿ ಶತಮಾನೋತ್ಸವ ಭವನದಲ್ಲಿ ಎನ್‍ಪಿಎ ಹಾಗೂ ಗೊಲ್ಲಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್. ಮಲ್ಲಯ್ಯನವರ 56ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಸನ್ಮಾನಿಸಿ ಆಶೀರ್ವಾದ ಪಡೆದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ನಿಶ್ಚಿತ. ಬದುಕಿರುವಷ್ಟು ದಿನ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕೆ ಹೊರೆತು ಕೆಡಕನ್ನು ಮಾಡಬಾರದು. ಜನ ನೆನೆಪಿಸಿಕೊಳ್ಳುವ ಕೆಲಸ ಮಾಡಿದಾಗ ಮಾತ್ರ ಆತ್ಮತೃಪ್ತಿ ದೊರೆಯುತ್ತದೆ ಎಂದು ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು

ದಾಬಸ್‍ಪೇಟೆ: ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ನಿಶ್ಚಿತ. ಬದುಕಿರುವಷ್ಟು ದಿನ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕೆ ಹೊರೆತು ಕೆಡಕನ್ನು ಮಾಡಬಾರದು. ಜನ ನೆನೆಪಿಸಿಕೊಳ್ಳುವ ಕೆಲಸ ಮಾಡಿದಾಗ ಮಾತ್ರ ಆತ್ಮತೃಪ್ತಿ ದೊರೆಯುತ್ತದೆ ಎಂದು ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ರೈಲ್ವೆಗೊಲ್ಲಹಳ್ಳಿಯ ಶ್ರೀ ಸತ್ಯಸಾಯಿ ಶತಮಾನೋತ್ಸವ ಭವನದಲ್ಲಿ ಎನ್‍ಪಿಎ ಹಾಗೂ ಗೊಲ್ಲಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯನವರ 56ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವ, ಸಾರ್ವಜನಿಕ ಪಡಿತರ ವಿತರಣಾ ಕೇಂದ್ರ ಕಟ್ಟಡ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು,

ಮನುಷ್ಯ ಮನುಷ್ಯನ ಸಂಬಂಧಗಳನ್ನು ಅರಿತು ಮತ್ತೊಬ್ಬರಿಗೆ ತೊಂದರೆ ಮಾಡದೆ ಸಾಧ್ಯವಾದಷ್ಟು ಪರರ ಒಳಿತಿಗಾಗಿ ಸೇವೆ ಮಾಡುತ್ತಾ ಬದುಕಿದಾಗ. ಮನುಷ್ಯನಾಗಿ ಹುಟ್ಟಿದಕ್ಕೂ ಸಾರ್ಥಕವಾಗುತ್ತದೆ. ಮಲ್ಲಯ್ಯನವರು ಮಾಜಿ ಸಿಎಂ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿ ಅವರನ್ನು ಹೃದಯದಲ್ಲಿ ಪೂಜಿಸುತ್ತಿದ್ದಾರೆ. ಮಠ, ದೇವಾಲಯಗಳಿಗೆ ಸಹಕಾರ ನೀಡುತ್ತಾ ಬರುತ್ತಿರುವ ಇವರ ಸಮಾಜ ಸೇವೆ ಶ್ಲಾಘನೀಯ ಎಂದರು.

ಮಾಜಿ ಶಾಸಕ ಎಂ.ವಿ.ನಾಗರಾಜು ಮಾತನಾಡಿ, ನಾನು ಶಾಸಕನಾದ ಸಂದರ್ಭದಲ್ಲಿ ಮಲ್ಲಯ್ಯನವರು ಎನ್ ಪಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಪಂ ಅಧ್ಯಕ್ಷರಾಗಿ ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವುದಲ್ಲದೆ, ನೆಲಮಂಗಲ ತಾಲೂಕಿನಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನ ಯಶಸ್ಸು ದೊರಕಲಿ, ನಮ್ಮ ಸಹಕಾರ ಸದಾ ಇರಲಿದೆ ಎಂದು ಹಾರೈಸಿದರು.

ಎನ್‍ಪಿಎ ಹಾಗೂ ಗೊಲ್ಲಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ ಮಾತನಾಡಿ, ನಮ್ಮ ರಾಜಕೀಯ ಗುರುಗಳಾದ ಬಿ.ಎಸ್.ಯಡಿಯೂರಪ್ಪನವರು ಎನ್‌ಪಿಎ ಅಧ್ಯಕ್ಷರನ್ನಾಗಿ ಕೆಲಸ ಮಾಡಲು ಎರಡು ಬಾರಿ ಅವಕಾಶ ಕೊಟ್ಟಿದ್ದರು. ಅದಲ್ಲದೆ ಗೊಲ್ಲಹಳ್ಳಿ ಹಾಗೂ ಅರ್ಜುನ ಬೆಟ್ಟಹಳ್ಳಿ ಗ್ರಾಮದ ಜನತೆಯೂ ನನ್ನನ್ನು ಗ್ರಾ.ಪಂ.ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮದ ಜನತೆಯ ಸಹಕಾರದಿಂದ ಗ್ರಾಮವನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಶ್ರಮಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಗೊಲ್ಲಹಳ್ಳಿ, ಅರ್ಜುನಬೆಟ್ಟಹಳ್ಳಿ ಗ್ರಾಮದ ಎಸ್‍ಎಸ್‍ಎಲ್ ಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಶೇ.85ರಷ್ಟು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ನಂತರ ಸಂಜೆ ಶ್ರೀ ಬೈಲಾಂಜನೇಯ ಕಬಡ್ಡಿ ಕ್ಲಬ್ ವತಿಯಿಂದ ಮಹಿಳಾ ಮತ್ತು ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಜನಸೇವಕ ಚಾರಿಟಬಲ್ ಟ್ರಸ್ಟ್ ನಿರಾಶ್ರಿತರ ಆಶ್ರಮಕ್ಕೆ 56 ಸಾವಿರ ದೇಣಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಹ್ಯಾಡಾಳು ಹರ್ಷ, ಪ್ರಭುದೇವ್, ಎನ್‌ಪಿಎ ಮಾಜಿ ಅಧ್ಯಕ್ಷ ಕೆ.ಪಿ.ಆನಂದ್, ಮುಖಂಡರಾದ ನಾಗರಾಜು, ಗುಬ್ಬಣ್ಣಸ್ವಾಮಿ, ಪ್ರಕಾಶ್, ನಾಗೇಶ್ ನಾಯಕ್, ರಮೇಶ್, ಮಂಜುಳಾ, ಲತಾ, ಗ್ರಾಪಂ ಮಾಜಿ ಸದಸ್ಯೆ ಅನುಸೂಯ ಮಲ್ಲಯ್ಯ, ಪ್ರವೀಣ್, ನವೀನ್ ಸೇರಿದಂತೆ ಅಭಿಮಾನಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಟೋ 4 :

ರೈಲ್ವೆ ಗೊಲ್ಲಹಳ್ಳಿಯ ಸತ್ಯಸಾಯಿ ಶತಮಾನೋತ್ಸವ ಭವನದಲ್ಲಿ ಎನ್‍ಪಿಎ ಹಾಗೂ ಗೊಲ್ಲಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್. ಮಲ್ಲಯ್ಯನವರ 56ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿಯನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲಿಲ್ಲ: ಎನ್. ರವಿಕುಮಾರ್ ಆರೋಪ
ಯುವಕರು ಶಿಸ್ತುಬದ್ಧ ಜೀವನಶೈಲಿ ರೂಪಿಸಿಕೊಳ್ಳಲಿ: ವೆಂಕಟೇಶ್