ಕನ್ನಡಪ್ರಭ ವಾರ್ತೆ ಶಿರಾ
ಮನುಷ್ಯನು ಯಾವಾಗಲೂ ಸದ್ಗುಣ, ಸಂಯಮ, ಶಾಂತಿಯಿಂದ ಭಗವಂತನಲ್ಲಿ ಭಕ್ತಿ, ಪ್ರೀತಿ, ವಾತ್ಸಲ್ಯವನ್ನು ಇಟ್ಟು ಸರಳವಾಗಿ ಜೀವನ ಮಾಡುವ ಕಲೆಯನ್ನು ತಿಳಿಯುತ್ತಾನೋ ಆಗ ಈ ಜನ್ಮ ಪಾವನವಾಗುತ್ತದೆ. ಶ್ರೀ ಸತ್ಯನಾರಾಯಣ ಸ್ವಾಮಿಯಲ್ಲಿ ನಾವು ಜ್ಞಾನವನ್ನೇ ನೀಡುವಂತೆ ಬೇಡಬೇಕು. ನಮ್ಮನ್ನು ಜ್ಞಾನಿಯನ್ನಾಗಿ ಮಾಡು, ಸಜ್ಜನನನ್ನಾಗಿ ಮಾಡು ಸನ್ಮಾರ್ಗದಲ್ಲಿ ನಡೆಸುವಂತೆ ಬೇಡಬೇಕು. ನಮ್ಮಲ್ಲಿರುವ ಶಾಂತಿ, ದಯೇ ಸದ್ಭಾವವು ಸದಾ ನಮ್ಮನ್ನು ಕಾಪಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಸದಾಶಿವ ಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಕೆ.ರಾಮಚಂದ್ರಗುಪ್ತ, ಬೆಸ್ಕಾಂ ಇಲಾಖೆಯ ಲಕ್ಷ್ಮಿಕಾಂತ್, ಕನಕ ಬ್ಯಾಂಕ್ ವ್ಯವಸ್ಥಾಪಕ ಆರ್.ಲಕ್ಷ್ಮಣ್, ನಗರಸಭಾ ಸದಸ್ಯರಾದ ತೇಜು ಭಾನುಪ್ರಕಾಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್.ಜಯಪಾಲ್, ಮಂಜು ಶ್ರೀ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಮಹಾಲಿಂಗಪ್ಪ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷೆ ರಾಧಾ ರವಿ, ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ, ಪತಂಜಲಿ ಯೋಗ ಶಿಕ್ಷಕಿ ಕವಿತಾ, ವಲಯ ಮೇಲ್ವಿಚಾರಕಿ ಮೀನಾ ಸೇರಿದಂತೆ ಯೋಜನೆ ಕಾರ್ಯಕರ್ತರು ಮತ್ತು ಸ್ವ-ಸಹಾಯ ತಂಡದ ಸದಸ್ಯರು ಭಾಗವಹಿಸಿದ್ದರು.