ಕನ್ನಡಪ್ರಭ ವಾರ್ತೆ ಮದ್ದೂರು
ಬೆಂಗಳೂರಿಂದ ಬೆಳಗ್ಗೆ 9:30 ಸುಮಾರಿಗೆ ದೇಗುಲಕ್ಕೆ ಆಗಮಿಸಿದ ಶ್ರೀಗಳನ್ನು ದೇಗುಲದ ಪ್ರಧಾನ ಅರ್ಚಕ ಪ್ರದೀಪ ಆಚಾರ್ಯ, ಸಹ ಅರ್ಚಕ ಸುರೇಶ ಆಚಾರ್ಯ, ಮನ್ಮುಲ್ ಮಾಜಿ ನಿರ್ದೇಶಕಿ ರೂಪ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಜಿ.ಎಂ.ನರಸಿಂಹಮೂರ್ತಿ, ಡಾ.ಯು.ವಿ.ಹೊಳ್ಳ, ಕ್ರಿಕೆಟ್ ಆಟಗಾರ ವೈಶಾಕ್ ವಿಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ಸೇರಿದಂತೆ ದೇಗುಲದ ಸಿಬ್ಬಂದಿ ಮಂಗಳವಾದ್ಯ ಸಮೇತ ಪೂರ್ಣ ಕುಂಭ ಸ್ವಾಗತ ನೀಡಿದರು. ನಂತರ ಶ್ರೀಗಳು ಹೊಳೆ ಆಂಜನೇಯ ಸ್ವಾಮಿ ಮೂಲ ವಿಗ್ರಹಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿ ನಮಸ್ಕರಿಸಿದರು.
ಕ್ರೀಡಾ ಬಳಗದ ನೂತನ ಅಧ್ಯಕ್ಷರಾಗಿ ವಿ.ಕೆ.ಜಗದೀಶ್ ಆಯ್ಕೆಮದ್ದೂರು: ಕ್ರೀಡಾ ಬಳಗದ ನೂತನ ಅಧ್ಯಕ್ಷರಾಗಿ ವಿಶ್ವವಿದ್ಯಾನಿಲಯದ ಸೆನೆಟ್ ಮಾಜಿ ಸದಸ್ಯ ವಿ.ಕೆ.ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಮಳವಳ್ಳಿ ರಸ್ತೆ ಎಂ.ಕೆ. ಬಿ.ಸಭಾಂಗಣದಲ್ಲಿ 2025- 26ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ವಿ.ಕೆ.ಜಗದೀಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಹಾಪೋಷಕರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಜಿ.ಬಿ.ಸಿದ್ದರಾಮು, ಕಾರ್ಯದರ್ಶಿಯಾಗಿ ಬಿ.ಎಸ್.ಬೋರೇಗೌಡ, ಜಂಟಿ ಕಾರ್ಯದರ್ಶಿ ಟಿ.ಎಸ್. ಜಯರಾಮು , ಖಜಾಂಚಿ ಕೆ.ಪುಟ್ಟಸ್ವಾಮಿ, ಕ್ರೀಡಾ ಕಾರ್ಯದರ್ಶಿ ಎಂ.ಎಚ್.ಸಿದ್ದೇಗೌಡ, ನಿರ್ದೇಶಕರಾಗಿ ಎಂ. ಪುಟ್ಟಸ್ವಾಮಿ, ಎಸ್. ಡಿ.ಬಸವರಾಜು, ಎಚ್. ಪುಟ್ಟರಾಜು , ಸಿ. ಕೆ. ರವಿ, ವಿ.ಟಿ.ರಾಮಕೃಷ್ಣ ಹಾಗೂ ಜಿ.ಟಿ.ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ವಕೀಲ ಎಚ್.ದೇವರಾಜು ಕಾರ್ಯನಿರ್ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಪ್ರೊ.ಕಾಂತರಾಜು, ಪದಾಧಿಕಾರಿಗಳಾದ ಸಿ.ಬಿ.ಕುಮಾರ್, ಎಚ್. ಕೆ.ನಾರಾಯಣ್, ಸಿದ್ದಯ್ಯ, ಜಿ.ಜೆ ಶಿವಣ್ಣ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.