ಮಾನವ ಕಳ್ಳ ಸಾಗಾಣೆ ದೊಡ್ಡ ಸಾಮಾಜಿಕ ಪಿಡುಗು: ಆಶಾಲತಾ ಪುಟ್ಟೇಗೌಡ

KannadaprabhaNewsNetwork |  
Published : Jan 13, 2025, 12:45 AM IST
12ಕೆಎಂಎನ್ ಡಿ14 | Kannada Prabha

ಸಾರಾಂಶ

ಮಾನವ ಕಳ್ಳ ಸಾಗಣಿಕೆ ಸಮಾಜದಲ್ಲಿ ಬಹುದೊಡ್ಡ ಪಿಡುಗು. ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರು ಸೇರಿದಂತೆ ಶಿಕ್ಷಣದಿಂದ ವಂಚಿತ ಹಾಗೂ ಆರ್ಥಿಕ ದುರ್ಬಲರು ಸುಲಭವಾಗಿ ಮಾನವ ಕಳ್ಳ ಸಾಗಣೆಕೆ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಇವರ ರಕ್ಷಣೆ ಮತ್ತು ಸಮಾಜದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆಗಟ್ಟಲು ಜಾಗೃತಿ ಜಾಥ ಹಮ್ಮಿಕೊಂಡಿರುವುದು ಬಹಳ ಅರ್ಥಗರ್ಭಿತವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಾನವ ಕಳ್ಳ ಸಾಗಣಿಕೆಯು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ ಎಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಜಿಲ್ಲಾ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಹೇಳಿದರು.

ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ರಾಷ್ಟ್ರೀಯ ಮಾನವ ಕಳ್ಳ ಸಾಗಣೆ ಜಾಗೃತಿ ದಿನದ ಅಂಗವಾಗಿ ಮೈಸೂರಿನ ಕಡಕೋಳದ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್‌ಎಸ್‌ಎಸ್ ಘಟಕ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ರೋಟರಿ , ಆಚೀವರ್ಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಾನವ ಕಳ್ಳ ಸಾಗಣೆ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಮಾನವ ಕಳ್ಳ ಸಾಗಣಿಕೆ ಸಮಾಜದಲ್ಲಿ ಬಹುದೊಡ್ಡ ಪಿಡುಗು. ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರು ಸೇರಿದಂತೆ ಶಿಕ್ಷಣದಿಂದ ವಂಚಿತ ಹಾಗೂ ಆರ್ಥಿಕ ದುರ್ಬಲರು ಸುಲಭವಾಗಿ ಮಾನವ ಕಳ್ಳ ಸಾಗಣೆಕೆ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ಇವರ ರಕ್ಷಣೆ ಮತ್ತು ಸಮಾಜದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆಗಟ್ಟಲು ಜಾಗೃತಿ ಜಾಥ ಹಮ್ಮಿಕೊಂಡಿರುವುದು ಬಹಳ ಅರ್ಥಗರ್ಭಿತವಾಗಿದೆ ಎಂದರು.

ಎನ್‌ಎಸ್‌ಎಸ್ ಅಧಿಕಾರಿ ಡಾ. ರಾಘವೇಂದ್ರ ಮಾತನಾಡಿ, ಮಾನವ ಕಳ್ಳಸಾಗಾಣಿಕೆಯು ಆಧುನಿಕ ಯುಗದಲ್ಲಿನ ಗುಲಾಮಗಿರಿಯ ಒಂದು ರೂಪವಾಗಿದೆ. ಪ್ರತಿ ವರ್ಷ ಪ್ರಪಂಚದಲ್ಲಿನ ಲಕ್ಷಾಂತರ ಅಮಾಯಕ ಜನರು ಈ ಮಾನವ ಕಳ್ಳಸಾಗಾಣಿಕೆಯ ಕೂಪಕ್ಕೆ ಬಲಿಯಾಗಿತ್ತಿದ್ದಾರೆ. ಈ ಗುಲಾಮಗಿರಿಯಿಂದ ಜಗತ್ತನ್ನು ಮುಕ್ತಗೊಳಿಸಲು ಮಾನವ ಕಳ್ಳಸಾಗಾಣಿಕೆ ವಿರುದ್ಧದ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯಾಧ್ಯಕ್ಷ ವಿಜಯ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸರಸ್ವತಿ, ರೋಟರಿ ನಿರ್ದೇಶಕರಾದ ನಾಗೇಂದ್ರ, ಗಾಯಿತ್ರಿ, ಅಚೀವರ್ಸ್ ಅಕಾಡೆಮಿ ನಿರ್ದೇಶಕರಾದ ಗುರುಪ್ರಸಾದ್, ದೇವರಾಜ್, ಮಧುರ, ಶಿಕ್ಷಕರು, ಡಾ. ಶಬಾನಾ, ಮುರುಳಿ, ದುಷ್ಯಂತ್ ಸೇರಿದಂತೆ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ