ಕಾರ್ಕಳ ತಾಲೂಕು 20ನೇ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಜನಪದರ ಬದುಕು ಮೌಲ್ಯದಿಂದ ಕೂಡಿದ್ದರೆ ಅದೇ ದೊಡ್ಡ ಸಾಹಿತ್ಯ. ಸಾಹಿತ್ಯದ ಆಶಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ಮುಂದಿನ ಪೀಳಿಗೆಗೆ ಕಟ್ಟಿ ಕೊಡುವುದಾಗಿದೆ ಎಂದು ಜನಪದ ವಿದ್ವಾಂಸ ಕೆ.ಗುಣಪಾಲ ಕಡಂಬ ಹೇಳಿದರು.
ಅವರು ಕಾರ್ಕಳ ತಾಲೂಕಿನ ಶಿರ್ಲಾಲು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 20ನೇ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಸಾಹಿತ್ಯ ಬದುಕನ್ನು ಕಟ್ಟಿ ಕೊಡುತ್ತದೆ. ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿ ಬೆಳೆಸುಕೊಳ್ಳಬೇಕು ಎಂದು ಹೇಳಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸೂಡ ಸದಾನಂದ ಶೆಣೈ, ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಜಾನಪದ ವಿದ್ವಾಂಸ ಕೆ. ಗುಣಪಾಲ ಕಡಂಬ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.
* ಕೃತಿ ಬಿಡುಗಡೆ
* ಸಾಧಕರಿಗೆ ಸನ್ಮಾನ
---------------------
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ವಾರಧಿ, ಸಾಹಿತ್ಯ ಸಂಸ್ಕೃತಿ, ಸಾಹಿತ್ಯ ಮಂಥನ ಎಂಬ ಮೂರು ವಿಭಾಗದಲ್ಲಿ ಗೋಷ್ಠಿಗಳು ನಡೆಯಿತು.
----------------------
ಸಾಹಿತ್ಯ, ಸಂಸ್ಕೃತಿ ನಡುವೆ ಅವಿನಾಭಾವ ಸಂಬಂಧ: ಸುನಿಲ್ ಕುಮಾರ್‌ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭಸಾಹಿತ್ಯ ಹಾಗೂ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಒಂದನ್ನೊಂದು ಬಿಟ್ಟು ಇರಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಅಭಿರುಚಿ ಶ್ರೀಮಂತವಾಗಿರುವಲ್ಲಿ ಭಾರತೀಯ ಸಂಸ್ಕೃತಿ ಅಡಗಿರುತ್ತದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.ಅವರು ಕಾರ್ಕಳ ಶಿರ್ಲಾಲು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಶಿರ್ಲಾಲು ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಲ ಮಾತನಾಡಿ, ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಸಾಹಿತ್ಯಿಕವಾಗಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುತ್ತಾ ಸಾಗಿದರೆ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಸಮ್ಮೇಳನಾಧ್ಯಕ್ಷ ಕೆ. ಗುಣಪಾಲ ಕಡಂಬ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಶರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಶೀತಲ್ ಕುಮಾರ್ ಜೈನ್, ಕಾರ್ಕಳ ರಂಗ ಸಂಸ್ಕೃತಿಯ ಅಧ್ಯಕ್ಷ ನಿತ್ಯಾನಂದ ಪೈ, ಕ್ರಿಯೇಟಿವ್ ಕಾಲೇಜ್ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್., ಎಂಸಿಎಫ್‌ನ ಕೀರ್ತನ್ ಕುಮಾರ್, ಕಸಾಪ ಜಿಲ್ಲಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ, ಶಾಂತಿ ರಾಜ್ ಜೈನ್ ಉಪಸ್ಥಿತರಿದ್ದರು.
* ಸನ್ಮಾನ ಕಾರ್ಯಕ್ರಮಜನಾರ್ದನ ಇಡ್ಯಾ (ವೈಜ್ಞಾನಿಕ/ಬಾಹ್ಯಾಕಾಶ ಕ್ಷೇತ್ರ), ಧರಣೇಂದ್ರ ಜೈನ್ ಶಿರ್ಲಾಲು (ಕೃಷಿ), ಸುಶೀಲಾ ಪಾಣಾರ (ಜಾನಪದ ಕ್ಷೇತ್ರ), ವಿಠಲ ಶೆಟ್ಟಿ (ನಾಟಿವೈದ್ಯ), ಸಿಲ್ವೆಸ್ಟರ್ ಡಿಮೆಲ್ಲೊ (ಸಂಕೀರ್ಣ), ಸಮದ್ ಖಾನ್ (ಸಂಘಟನೆ), ಮೊಹಮ್ಮದ್ ಶರೀಫ್ (ಪತ್ರಿಕಾ ರಂಗ), ರೇಷ್ಮಾ ಗೊರೂರು (ಸಾಹಿತ್ಯ), ಅವಿನಾಶ್ ಜಿ. ಶೆಟ್ಟಿ (ಸಮಾಜಸೇವೆ), ಕ್ರಿಯೇಟಿವ್ ಪುಸ್ತಕ ಮನೆಯ ಅಶ್ವಥ್ ಎಸ್.ಎಲ್. ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಅರುಣ್ ಕುಮಾರ್ ಸ್ವಾಗತಿಸಿದರು. ಸುಧಾಕರ ಪೊಸ್ರಾಲ್ ವಂದಿಸಿದರು.* ಪುರ ಮೆರವಣಿಗೆ:
ಶಿರ್ಲಾಲು ಭಗವಾನ್ ಅನಂತನಾಥ ಸ್ವಾಮಿ ಬಸದಿಯಲ್ಲಿ ಕರ್ಣಾಟಕ ಬ್ಯಾಂಕ್ ಶಿರ್ಲಾಲು ಶಾಖಾ ಪ್ರಬಂಧಕ ಉದಯ ಶಂಕರ್, ಸಮ್ಮೇಳನದ ಪುರಮೆರವಣಿಗೆಗೆ ಚಾಲನೆ ನೀಡಿದರು. ಹುಲಿಕುಣಿತ, ಮಕ್ಕಳ ಬ್ಯಾಂಡ್ ಸೆಟ್, ಕೇರಳ ಚಂಡೆ, ತಟ್ಟಿರಾಯಗಳು, ಕೀಲುಕುದುರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಸಾಥ್ ನೀಡಿದವು. ಸುಮಾರು ಎರಡು ಕಿ.ಮೀ. ಕ್ರಮಿಸಿ ಕಾಲೇಜಿನ ಮೈದಾನವರೆಗೆ ಸಾಗಿಬಂತು.ಈ ಸಂದರ್ಭ ನಂದಳಿಕೆ ಶ್ರೀಕಾಂತ್ ಭಟ್ ಅವರ ಪಾಂಡು ಕೋಣವನ್ನು ವಿಶೇಷ ಅಲಂಕರಿಸಿ ಸನ್ಮಾನಿಸಲಾಯಿತು.