ಸಮಾನತೆ ಸಾರಿದ ಮಾನವತಾವಾದಿ ಬಸವಣ್ಣ

KannadaprabhaNewsNetwork | Published : Feb 19, 2024 1:30 AM

ಸಾರಾಂಶ

ನೆಲಮಂಗಲ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರಿದ ಮಹಾನ್ ಮಾನವತಾವಾದಿ ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣ ಅವರ ವಚನಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಘಟಕ ನಿರ್ದೇಶಕ ಎನ್.ಎಸ್. ನಟರಾಜು ತಿಳಿಸಿದರು.

ನೆಲಮಂಗಲ: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರಿದ ಮಹಾನ್ ಮಾನವತಾವಾದಿ ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣ ಅವರ ವಚನಗಳು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಘಟಕ ನಿರ್ದೇಶಕ ಎನ್.ಎಸ್. ನಟರಾಜು ತಿಳಿಸಿದರು.

ನಗರದಲ್ಲಿ ತಾಲೂಕು ಆಡಳಿತ ಹಾಗೂ ವೀರಶೈವ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ಸಿದ್ಧಾಂತದಡಿ ಬಸವಣ್ಣ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಮಹಾ ಪುರುಷರು. ಸಮಾಜದಲ್ಲಿ ಪರಿವರ್ತನೆ, ಹಸಿದವರಿಗೆ ಅನ್ನ, ಅನಕ್ಷರಸ್ಥರಿಗೆ ಅಕ್ಷರ ಜ್ಞಾನ, ಸಮಸಮಾಜ ನಿರ್ಮಾಣಕ್ಕೆಶ್ರಮಿಸಿದರು. ಅಂತಹ ಮಹಾ ವ್ಯಕ್ತಿಯ ಭಾವಚಿತ್ರ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಅಳವಡಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಮನವಿ ಮೇರೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದರು.

ಶಾಸಕ ಶ್ರೀನಿವಾಸ್ ಮಾತನಾಡಿ, ಬುದ್ಧ, ಬಸವಣ್ಣ ಸೇರಿದಂತೆ ಅಂಬೇಡ್ಕರ್ ಅವರನ್ನು ಬಿಟ್ಟು ದೇಶದ ಇತಿಹಾಸವನ್ನು ಮಾತನಾಡಲು ಸಾಧ್ಯವಿಲ್ಲ. ಕಾಯಕಯೋಗಿ ಬಸವಣ್ಣ ಅವರು ಸಮಾಜದಲ್ಲಿದ್ದ ಅಸ್ಪೃಶ್ಯತೆ, ಅಂಧಕಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಅವರ ಕಾಯಕ ಹಾಗೂ ದಾಸೋಹ ತತ್ವವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ತಾಲೂಕಿನಲ್ಲಿ ವೀರಶೈವ ಸಮುದಾಯ ನನ್ನನ್ನು ಆಶೀರ್ವದಿಸಿದ್ದು, ಅವರ ಋಣ ತೀರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ವೀರಶೈವ ಸಮುದಾಯದ ಒಬ್ಬರಿಗೆ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕ ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರದೀಪ್ ಅವರು, 500ಕ್ಕೂ ಹೆಚ್ಚು ಬಸವಣ್ಣ ಅವರ ಕರ್ತಾರನ ಕಮ್ಮಟ ಎಂಬ ಪುಸ್ತಕವನ್ನು ವಿತರಿಸಿದರು. ತಹಸೀಲ್ದಾರ್ ಅಮೃತ್‌ ಆತ್ರೇಶ್, ವಿಶೇಷ ತಹಸೀಲ್ದಾರ್ ಭಾಗ್ಯ, ತಾಪಂ ಇಒರಿ ಎಲ್.ಮಧು, ಬಿಇಒ ಎಂ.ಹೆಚ್.ತಿಮ್ಮಯ್ಯ, ನಗರಸಭೆ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಪೂರ್ಣಿಮಾ, ಲೋಲಾಕ್ಷಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಅಣ್ಣಪ್ಪ, ಮಾಜಿ ಅಧ್ಯಕ್ಷ ಶಾಂತಕುಮಾರ್, ನಿರ್ದೇಶಕ ಮಂಜುನಾಥ್, ಲೋಕೇಶ್, ರಾಜಮ್ಮ, ರುದ್ರೇಶ್ವರ ಕ್ರೆಡಿಕ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ದಯಾಶಂಕರ್, ವೀರಶೈವ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗರಾಜು, ಮುಖಂಡ ಉಮಾಶಂಕರ್, ಬಾವಿಕೆರೆ ಗಂಗರಾಜು, ಚನ್ನಬಸಪ್ಪ, ಶ್ರೀಗಣೇಶ್ ಇತರರು ಉಪಸ್ಥಿತರಿದರು. 17ಕೆಎನ್‌ಎಲ್‌ಎಮ್‌1-

ನೆಲಮಂಗಲದಲ್ಲಿ ತಾಲೂಕು ಕಚೇರಿಯಲ್ಲಿ ಶಾಸಕ ಶ್ರೀನಿವಾಸ್ ಬಸವಣ್ಣ ಅವರ ಭಾವಚಿತ್ರ ಅನಾವರಣಗೊಳಿಸಿದರು. ತಹಸೀಲ್ದಾರ್ ಅಮೃತ್ ಆತ್ರೇಶ್ ಇತರರಿದ್ದರು.

Share this article