ಮಾನವೀಯತೆ ಮೆರೆದ ಬಸ್‌ ಚಾಲಕ, ನಿರ್ವಾಹಕ

KannadaprabhaNewsNetwork | Published : Oct 29, 2023 1:00 AM

ಸಾರಾಂಶ

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಕರುಣಾಮಯಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ, ತುಮಕೂರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಕರುಣಾಮಯಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.ರಾಯಚೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಲ್ಲಿದ್ದ 47 ವರ್ಷದ ಮಹಿಳೆಗೆ ಶ್ವಾಸಕೋಶದ ಸಮಸ್ಯೆ ಯಿಂದ ಉಸಿರಾಟ ಏರುಪೇರಾಯಿತು. ಇದನ್ನು ಗಮನಿಸಿದ ನಿರ್ವಾಹಕ ಹಾಗೂ ಚಾಲಕ ಕೂಡಲೇ ಆಸ್ಪತ್ರೆಯತ್ತ ಬಸ್ ಚಲಾಯಿಸಿದರು. ತುಮಕೂರಿನ ಶಿರಾ ಗೇಟ್ ಸಮೀಪದ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ. ಇವರಿಬ್ಬರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this article