೨೧ಕ್ಕೆ ಬೇಡ ಜಂಗಮ ಸಮಾಜದ ವಾರ್ಷಿಕ ಮಹಾಸಭೆ: ಸೋಮಶೇಖರಯ್ಯ

KannadaprabhaNewsNetwork |  
Published : Jan 17, 2024, 01:49 AM ISTUpdated : Jan 17, 2024, 01:50 AM IST
16ಎಚ್ಎಸ್ಎನ್13 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೇಡ ಜಂಗಮ ಸಮಾಜದ ಸಮಾಜದ ತಾಲೂಕು ಅಧ್ಯಕ್ಷ ಸೋಮಶೇಖರಯ್ಯ. | Kannada Prabha

ಸಾರಾಂಶ

ಹಾಸನ ತಾಲೂಕಿನ ದೊಡ್ಡಪುರದಲ್ಲಿರುವ ಶ್ರೀ ಉದ್ಬವ ರಾಮೇಶ್ವರ ವಿಪ್ರ ಸಭಾ ಭವನದಲ್ಲಿ ಜನವರಿ ಇಪ್ಪತ್ತೊಂದರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ತಾಲೂಕು ಬೇಡ ಜಂಗಮ ಸಮಾಜದ ಜಾಗೃತಿ ಕಾರ್ಯಕ್ರಮ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕರೆಯಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಸೋಮಶೇಖರಯ್ಯ ತಿಳಿಸಿದರು.

ಸಮಾಜದ ತಾಲೂಕು ಅಧ್ಯಕ್ಷ ಮಾಹಿತಿ

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ದೊಡ್ಡಪುರದಲ್ಲಿರುವ ಶ್ರೀ ಉದ್ಬವ ರಾಮೇಶ್ವರ ವಿಪ್ರ ಸಭಾ ಭವನದಲ್ಲಿ ಜನವರಿ ೨೧ ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ತಾಲೂಕು ಬೇಡ ಜಂಗಮ ಸಮಾಜದ ಜಾಗೃತಿ ಕಾರ್ಯಕ್ರಮ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕರೆಯಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಸೋಮಶೇಖರಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘವನ್ನು ರಚನೆ ಮಾಡಲಾಗಿದೆ. ಎಲ್ಲಾರು ಒಟ್ಟಾಗುವುದರ ಮೂಲಕ ಸಮಾಜದ ಶ್ರೇಯಸ್ಸಿಗೆ ಮುಂದಾಗಬೇಕಾಗಿದೆ. ಜನವರಿ ೨೧ ರಂದು ಬೆಳಿಗ್ಗೆ ಮಡೆಯುವ ಸರ್ವ ಸದಸ್ಯರ ಮಹಾಸಭೆಯಲ್ಲಿ ಹಾಸನಾಂಬೆ ತಾಲೂಕಿನ ಕಾರ್ಜುವಳ್ಳಿ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಹಿರೇಮಠ ಸಂಸ್ಥಾನದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಸಮಾಜದ ಜಾಗೃತಿ ಕಾರ್ಯಕ್ರಮ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಜರುಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಹಾವೇರಿಯ ಬೇಡ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಡಿ. ಹಿರೇಮಠ್, ಚಿಕ್ಕಮಗಳೂರು ಡಿವೈಪಿಸಿ ಉಪನಿರ್ದೇಶಕ ಎಸ್ ರುದ್ರೇಶ್, ಬೆಂಗಳೂರು ಮೇಘನಾ ಅಡ್ವರ್ ಟೈಸಿಂಗ್ ನ ಕೆ.ಆರ್. ಚಂದ್ರಶೇಖರ್, ಸೆರಾಮಿಕ್ ಉದ್ಯಮಿ ಎನ್.ಡಿ. ಚಂದ್ರಶೇಖರ್ ಇತರರು ಭಾಗವಹಿಸಲಿದ್ದಾರೆ. ಸಮಸ್ತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಸನ ತಾಲೂಕು ಬೇಡ ಜಂಗಮ ಸಮಾಜದ ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಸಂಚಾಲಕ ಟಿ.ಎನ್. ರಘು, ಕಾರ್ಯದರ್ಶಿ ಧರಣೇಶ್ ಕುಮಾರ್ ಉಪಸ್ಥಿತರಿದ್ದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೇಡ ಜಂಗಮ ಸಮಾಜದ ಸಮಾಜದ ತಾಲೂಕು ಅಧ್ಯಕ್ಷ ಸೋಮಶೇಖರಯ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!